ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ದರ್ಶನ್‌ ವಿರುದ್ಧ ಪೋಸ್ಟ್‌ ಹಾಕಿದ್ದಕ್ಕೆ ಕೆಟ್ಟ ಕಾಮೆಂಟ್‌.. ರಮ್ಯಾ ಟಾಂಗ್‌ಗೆ ‘ಡಿ ಬಾಸ್’ ಫ್ಯಾನ್ಸ್‌ ಥಂಡಾ..?

On: July 27, 2025 7:35 PM
Follow Us:

ನಟ ದರ್ಶನ್​ಗೆ ದೊಡ್ಡ ಅಭಿಮಾನಿ ಬಳಗ ಇದೆ ಅನ್ನೋದು ಗೊತ್ತೇ ಇದೆ. ತನ್ನ ಅಭಿಮಾನಿಗಳಿಗೆ ದರ್ಶನ್ ‘ಸೆಲೆಬ್ರಿಟೀಸ್’ ಅಂತಾನೇ ಕರೀತಾರೆ. ಆದ್ರೆ ಈ ಸೆಲೆಬ್ರಿಟೀಸ್ ಈಗ ಸ್ಯಾಂಡಲ್​ವುಡ್​ನ ಕೆಲ ಸೆಲೆಬ್ರಿಟೀಸ್​​ಗೆ ಇನ್ನಿಲ್ಲದ ಕಾಟ ಕೊಡ್ತಾ ಇದ್ದಾರೆ.

‘ದಿ ಡೆವಿಲ್; ನಟ ದರ್ಶನ್​ ಕೇಸ್ ಬಗ್ಗೆ ಪ್ರತಿಕ್ರಿಯಿಸಿದ್ದಕ್ಕೆ ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ ಮೇಲೆ ದರ್ಶನ್ ಫ್ಯಾನ್ಸ್ ಮುಗಿಬಿದ್ದಿದ್ದಾರೆ ಎನ್ನಲಾಗ್ತಿದೆ. ತಮ್ಮನ್ನ ಟ್ರೋಲ್ ಮಾಡಿದ ದರ್ಶನ್ ಫ್ಯಾನ್ಸ್​ಗೆ ರಮ್ಯಾ ಸರಿಯಾಗೇ ಟಾಂಗ್ ಕೊಟ್ಟಿದ್ದಾರೆ. ಇನ್ನು, ಜೀವಬೆದರಿಕೆ ಹಾಕಿದ್ದ ನಟ ದರ್ಶನ್ ಪುಂಡ ಅಭಿಮಾನಿಗಳ ವಿರುದ್ದ ನಟ ಪ್ರಥಮ್ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಸ್ಯಾಂಡಲ್​ವುಡ್ ಸೆಲೆಬ್ರಿಟೀಸ್​ಗೆ ದಾಸನ ಸೆಲೆಬ್ರಿಟೀಸ್ ಕಾಟ? ಟ್ರೋಲ್ ಮಾಡಿದ ‘ಡಿ ಬಾಸ್’ ಫ್ಯಾನ್ಸ್​ಗೆ ಖಡಕ್ ಉತ್ತರ ಕೊಟ್ಟ ರಮ್ಯಾ:

ಹೌದು, ನಟ ದರ್ಶನ್​ಗೆ ದೊಡ್ಡ ಅಭಿಮಾನಿ ಬಳಗ ಇದೆ ಅನ್ನೋದು ಗೊತ್ತೇ ಇದೆ. ತನ್ನ ಅಭಿಮಾನಿಗಳಿಗೆ ದರ್ಶನ್ ‘ಸೆಲೆಬ್ರಿಟೀಸ್’ ಅಂತಾನೇ ಕರೀತಾರೆ. ಆದ್ರೆ ಈ ಸೆಲೆಬ್ರಿಟೀಸ್ ಈಗ ಸ್ಯಾಂಡಲ್​ವುಡ್​ನ ಕೆಲ ಸೆಲೆಬ್ರಿಟೀಸ್​​ಗೆ ಇನ್ನಿಲ್ಲದ ಕಾಟ ಕೊಡ್ತಾ ಇದ್ದಾರೆ. ದರ್ಶನ್ ಕೊಲೆ ಕೇಸ್ ಬಗ್ಗೆ ಮಾತನಾಡಿದವರ ಮೇಲೆ ಹರಿಹಾಯ್ತಾ ಇದ್ದಾರೆ. ಆ ಬಿಸಿ ನಟಿ ರಮ್ಯಾಗೂ ತಾಗಿದೆ.

ಇತ್ತೀಚಿಗೆ ಸುಪ್ರೀಂ ಕೋರ್ಟ್​ನಲ್ಲಿ ದರ್ಶನ್ ಬೇಲ್ ಅರ್ಜಿ ಬಗ್ಗೆ ವಿಚಾರಣೆ ನಡೆದಾಗ ರಮ್ಯಾ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಾಕಿದ್ರು. ಸುಪ್ರೀಂ ಕೋರ್ಟ್​ನಿಂದ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿದೆ ಅನ್ನೋ ಭರವಸೆ ವ್ಯಕ್ತಪಡಿಸಿದ್ರು. ಇದ್ರಿಂದ ಕೆರಳಿದ ದಾಸನ ಫ್ಯಾನ್ಸ್​ ರಮ್ಯಾನ ಹಿಗ್ಗಾಮುಗ್ಗಾ ಟ್ರೋಲ್ ಮಾಡೋದಕ್ಕೆ ಶುರುಮಾಡಿದ್ರು. ಇದಕ್ಕೆ ಸೋಷಿಯಲ್ ಮಿಡಿಯಾದಲ್ಲೇ ಖಡಕ್ ಉತ್ತರ ಕೊಟ್ಟಿದ್ದಾರೆ ರಮ್ಯಾ.

ರಮ್ಯಾ ಪೋಸ್ಟ್ :

‘ಎಲ್ಲಾ ಡಿಬಾಸ್ ಅಭಿಮಾನಿಗಳಿಗೆ ನನ್ನ ಇನ್​ಸ್ಟಾಗ್ರಾಂಗೆ ಸ್ವಾಗತ. ರೇಣುಕಾಸ್ವಾಮಿ ಅವರ ಕುಟುಂಬಕ್ಕೆ ಯಾಕೆ ನ್ಯಾಯ ಸಿಗಬೇಕು ಅನ್ನೋದಕ್ಕೇ ನಿಮ್ಮ ಕಾಮೆಂಟ್ಸ್‌ಗಳೇ ಸಾಕ್ಷಿ’ ಎಂದಿದ್ದಾರೆ ನಟಿ ರಮ್ಯಾಈ ಬಗ್ಗೆ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿರೋ ನಟಿ ರಮ್ಯಾ, ‘ಹೌದು’ ನಿಮ್ಮ ಕಾಮೆಂಟ್​ಗಳೇ ನಿಮ್ಮ ಸಂಸ್ಕಾರ ಹೇಳುತ್ವೆ..’ ಎಂದು ಹೇಳಿರೋ ರಮ್ಯಾ ದರ್ಶನ್ ಫ್ಯಾನ್ಸ್​ಗೆ ನೇರಾನೇರ ಟಾಂಗ್ ಕೊಟ್ಟಿದ್ದಾರೆ. ಇನ್ನು, ಬಿಗ್ ಬಾಸ್ ಖ್ಯಾತಿಯ ಪ್ರಥಮ್​ಗೂ ದರ್ಶನ್ ಅಭಿಮಾನಿಗಳಿಂದ ಕೆಟ್ಟ ಅನುಭವ ಆಗಿದೆ. ಇತ್ತೀಚಿಗೆ ವೈರಲ್ ಆದ ಒಂದು ಆಡಿಯೋದಲ್ಲಿ ದರ್ಶನ್ ಫ್ಯಾನ್ಸ್ ತನಗೆ ಜೀವಬೆದರಿಕೆ ಒಡ್ಡಿದ್ರು ಅಂತ ಪ್ರಥಮ್ ಹೇಳಿದ್ದು ಎಲ್ಲರನ್ನೂ ಬೆಚ್ಚಿಬೀಳಿಸಿತ್ತು. ಆ ಆಡಿಯೋ ನಿಜ ಅಂತ ಒಪ್ಪಿಕೊಂಡಿರೋ ಪ್ರಥಮ್, ದರ್ಶನ್‌ ಫ್ಯಾನ್ಸ್​ನಿಂದ ತಮಗಾದ ಕಿರುಕುಳವನ್ನ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಪ್ರಥಮ್ ಹೇಳಿದ್ದೇನು?

‘ನಿಮ್ಮ ಅಭಿಮಾನಿಗಳಿಗೆ ಬುದ್ದಿ ಹೇಳಿ, ರೌಡಿಗಳನ್ನ ಸಾಕಬೇಡಿ ಅಂತ ದರ್ಶನ್​ಗೆ ಕಿವಿಮಾತು ಹೇಳಿರೋ ಪ್ರಥಮ್, ಇದೇ ರೀತಿ ಪುಂಡಾಟ ಆಡುವವರ ವಿರುದ್ದ ಕಾನೂನು ರೀತ್ಯಾ ಕ್ರಮಕ್ಕೆ ಮುಂದಾಗ್ತೀನಿ’ ಅಂತ ಹೇಳಿದ್ದಾರೆ. ಒಟ್ಟಾರೆ ದರ್ಶನ್ ಕುರಿತ ಅಭಿಮಾನ ಓಕೆ.. ಆದ್ರೆ ಆ ನಟನ ಕುಕೃತ್ಯಗಳನ್ನ ಸಮರ್ಥನೆ ಮಾಡಿಕೊಳ್ತಾ ಇದೇ ರೀತಿ ಹುಚ್ಚಾಟವಾಡಿದ್ರೆ, ಅದಕ್ಕೆ ತಕ್ಕ ಬೆಲೆತೆರಬೇಕಾಗುತ್ತೆ ಡಿ ಬಾಸ್ ಫ್ಯಾನ್ಸ್ ಎನ್ನಲಾಗ್ತಿದೆ.

K.M.Sathish Gowda

Join WhatsApp

Join Now

Facebook

Join Now

Leave a Comment