ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಮಾನವೀಯ ಭಾವನೆಗಳಿಂದ ಸಾಗುವ ಧರ್ಮವೇ ವೀರಶೈವ ಧರ್ಮವಾಗಿದೆ : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆ.

On: August 1, 2025 10:14 PM
Follow Us:

ಶಿವಮೊಗ್ಗ : ನಿನ್ನೆ ನಗರದ ಸರ್ಜಿ ಕನ್ವೆಷನಲ್ ಹಾಲ್‌ನಲ್ಲಿ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವ ಸಂಘ ಹಮ್ಮಿಕೊಂಡಿದ್ದ ಬಿ.ಎಸ್. ಯಡಿಯೂರಪ್ಪನವರಿಗೆ ಅಭಿನಂದನಾ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅಭಿನಂದನ ಸ್ವೀಕರಿಸಿ ಮಾತನಾಡಿದರು.

ನನಗೆ ಸನ್ಮಾನಿಸಿದ್ದಿರಿ. ಅನೇಕ ಮುತ್ಸದ್ದಿಗಳು ರಾಜ್ಯಕ್ಕೆ ತಮ್ಮದೆ ಕೊಡುಗೆ ಕೊಟ್ಟಿದ್ದಾರೆ. ಅವರನ್ನು ನಪಿಸಿಕೊಳ್ಳುವ ಅಗತ್ಯವಿದೆ. ರಾಜ್ಯದಲ್ಲಿ ಪ್ರವಾಸಮಾಡಿ, ನ್ಯಾಯ ಕೊಡಿಸಿದ ತೃಪ್ತಿಯಿದೆ. ಸಮಾನತೆ, ಬ್ರಾತೃತ್ವ ಹಾಗೂ ಮಾನವೀಯ ಭಾವನೆಗಳಿಂದ ಸಾಗುವ ಧರ್ಮವೇ ವೀರಶೈವ ಧರ್ಮವಾಗಿದೆ. ನಾವು ಉತ್ತಮ ಸಮಾಜ ಮತ್ತು ವಿಕಸಿತ ಸಮಾಜಕ್ಕೆ ಶ್ರಮಿಸಬೇಕು ಎಂದು ಕರೆ ನೀಡಿದರು.

ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸಬೇಕಿದೆ. ಒಮ್ಮೆ ಸಂಸದನಾಗಿ ಮತ್ತು ನಾಲ್ಕು ಬಾರಿ ಸಿಎಂ ಆಗಿ ಏಳು ಬಾರಿ ಶಾಸಕನಾಗಿ ಕೆಲಸ ಮಾಡಲು ಜಿಲ್ಲೆಯ ಜನ ಅವಕಾಶ ಮಾಡಿ ಕೊಟ್ಟಿದ್ದೀರಿ. ನಾನು ಶಿಕಾರಿ ಪುರ ಮತ್ತು ಶಿವಮೊಗ್ಗದ ಜನರಿಗೆ ಚಿರಋಣಿ ಎಂದ ಅವರು, ಜಿಲ್ಲೆಯ ಜನರ ಋಣ ತೀರಿಸಲು ಆಗುವುದಿಲ್ಲ ಎಂದರು.

ಕರ್ನಾಟಕ ರಾಜ್ಯದ ಉದ್ದ ಅಗಲಕ್ಕೆ ಮತ್ತೊಮ್ಮೆ ಪ್ರವಾಸ ನಡೆಸಿ ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದಾಗಿ ಮಾಜಿ ಸಿಎಂ ಯಡಿಯೂರಪ್ಪ ಸಂಕಲ್ಪ ಮಾಡಿದ್ದಾರೆ. ರಾಜ್ಯದ ಬಹುತೇಕ ಜಲಾ ಶಯಗಳು ತುಂಬಿ ತುಳುಕುತ್ತಿದೆ. ರೈತ ಗೌರವದಿಂದ ಬದುಕುವ ಸ್ಥಿತಿಯಿದೆ. ರೈತನ ಶ್ರಮಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ.ಆತನ ಶ್ರಮದ ಕಾರಣ ದಿಂದ ನಾವು ನೆಮ್ಮದಿ ಜೀವ ನಕ್ಕೆ ಕಾರಣವಾಗಿದೆ ಎಂದರು.

ಆಗಿನ ಕಾಲದ ರಸ್ತೆಗಳ ಸ್ಥಿತಿಗಳನ್ನು ನೆನಪಿಸಿಕೊಂಡ ಬಿಎಸ್‌ವೈ ಅಟಲ್ ಜೀ ಅವರೊಂದಿಗೆ ಓಡಾಡಿದ ಅಂಬಾಸಿಡರ್ ಕಾರನ್ನು ನೆನಪಿಸಿಕೊಂಡರು. ಮತ್ತು ಅಂದಿನ ಓಡಾಟಗಳನ್ನು ಸ್ಮರಿಸಿದರು. ನಮ್ಮ ಸರ್ಕಾರವನ್ನು ಮತ್ತೆ ತಂದು ಅಭಿವೃದ್ಧಿ ಮಾಡಬೇಕಿದೆ ಎಂದರು.

ವಿಶ್ವವೇ ನಮ್ಮ ದೇಶದ ಕಡೆ ನೋಡುತ್ತಿದೆ. ಮೋದಿಯನ್ನು ಪ್ರಧಾನಿಯಾಗಿರುವುದು ನಮ್ಮ ಸೌಭಾಗ್ಯವಾಗಿದೆ. ರಾಜ್ಯದ ಯಾವುದೇ ಜಿಲ್ಲೆಗೆ ಹೋದರೆ ಸರ್ವಾಂಗಿಣ ಅಭಿವೃದ್ಧಿಗಾಗಿ ಬಿಜೆಪಿ ಸರ್ಕಾರ ಇರುವಾಗ ಶಕ್ತಿಮೀರಿ ಪ್ರಯತ್ನಿಸಿದ್ದೇನೆ. ವಿಶೇಷವಾಗಿ ಶಿವಮೊಗ್ಗ ಜಿಲ್ಲೆ ಹಿಂದೇ ಹೇಗಿತ್ತು ? ಈಗ ಹೇಗಿದೆ ಎಂಬುದನ್ನು ಜಿಲ್ಲೆಯ ಜನ ನೋಡಿದ್ದಾರೆ ಎಂದರು. ಪ್ರತಿಭಾ ಪುರಸ್ಕಾರ ಪಡೆದ ಮಕ್ಕಳಿಗೆ ಅಭಿನಂದನೆ ತಿಳಿಸಿದ ಅವರು, ಪೋಷಕರು ಮಕ್ಕಳಿಗೆ ಅವರು ಎಷ್ಟು ಇಚ್ಛೆ ಪಡುತ್ತಾರೋ ಅಲ್ಲಿಯವರೆಗೆ ಓದಿಸಿ ಅವರನ್ನು ದೇಶದ ಉತ್ತಮ ಪ್ರಜೆಗಳನ್ನಾಗಿ ಮಾಡಿ ಎಂದರು. ಪಠ್ಯದ ಜೊತೆಗೆ ನಮ್ಮ ಸನಾತನ ಧರ್ಮದ ಮಹಾನೀಯರುಗಳ ಚರಿತ್ರೆ ಯನ್ನು ಅವರಿಗೆ ತಿಳಿಸಿ. ದೇಶಭಕ್ತರ ಜೀವನಗಾಥೆಯನ್ನು ಅವರಿಗೆ ಮನದಟ್ಟು ಮಾಡಿ ಎಂದರು.

ಕಾರ್ಯಕ್ರಮದಲ್ಲಿ ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮತ್ತು ಬಸವ ಕೇಂದ್ರದ ಬಸವ ಮರುಳುಸಿದ್ದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ಎಸ್.ಎಸ್. ಜ್ಯೋತಿಪ್ರಕಾಶ್, ಕಾರ್ಯ ದರ್ಶಿ ಎಸ್.ಪಿ. ದಿನೇಶ್, ಪ್ರಮುಖರಾದ ತಾರಾನಾಥ್, ಶಾಂತಾ ಆನಂದ್. ಬಳ್ಳೇಕೆರೆ ಸಂತೋಷ್, ಅನಿತಾ ರವಿ ಶಂಕರ್, ಡಾ. ರೇಣುಕಾರಾಧ್ಯ. ಮಹಾಲಿಂಗ ಮೋಹನ್ ಬಾಳೆಕಾಯಿ, ಟಿ.ಬಿ. ಜಗದೀಶ್, ಪಿ. ರುದ್ರೇಶ್, ಎಂ.ಆರ್. ಪ್ರಕಾಶ್, ಮಹೇಶ್ ಮೂರ್ತಿ, ರತ್ನಾ ಮಂಜು ನಾಥ್, ಶಾಸಕರಾದ ಎಸ್. ಎನ್. ಚನ್ನಬಸಪ್ಪ, ಡಾ. ಧನಂಜಯ ಸರ್ಜಿ, ಮಾಜಿ ಶಾಸಕರಾದ ಹೆಚ್.ಎಂ. ಚಂದ್ರ ಶೇಖರಪ್ಪ, ಎಸ್. ರುದ್ರೇ ಗೌಡ, ಆಯನೂರು ಮಂಜುನಾಥ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಹೆಚ್.ಸಿ. ಯೋಗೀಶ್ ಮೊದಲಾದವರಿದ್ದರು.

K.M.Sathish Gowda

Join WhatsApp

Join Now

Facebook

Join Now

Leave a Comment