ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಮುಖ್ಯಮಂತ್ರಿ ಸ್ಥಾನ ಕೈತಪ್ಪಿದ್ದಕ್ಕೆ ನೋವು ತೋಡಿಕೊಂಡ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

On: July 27, 2025 7:54 PM
Follow Us:

ವಿಜಯಪುರ: ಮುಖ್ಯಮಂತ್ರಿ ಸ್ಥಾನ ಕೈತಪ್ಪಿರುವುದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪರೋಕ್ಷವಾಗಿ ನೋವು ತೋಡಿಕೊಂಡಿದ್ದಾರೆ.

ಬಿಎಲ್​​ಡಿ ಸಂಸ್ಥೆಯ ಸಂಸ್ಥಾಪಕ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಈ ಹಿಂದೆ ರಾಜ್ಯದ ಮುಖ್ಯಮಂತ್ರಿ ಆಗುವ ಅವಕಾಶ ಇತ್ತು. ಆದರೆ ಅದು ಕೈ ತಪ್ಪಿತು. 1999ರಲ್ಲಿ ಸಿಎಂ ಆಗೋದು ಕೈತಪ್ಪಿತು. ನಾನು ವಿಧಾನಸಭಾದ ವಿರೋಧ ಪಕ್ಷದ ನಾಯಕನಾಗಿ ಹೋರಾಟ ಮಾಡಿದೆ. 4 ತಿಂಗಳ ಹಿಂದೆ ಪಕ್ಷ ಸೇರಿದ್ದ ಎಸ್.ಎಂ ಕೃಷ್ಣ ಮುಖ್ಯಮಂತ್ರಿ ಆದರು ಎಂದು ಹೇಳಿದ್ದಾರೆ.

ಕಾಂಗ್ರೆಸ್​ ಅನ್ನು ಅಧಿಕಾರಕ್ಕೆ ತರಲು ಸಾಕಷ್ಟು ಪ್ರಯತ್ನಿಸಿದೆ, ಆದ್ರೆ ಸಿಎಂ ಆಗಿದ್ದು ಎಸ್.ಎಂ ಕೃಷ್ಣಾ ಅವರು‌. ನಾನು ಸಲ್ಲಿಸಿದ ಸೇವೆ ನೀರಲ್ಲಿ ಹೋಯಿತು. ಸ್ವಾಮೀಜಿಗಳೇ ನಾನು ಸೇವೆ ಸಲ್ಲಿಸಿದ್ದು ನೀರಲ್ಲಿ ಹೋಯಿತು ಎಂದು ಮತ್ತೊಮ್ಮೆ ಹೇಳಿದರು. ಬ್ಲಾಕ್ ಅಧ್ಯಕ್ಷನಿಂದ ಈಗ ಎಐಸಿಸಿ ಅಧ್ಯಕ್ಷನಾಗಿದ್ದೇನೆ. ಅಧಿಕಾರದ ಬೆನ್ನು ಹತ್ತಿ ನಾನು ಎಂದಿಗೂ ಹೋಗಲಿಲ್ಲ. ಅದಾಗೇ ನನ್ನ ಬಳಿಗೆ ಬಂದಿದೆ. ಪ್ರಯತ್ನದ ಫಲದಿಂದ ಸಿಕ್ಕಿದೆ ಎಂದು ಹೇಳಿದ್ದಾರೆ.

ಹಳೆಯ ದುರಂತ ನೆನಪಿಸಿಕೊಂಡ ಖರ್ಗೆ

ರಜಾಕರ ಹಾವಳಿಯಲ್ಲಿ ನಮ್ಮ ಕುಟುಂಬ ಕಳೆದುಕೊಂಡೆ. ತಾಯಿ, ತಂಗಿ, ದೊಡ್ಡಪ್ಪ ಉಸಿರು ಚೆಲ್ಲಿದರು. ರಜಾಕರ ಹಾವಳಿ ಸಮಯದಲ್ಲಿ ಒಬ್ಬರನ್ನ ಒಬ್ಬರ ಮನೆಗೆ ಸೇರಿಸುತ್ತಿರಲಿಲ್ಲ. ನಮ್ಮ ತಂದೆ ನನ್ನನ್ನು ಬದುಕಿಸಲೆಂದು ಮಹಾರ್ ರೆಜಿಮೆಂಟ್​​ನಲ್ಲಿದ್ದ ಪುಣೆಯ ಚಿಕ್ಕಪ್ಪನ ಮನೆಗೆ ಕರೆತಂದರು. ಆದ್ರೆ ಅಲ್ಲಿ ಸ್ವಾತಂತ್ರ್ಯ ಸಿಕ್ಕ ಬಳಿಕ ಅವರು ಅಲ್ಲಿಂದ ತೆರಳಿದರು. ಆಗ ನಾವು ಅನಿವಾರ್ಯವಾಗಿ ಗುಲ್ಬರ್ಗಾಕ್ಕೆ ಬಂದು ನೆಲೆಸಬೇಕಾಯಿತು ಎಂದು ಹೇಳಿದರು.

1948 ನಮಗೆ ಸ್ವಾತಂತ್ರ್ಯ ಸಿಕ್ಕಿತು. ಕೊನೆಗೆ ನಮ್ಮ ತಂದೆ ಗುಲ್ಬರ್ಗಾಕೆ ಕರೆದುಕೊಂಡು ಬಂದರು. ಅಲ್ಲಿ ನಮಗೆ ಶಿಕ್ಷಣ ಕೊಡಿಸಿದರು. ಮನೆಯಲ್ಲಿ ನಾನು ನಮ್ಮ ತಂದೆ ಮಾತ್ರ ಇದ್ದೇವು. ಸುಖ- ದುಃಖದ ಕಲ್ಪನೆಯೇ ಇಲ್ಲದೆ ಬೆಳೆದೆ. ಅಮ್ಮ, ಅಕ್ಕ, ತಂಗಿ, ತಮ್ಮ ಯಾರು ಇಲ್ಲದೆ ಅಪ್ಪನ ಜೊತೆಗೆ ಬೆಳೆದೆ. ಅಲ್ಲಿಂದ ರಾಜಕೀಯದಲ್ಲಿ ಪ್ರವೇಶಿಸಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಕುಟುಂಬನ್ನ ನೆನಪಿಸಿಕೊಂಡರು.

K.M.Sathish Gowda

Join WhatsApp

Join Now

Facebook

Join Now

Leave a Comment