ಅ….ಆ…. ಬರೆಯೋ ಬಳಪ ‘ಅಂ’ ‘ಅಃ’ ಆಗುತ್ತಿದೆಯಂತೆ. ಹೌದಾ?!
ಹೆಣ್ಮಕ್ಳಿಗೆ ಯಾಕೆ ಕಲ್ಲಿನ ಬಳಪ ತಿನ್ನುವ ಚಟ ?
ಅದ್ರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಆಗೋದಿಲ್ವೆ?
ಈಗ ಸ್ಲೇಟ್ ಮೇಲೆ ಬಳಪದಿಂದ ಅ ಆ ಬರೆಯೋ ಚಿಕ್ಕ ಮಕ್ಕಳ ಸಂಖ್ಯೆ ಬಹಳ ಕಡಿಮೆ . ಇಲ್ಲವೆ ಇಲ್ಲ ಎನ್ನಲೂ ಬಹುದು.ಆದರೆ ಮಾರುಕಟ್ಟೆಯಲ್ಲಿ ಬಳಪದ ಪ್ಯಾಕೆಟ್ ಬಹಳವಾಗಿ ಖರ್ಚಾಗುತ್ತಿದೆಯಂತೆ. ಒಂದು ಮಾಹಿತಿ ಪ್ರಕಾರ ಬುಕ್ ಸ್ಟಾಲ್ ಗಳಲ್ಲಿ ಸಿಗುವ ಇದಕ್ಕೆ ಹೆಚ್ಚಾಗಿ ಹುಡುಗಿಯರೇ ಗ್ರಾಹಕರಂತೆ. ಆದರೆ ಅದು ಬಳಕೆಯಾಗೋದು ಅ… ಆ… ಬರೆಯೋಕಲ್ಲ, ಅಂ… ಅಹಾ… ಎಂದು ತಿನ್ನಲು ಬಳಸುತ್ತಾರಂತೆ. ಕಲ್ಲು ತಿಂದು ಕರಗಿಸಿಕೊಳ್ಳುವ ವಯಸ್ಸು ನಿಜ, ಹಾಗಂತ ಕಲ್ಲನ್ನೇ ತಿನ್ನುವುದೆ?! ಅದರಲ್ಲಿ ಮಾದಕ ಸ್ವಾದ ಇರುವುದಾದರೆ ಗುಟ್ಕಾದಂತೆ ಚಟವಾಗಿ ಆರೋಗ್ಯದ ಮೇಲೆ ಭಾರೀ ದುಷ್ಪರಿಣಾಮ ಬೀರುವುದಿಲ್ಲವೆ?
ಈ ವಿಚಾರದಲ್ಲಿ ಯುವ ಜನತೆಗೆ ಎಚ್ಚರಿಕೆ ಹಾಗೂ ಮಾರ್ಗದರ್ಶನ ಅಗತ್ಯ.
(ಜಿಲ್ಲಾಡಳಿತ ಗಮನಿಸಲಿ.)
