ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

14 ವರ್ಷಗಳಿಂದ ನಿರಂತರ ಲಾಭ! ಸದಸ್ಯರ ವಿಶ್ವಾಸಕ್ಕೆ ಮಾದರಿಯಾದ ಶಿವ ಪತ್ತಿನ ಸಹಕಾರ ಸಂಘ: 2025-26ನೇ ಸಾಲಿನಲ್ಲಿ ₹64.91 ಲಕ್ಷ ನಿವ್ವಳ ಲಾಭ: ₹23 ಕೋಟಿ ಠೇವಣಿ ಸಂಗ್ರಹ, ₹14.25 ಕೋಟಿ ಸಾಲ ವಿತರಣೆ: ಅಧ್ಯಕ್ಷ ಹೆಚ್.ಇ. ಗಡ್ಲಬಸಪ್ಪ

On: September 22, 2026 5:17 PM
Follow Us:

ಶಿವಮೊಗ್ಗ: ಸಹಕಾರ ಕ್ಷೇತ್ರದಲ್ಲಿ ಆರಂಭವಾದ ಸಂಸ್ಥೆಯೊಂದು ವರ್ಷದಿಂದ ವರ್ಷಕ್ಕೆ ಬೆಳೆದು, ಸದಸ್ಯರ ವಿಶ್ವಾಸವನ್ನು ಗಳಿಸಿ, ನಿರಂತರ ಲಾಭದ ಹಾದಿಯಲ್ಲಿ ಮುನ್ನಡೆಯುವುದು ಸಾಮಾನ್ಯ ಸಾಧನೆಯಲ್ಲ. ಆರಂಭದ ದಿನಗಳಿಂದಲೇ ಸದಸ್ಯರ ಅಗತ್ಯಗಳಿಗೆ ಸ್ಪಂದಿಸುತ್ತಾ, ಜನಸ್ನೇಹಿ ಸೇವೆ, ಶಿಸ್ತುಬದ್ಧ ಆಡಳಿತ ಹಾಗೂ ಆರ್ಥಿಕ ನಿರ್ವಹಣೆಯ ಮೂಲಕ ತನ್ನದೇ ಆದ ಛಾಪು ಮೂಡಿಸಿರುವ ಶಿವ ಪತ್ತಿನ ಸಹಕಾರ ಸಂಘ ನಿಯಮಿತ, ಶಿವಮೊಗ್ಗ, ಇದೀಗ 14 ವರ್ಷಗಳ ನಿರಂತರ ಲಾಭದ ಸಾಧನೆಯೊಂದಿಗೆ ಮತ್ತೊಂದು ಮೈಲಿಗಲ್ಲು ತಲುಪಿದೆ.

ಸದಸ್ಯರೇ ಸಂಘದ ಶಕ್ತಿ, ಅವರ ವಿಶ್ವಾಸವೇ ಸಂಘದ ಬಂಡವಾಳ ಎಂಬ ಆಶಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಶಿವ ಪತ್ತಿನ ಸಹಕಾರ ಸಂಘ, ಸದಸ್ಯರ ಅಗತ್ಯಕ್ಕೆ ತಕ್ಕಂತೆ ಸಾಲ ಸೌಲಭ್ಯ, ಠೇವಣಿ ಸೇವೆ ಹಾಗೂ ವಿವಿಧ ಸಹಕಾರ ಚಟುವಟಿಕೆಗಳನ್ನು ಒದಗಿಸುತ್ತಾ ಜನಸ್ನೇಹಿ ಸಹಕಾರ ಸಂಘವಾಗಿ ಗುರುತಿಸಿಕೊಂಡಿದೆ. ಸಂಘದ ಅಭಿವೃದ್ಧಿಯಲ್ಲಿ ಸದಸ್ಯರ ಪಾಲ್ಗೊಳ್ಳುವಿಕೆ ಮತ್ತು ಆಡಳಿತ ಮಂಡಳಿಯ ಸಮರ್ಥ ನಿರ್ವಹಣೆ ಪ್ರಮುಖ ಪಾತ್ರ ವಹಿಸಿದ್ದು, ಕಳೆದ 14 ವರ್ಷಗಳಿಂದ ನಿರಂತರವಾಗಿ ಲಾಭ ಗಳಿಸಿರುವುದು ಸಂಘದ ಆರ್ಥಿಕ ಶಿಸ್ತಿಗೆ ಸಾಕ್ಷಿಯಾಗಿದೆ.

ವಿನೋಬನಗರದ ಶುಭಮಂಗಳ ಕಲ್ಯಾಣ ಮಂದಿರದಲ್ಲಿ ಸೆ.22ರಂದು ನಡೆದ ಸಂಘದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಹೆಚ್.ಇ. ಗಡ್ಲಬಸಪ್ಪ, ಹೊಳೆಬೆಳಗಲು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಹೆಚ್.ಇ. ಗಡ್ಲಬಸಪ್ಪ ಅವರು ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿ, 2025-26ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಗೆ ಆಗಮಿಸಿರುವ ಎಲ್ಲ ಸದಸ್ಯರನ್ನು ಆಡಳಿತ ಮಂಡಳಿಯ ಪರವಾಗಿ ಆತ್ಮೀಯವಾಗಿ ಸ್ವಾಗತಿಸಿದರು.

“ಸದಸ್ಯರ ವಿಶ್ವಾಸವೇ ಸಂಘದ ನಿಜವಾದ ಶಕ್ತಿ. ಆ ವಿಶ್ವಾಸವನ್ನು ಉಳಿಸಿಕೊಂಡು, ಸದಸ್ಯರ ಅಗತ್ಯಗಳಿಗೆ ಸ್ಪಂದಿಸುವುದು ನಮ್ಮ ಆಡಳಿತ ಮಂಡಳಿಯ ಪ್ರಮುಖ ಉದ್ದೇಶ” ಎಂದು ಅವರು ಹೇಳಿದರು.

ಶಿವ ಪತ್ತಿನ ಸಹಕಾರ ಸಂಘವು 24-05-2013ರಂದು ಶ್ರೀ ತರಳಬಾಳು ಜಗದ್ಗುರು ಶ್ರೀ ಶ್ರೀ ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಉದ್ಘಾಟನೆಗೊಂಡು ವ್ಯವಹಾರ ಪ್ರಾರಂಭಿಸಿತು. ಅಂದಿನಿಂದ ಇಂದಿನವರೆಗೆ ಸಂಘವು ಸದಸ್ಯರ ಹಿತವನ್ನು ಕೇಂದ್ರವಾಗಿಟ್ಟುಕೊಂಡು ತನ್ನ ಸೇವೆಯನ್ನು ವಿಸ್ತರಿಸಿಕೊಂಡು ಬಂದಿದೆ.

ಆರಂಭದಿಂದಲೇ ಆರ್ಥಿಕ ಶಿಸ್ತು, ಸದಸ್ಯರ ಸಹಕಾರ ಮತ್ತು ಆಡಳಿತ ಮಂಡಳಿಯ ನಿರಂತರ ಪರಿಶ್ರಮದ ಫಲವಾಗಿ ಸಂಘವು ಸತತವಾಗಿ 14 ವರ್ಷಗಳಿಂದ ಲಾಭ ಗಳಿಸುತ್ತಾ ಬಂದಿರುವುದು ಗಮನಾರ್ಹ ಸಾಧನೆಯಾಗಿದೆ.

ವರದಿ ಸಾಲಿನಲ್ಲಿ ಸಂಘಕ್ಕೆ ಸಾಲಗಳ ಮೇಲಿನ ಬಡ್ಡಿಯಿಂದ ₹2,25,93,172 ಆದಾಯ ಬಂದಿದ್ದು, ಅನುತ್ಪಾದಕ ಆಸ್ತಿ (ಎನ್‌ಪಿಎ) ಪ್ರಮಾಣದಲ್ಲಿ ₹43,93,781 ಹೆಚ್ಚಳವಾಗಿದ್ದರೂ ಸಹ ಸಂಘವು ₹64,91,842 ನಿವ್ವಳ ಲಾಭ ಗಳಿಸಿದೆ ಎಂದು ಅವರು ತಿಳಿಸಿದರು.

31-03-2026ರ ಅಂತ್ಯಕ್ಕೆ ಸಂಘದಲ್ಲಿ 3,323 ಸದಸ್ಯರು ಇದ್ದು, ಸದಸ್ಯರಿಂದ ಒಟ್ಟು ₹2,53,07,000 ಷೇರು ಬಂಡವಾಳ ಕ್ರೋಡಿಕರಿಸಲಾಗಿದೆ. ವರದಿ ಸಾಲಿನಲ್ಲಿ ಸದಸ್ಯರ ಅಗತ್ಯಗಳಿಗೆ ಅನುಗುಣವಾಗಿ ಒಟ್ಟು ₹14,25,04,000 ಸಾಲ ವಿತರಣೆ ಮಾಡಲಾಗಿದೆ.

ಅದೇ ರೀತಿ ಸದಸ್ಯರಿಂದ ₹23 ಕೋಟಿ ಠೇವಣಿ ಸಂಗ್ರಹಿಸಲಾಗಿದ್ದು, ಸಂಘದ ಮೇಲಿನ ಸದಸ್ಯರ ವಿಶ್ವಾಸ ಹಾಗೂ ಆರ್ಥಿಕ ಪಾಲ್ಗೊಳ್ಳುವಿಕೆಯನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಅಧ್ಯಕ್ಷರು ಹೇಳಿದರು.

ಸಂಘವು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಲ್ಲಿ ₹2,80,00,000 ನಿಶ್ಚಿತ ಠೇವಣಿ ಹೊಂದಿದ್ದು, ₹15,000 ಮೌಲ್ಯದ ಬ್ಯಾಂಕ್ ಷೇರು ಸಹ ಹೊಂದಿದೆ. ಸಂಘದ ಆರ್ಥಿಕ ಸಾಮರ್ಥ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಹೂಡಿಕೆಗಳು ಸಹಕಾರಿಯಾಗಿವೆ ಎಂದು ಹೆಚ್.ಇ.ಗಡ್ಲಬಸಪ್ಪ ಹೇಳಿದರು.

ಸಂಘವು ₹1,00,70,600 ಮೌಲ್ಯದ ಸ್ಥಿರಾಸ್ತಿ ಹಾಗೂ ₹6,00,849 ಮೌಲ್ಯದ ಚರಾಸ್ತಿ ಹೊಂದಿದೆ. ಸಂಘದ ಆರ್ಥಿಕ ಸ್ಥಿರತೆ ಮತ್ತು ಮುಂದಿನ ದಿನಗಳಲ್ಲಿ ಸದಸ್ಯರಿಗೆ ಇನ್ನಷ್ಟು ಪರಿಣಾಮಕಾರಿ ಸೇವೆ ಒದಗಿಸುವ ಸಾಮರ್ಥ್ಯವನ್ನು ಈ ಆಸ್ತಿಗಳು ಹೆಚ್ಚಿಸಿವೆ.

ಸದಸ್ಯರ ಅಗತ್ಯಗಳಿಗೆ ಅನುಗುಣವಾಗಿ ಸೇವೆ ನೀಡುವುದು, ಸಂಘದ ಆರ್ಥಿಕ ಸ್ಥಿತಿಯನ್ನು ಸದೃಢಗೊಳಿಸುವುದು ಹಾಗೂ ಸದಸ್ಯರೊಂದಿಗೆ ನಿರಂತರವಾದ ನಂಬಿಕೆ ಮತ್ತು ವಿಶ್ವಾಸದ ಸಂಬಂಧವನ್ನು ಕಾಪಾಡಿಕೊಳ್ಳುವುದು ಆಡಳಿತ ಮಂಡಳಿಯ ಪ್ರಮುಖ ಆದ್ಯತೆಯಾಗಿದೆ ಎಂದು ಹೆಚ್.ಇ. ಗಡ್ಲಬಸಪ್ಪ ಹೇಳಿದರು.

ಸಂಘದ ಇಂದಿನ ಸಾಧನೆಗೆ ನೇರವಾಗಿ ಹಾಗೂ ಪರೋಕ್ಷವಾಗಿ ಕಾರಣರಾದ ಎಲ್ಲ ಸದಸ್ಯರಿಗೆ ಆಡಳಿತ ಮಂಡಳಿಯ ಪರವಾಗಿ ಅಭಿನಂದನೆ ಸಲ್ಲಿಸಿದ ಅವರು, ಸದಸ್ಯರು ಇದೇ ರೀತಿಯ ಸಹಕಾರ ಮತ್ತು ವಿಶ್ವಾಸವನ್ನು ಮುಂದುವರಿಸಬೇಕು ಎಂದು ಮನವಿ ಮಾಡಿದರು.

ಸದಸ್ಯರು ಸಂಘದೊಂದಿಗೆ ಹೊಂದಿರುವ ಆತ್ಮೀಯ ಸಂಬಂಧವೇ ಸಂಘದ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಸಂಘವನ್ನು ಇನ್ನಷ್ಟು ಬಲಿಷ್ಠಗೊಳಿಸಿ, ಸದಸ್ಯರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ರೀತಿಯಲ್ಲಿ ಸೇವೆ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

ಸದಸ್ಯರ ಅಗತ್ಯವನ್ನು ಅರ್ಥಮಾಡಿಕೊಂಡು, ಅವರ ಆರ್ಥಿಕ ಚಟುವಟಿಕೆಗಳಿಗೆ ನೆರವಾಗುವ ರೀತಿಯಲ್ಲಿ ಕಾರ್ಯನಿರ್ವಹಿಸುವುದು ಜನಸ್ನೇಹಿ ಸಹಕಾರ ಸಂಘದ ಮುಖ್ಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಶಿವ ಪತ್ತಿನ ಸಹಕಾರ ಸಂಘವು ಸದಸ್ಯರೊಂದಿಗೆ ನಿರಂತರ ಸಂಪರ್ಕ ಹೊಂದಿ, ಅವರ ವಿಶ್ವಾಸಕ್ಕೆ ತಕ್ಕಂತೆ ಸೇವೆ ಸಲ್ಲಿಸುತ್ತಿದೆ ಎಂದು ಹೇಳಿದರು.

ಸಂಘದ ಎಲ್ಲ ಸದಸ್ಯರ ಸಹಕಾರ, ಆಡಳಿತ ಮಂಡಳಿಯ ನಿಷ್ಪಕ್ಷಪಾತ ಸೇವೆ ಮತ್ತು ಸಿಬ್ಬಂದಿಯ ಪರಿಶ್ರಮದಿಂದ ಸಂಘವು ಪ್ರಗತಿಯತ್ತ ಸಾಗುತ್ತಿದೆ. ಸಂಘದ ಹಣಕಾಸು ವ್ಯವಹಾರಗಳಲ್ಲಿ ಶಿಸ್ತು ಮತ್ತು ಪಾರದರ್ಶಕತೆಗೆ ಆದ್ಯತೆ ನೀಡಲಾಗುತ್ತಿದ್ದು, ಸದಸ್ಯರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಧ್ಯಕ್ಷರು ವಿವರಿಸಿದರು.

ಸಂಘದ ಅಭಿವೃದ್ಧಿಯಲ್ಲಿ ಆಸಕ್ತಿ ವಹಿಸುತ್ತಿರುವ ಎಲ್ಲ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದ ಅವರು, ಸಂಘದ ಆಡಳಿತ ಮಂಡಳಿಯ ಸದಸ್ಯರು ಹಾಗೂ ಠೇವಣಿದಾರರಿಗೂ ಕೃತಜ್ಞತೆ ಸಲ್ಲಿಸಿದರು.

ಅದೇ ರೀತಿ ಸಂಘಕ್ಕೆ ಸಕಾಲದಲ್ಲಿ ಸೂಕ್ತ ಸಲಹೆ ಮತ್ತು ಸಹಕಾರ ನೀಡುತ್ತಿರುವ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕ್ ಅಧಿಕಾರಿಗಳಿಗೂ ಧನ್ಯವಾದಗಳನ್ನು ಅರ್ಪಿಸಿದರು.

2025-26ನೇ ಸಾಲಿನ ಸಂಘದ ಲೆಕ್ಕ ಪರಿಶೋಧನೆಯನ್ನು ನಡೆಸಿದ ಸನ್ನದು ಲೆಕ್ಕ ಪರಿಶೋಧಕ ವಿ. ವಸಂತಕುಮಾರ್ ಶೆಟ್ಟಿ ಅವರಿಗೆ ಕೃತಜ್ಞತೆ ಸಲ್ಲಿಸಲಾಯಿತು.

ಸಂಘಕ್ಕೆ ಸಕಾಲದಲ್ಲಿ ಸೂಕ್ತ ಕಾನೂನು ಸಲಹೆ ಮತ್ತು ಮಾರ್ಗದರ್ಶನ ನೀಡುತ್ತಿರುವ ವಕೀಲರಾದ ಜೆ. ಸೋಮಶೇಖರ್ ಹಾಗೂ ಎಂ.ಎಸ್. ನವೀನ್ ಅವರ ಸೇವೆಯನ್ನು ಸಹ ಸ್ಮರಿಸಲಾಯಿತು.

ಸಂಘದ ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಕಠಿಣ ಪರಿಶ್ರಮದಿಂದ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯ ಎಲ್ಲ ಸಿಬ್ಬಂದಿ ವರ್ಗದವರು, ಪಿಗ್ಗಿ ಸಂಗ್ರಹಕಾರರು ಹಾಗೂ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಆಡಳಿತ ಮಂಡಳಿಯ ಪರವಾಗಿ ಅಭಿನಂದನೆ ಮತ್ತು ಕೃತಜ್ಞತೆ ಸಲ್ಲಿಸಲಾಯಿತು.

ಸಂಘದ ಮಾಜಿ ಅಧ್ಯಕ್ಷರು, ಮಾಜಿ ನಿರ್ದೇಶಕರು ಹಾಗೂ ಸಂಘದ ಏಳಿಗೆಗಾಗಿ ವಿವಿಧ ಹಂತಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರ ಕೊಡುಗೆಯನ್ನು ಸ್ಮರಿಸಿದ ಅಧ್ಯಕ್ಷರು, ಮಹಾಸಭೆಗೆ ಆಗಮಿಸಿದ ಸರ್ವ ಸದಸ್ಯರಿಗೂ ಧನ್ಯವಾದಗಳನ್ನು ಅರ್ಪಿಸಿದರು.

ಶಿವ ಪತ್ತಿನ ಸಹಕಾರ ಸಂಘದ ವತಿಯಿಂದ 2025-26ನೇ ಸಾಲಿನಲ್ಲಿ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಪಿಯುಸಿ ವಿಭಾಗದಲ್ಲಿ ತೇವರಚಟ್ನಹಳ್ಳಿಯ ನೂತನ್ ಎ.ಜೆ., ಶಿವಮೊಗ್ಗದ ತರುಷ ಡಿ.ಬಿ., ಹರಮಘಟ್ಟದ ಅನುಶ್ರೀ ಹೆಚ್.ಎಲ್. ಹಾಗೂ ಶಿವಮೊಗ್ಗದ ಮಾನ್ಯತಾ ಕೆ.ಎಲ್. ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.

ಎಸ್‌ಎಸ್‌ಎಲ್‌ಸಿ ವಿಭಾಗದಲ್ಲಿ ಹರಮಘಟ್ಟದ ಹೇಮಾವತಿ ಈ.ಎಸ್., ಗೌತಮಿ ಜಿ.ಆರ್. ಹಾಗೂ ಹೊಳಲೂರಿನ ತ್ರಿವೇಣಿ ಹೆಚ್.ಎಲ್. ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಸಂಘದ ವತಿಯಿಂದ ಈ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಶಿವ ಪತ್ತಿನ ಸಹಕಾರ ಸಂಘದ ವತಿಯಿಂದ ಇಂದು ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಆದರ್ಶ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ಡಾ. ಮೇಘರಾಜ್ ಚಿಟ್ಟ ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಆಸ್ಪತ್ರೆಯ ಮಾಲೀಕರು ಹಾಗೂ ಡಾ. ಮೇಘರಾಜ್ ಚಿಟ್ಟ, ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳೊಂದಿಗೆ ತಮಗೆ ಅವಿನಾಭಾವ ಸಂಬಂಧವಿದ್ದು, ಶಿವ ಪತ್ತಿನ ಸಹಕಾರ ಸಂಘವು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲಿ ಎಂದು ಹಾರೈಸಿದರು.

ಸಂಘದ ಸದಸ್ಯರ ಆರೋಗ್ಯದ ಹಿತದೃಷ್ಟಿಯಿಂದ ಆದರ್ಶ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಲ್ಲಿ ವಿವಿಧ ಕಣ್ಣಿನ ತಪಾಸಣೆ ಹಾಗೂ ಚಿಕಿತ್ಸಾ ಸೇವೆಗಳನ್ನು ಶೇ.10ರಷ್ಟು ವಿಶೇಷ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಸಂಘದ ಸದಸ್ಯರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಅಗತ್ಯವಿರುವ ಕಣ್ಣಿನ ತಪಾಸಣೆ ಹಾಗೂ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.

ಶಿವ ಪತ್ತಿನ ಸಹಕಾರ ಸಂಘದ ವತಿಯಿಂದ ಶಿವಮೊಗ್ಗದ ಜಯನಗರದಲ್ಲಿ ಸುಸಜ್ಜಿತ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಸಂಘದ ಬೆಳವಣಿಗೆ ಹಾಗೂ ಸದಸ್ಯರಿಗೆ ಇನ್ನಷ್ಟು ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ ಕೈಗೊಂಡಿರುವ ಈ ಮಹತ್ವದ ಯೋಜನೆಗೆ ಸರ್ವ ಸದಸ್ಯರ ಸಹಕಾರ ಅಗತ್ಯವಾಗಿದೆ ಎಂದು ಸಂಘದ ಅಧ್ಯಕ್ಷರು ಹಾಗೂ ನಿರ್ದೇಶಕರು ಮನವಿ ಮಾಡಿದರು.

ಸಂಘವು ಕಳೆದ ಹಲವು ವರ್ಷಗಳಿಂದ ಸದಸ್ಯರ ವಿಶ್ವಾಸವನ್ನು ಗಳಿಸಿಕೊಂಡು, ಜನಸ್ನೇಹಿ ಸೇವೆ ಹಾಗೂ ಉತ್ತಮ ಆಡಳಿತದ ಮೂಲಕ ನಿರಂತರ ಪ್ರಗತಿಯತ್ತ ಸಾಗುತ್ತಿದೆ. ಸಂಘದ ಬೆಳವಣಿಗೆಗೆ ಸದಸ್ಯರ ಸಹಕಾರವೇ ಪ್ರಮುಖ ಶಕ್ತಿಯಾಗಿದ್ದು, ನೂತನ ಕಟ್ಟಡ ನಿರ್ಮಾಣವೂ ಸಂಘದ ಭವಿಷ್ಯದ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು.

ಸಾಧು ವೀರಶೈವ ಸಮಾಜವು ಸಂಘದ ಕಟ್ಟಡ ನಿರ್ಮಾಣ ಕಾರ್ಯಕ್ಕೂ ಸಂಘದ ಸರ್ವ ಸದಸ್ಯರು ತಮ್ಮ ಇಚ್ಛಾನುಸಾರ ಆರ್ಥಿಕ ಸಹಾಯ ಹಾಗೂ ಸಹಕಾರ ನೀಡುವ ಮೂಲಕ ಈ ಸಮಾಜಮುಖಿ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಅಧ್ಯಕ್ಷರು ಹಾಗೂ ನಿರ್ದೇಶಕರು ಮನವಿ ಮಾಡಿದರು.

ಸದಸ್ಯರ ಸಹಕಾರದಿಂದ ನೂತನ ಕಟ್ಟಡ ನಿರ್ಮಾಣ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಮುಂದಿನ ದಿನಗಳಲ್ಲಿ ಸಂಘವನ್ನು ಇನ್ನಷ್ಟು ಬಲಿಷ್ಠಗೊಳಿಸುವುದರ ಜೊತೆಗೆ ಸದಸ್ಯರಿಗೆ ಹೆಚ್ಚಿನ ಸೌಲಭ್ಯ ಹಾಗೂ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಲಾಗಿದೆ ಎಂದು ಅವರು ತಿಳಿಸಿದರು.

ಸದಸ್ಯರ ವಿಶ್ವಾಸವನ್ನು ಬಂಡವಾಳವಾಗಿಸಿಕೊಂಡು, ಸಹಕಾರದ ತತ್ವವನ್ನು ಆಧಾರವಾಗಿಟ್ಟುಕೊಂಡು 14 ವರ್ಷಗಳ ಲಾಭದಾಯಕ ಪಯಣ ಮುಂದುವರಿಸಿರುವ ಶಿವ ಪತ್ತಿನ ಸಹಕಾರ ಸಂಘವು, ಮುಂದಿನ ದಿನಗಳಲ್ಲಿಯೂ ಸದಸ್ಯರ ಹಿತಕ್ಕೆ ಆದ್ಯತೆ ನೀಡಿ ಇನ್ನಷ್ಟು ಅಭಿವೃದ್ಧಿ ಸಾಧಿಸುವ ಸಂಕಲ್ಪದೊಂದಿಗೆ ಮುನ್ನಡೆಯಲಿ ಎಂದು ಎಲ್ಲಾರ ಆಶಯವಾಗಿದೆ.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಹೆಚ್.ಇ. ಗಡ್ಡಬಸಪ್ಪ, ಹೊಳೆಬೆಳಗಲು, ಉಪಾಧ್ಯಕ್ಷರಾದ ಎಸ್.ಜಿ. ಮಲ್ಲಿಕಾರ್ಜುನ, ಸೂಗೂರು, ನಿರ್ದೇಶಕರಾದ ಟಿ.ಬಿ. ಜಗದೀಶ್, ತ್ಯಾಜವಳ್ಳಿ, ಪಿ.ಡಿ. ಮಂಜಪ್ಪ, ವೀರಣ್ಣನಬೆನವಳ್ಳಿ, ಇ.ಜಿ. ರುದ್ರೇಶಪ್ಪ, ನುಗ್ಗಿ ಮಲ್ಲಾಪುರ, ಎಸ್.ಹೆಚ್. ಷಣ್ಮುಖಪ್ಪ, ಸೋಮಿನಕೊಪ್ಪ, ಹೆಚ್.ಬಿ. ಸುರೇಶ್, ಹರಮಘಟ್ಟ, ಸಿ. ಚಂದ್ರಪ್ಪ, ಯಲವಟ್ಟಿ, ಹೆಚ್.ವಿ. ಅರುಣ್, ಗೊಂದಿಚಟ್ನಹಳ್ಳಿ, ಎಂ.ಎಲ್. ರಾಜಶೇಖರ, ಹಾಡೋನಹಳ್ಳಿ, ಶ್ರೀಮತಿ ಕೆ.ಜಿ. ವೀಣಾ, ಗೊಂದಿಚಟ್ನಹಳ್ಳಿ, ಕಾರ್ಯದರ್ಶಿ ಎ.ಎಸ್. ನವೀನ್‌ಕುಮಾರ್, ಕಾನೂನು ಸಲಹೆಗಾರರಾದ ಜೆ. ಸೋಮಶೇಖರಪ್ಪ ಹಾಗೂ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ಸರ್ವ ಸದಸ್ಯರ ಮಹಾಸಭೆ, ಹಿರಿಯ ನಾಗರಿಕರ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ: ಹಿರಿಯ ನಾಗರಿಕರ ಅನುಭವ ಸಮಾಜದ ಪ್ರಗತಿಗೆ ದಾರಿದೀಪ: ಜ್ಯೋತಿ ಪ್ರಕಾಶ್

ಶಿಕಾರಿಪುರದಲ್ಲಿ ತಾಲ್ಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ: ಕ್ರೀಡೆ ವಿದ್ಯಾರ್ಥಿಗಳಲ್ಲಿ ಶಿಸ್ತು, ಏಕಾಗ್ರತೆ ಹಾಗೂ ಕ್ರೀಡಾ ಮನೋಭಾವ ಬೆಳೆಸುತ್ತದೆ: ಎಸ್.ಪಿ. ನಾಗರಾಜಗೌಡ

ಬಡ ಕುಟುಂಬದ ಸ್ವಂತ ಮನೆಯ ಕನಸು ನನಸು! ಮಾನವೀಯ ಸೇವೆಗೆ ಮತ್ತೊಂದು ಹೆಜ್ಜೆ: ನೂತನ ಗೃಹಪ್ರವೇಶದಲ್ಲಿ ಸಿ.ಎಸ್. ಷಡಾಕ್ಷರಿ ಭಾಗಿ: ರಮೇಶ್ ನಾಯ್ಕ್ ಕುಟುಂಬಕ್ಕೆ ಶುಭಹಾರೈಕೆ

ಲಿಂಗೈಕ್ಯ ಶ್ರೀ ತರಳಬಾಳು ಜಗದ್ಗುರು ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ಶ್ರದ್ಧಾಂಜಲಿ ದಾಸೋಹಕ್ಕೆ ಶಿವಮೊಗ್ಗ ತಾಲ್ಲೂಕಿನಿಂದ 101 ಕ್ವಿಂಟಲ್ ಅಕ್ಕಿ ಸಮರ್ಪಣೆ: ಶ್ರೀ ತರಳಬಾಳು ಸೇವಾ ಸಮಿತಿಯಿಂದ ಭಕ್ತಿ ಸಮರ್ಪಣೆ

ಅಖಿಲ ಭಾರತ ವೀರಶೈವ ಮಹಾಸಭಾ ಶಿವಮೊಗ್ಗ ತಾಲೂಕು ಯುವ ಘಟಕದಿಂದ ಧಾರ್ಮಿಕ ಕಾರ್ಯಕ್ರಮ: ಬಸವೇಶ್ವರ ದೇವಸ್ಥಾನದಲ್ಲಿ ಗಣಪತಿಗೆ ವಿಶೇಷ ಪೂಜೆ, ಮಹಾಮಂಗಳಾರತಿ

ಶಿಕಾರಿಪುರವನ್ನು ಬರಪೀಡಿತ ತಾಲೂಕು ಎಂದು ಘೋಷಿಸಿ: ಸಿಎಂ ಡಿ.ಕೆ. ಶಿವಕುಮಾರ್‌ ಅವರಿಗೆ ಎಸ್.ಪಿ. ನಾಗರಾಜಗೌಡ ಮನವಿ: ಮಳೆ ಕೊರತೆ, ಬೆಳೆ ಹಾನಿ ಹಾಗೂ ಕುಡಿಯುವ ನೀರಿನ ಸಮಸ್ಯೆ: ರೈತರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸುವಂತೆ ಒತ್ತಾಯ

Leave a Comment