ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಲು ಐಕಿಯಾ ಸಂಸ್ಥೆಗೆ ಸಲಹೆ; ಕರ್ನಾಟಕದ ಸಣ್ಣ ಉದ್ಯಮಗಳಿಗೆ ಆದ್ಯತೆ ನೀಡಿ: ಸಿಎಂ ಡಿ.ಕೆ. ಶಿವಕುಮಾರ್

On: November 5, 2026 3:06 PM
Follow Us:

ಬೆಂಗಳೂರು, ನ.05: ಕರ್ನಾಟಕದ ಸಣ್ಣ ಮತ್ತು ಸ್ಥಳೀಯ ಉದ್ಯಮಗಳು ಗುಣಮಟ್ಟದ ಪೀಠೋಪಕರಣಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿವೆ. ಅಂತಹ ಉದ್ಯಮಗಳ ಉತ್ಪನ್ನಗಳನ್ನು ಖರೀದಿಸುವ ಮೂಲಕ ಅವುಗಳಿಗೆ ಪ್ರೋತ್ಸಾಹ ನೀಡಬೇಕು. ಐಕಿಯಾ ಸಂಸ್ಥೆ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡುವುದರ ಜೊತೆಗೆ ಸ್ಥಳೀಯ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಲಹೆ ನೀಡಿದರು.

ಕನಕಪುರ ರಸ್ತೆಯಲ್ಲಿ ನೂತನವಾಗಿ ಆರಂಭಿಸಲಾದ ಐಕಿಯಾ ಮಳಿಗೆಯನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ನಾನು ಇದುವರೆಗೆ ಯಾವುದೇ ಮಳಿಗೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ನನ್ನ ಮಕ್ಕಳು ಕಟ್ಟಡಗಳನ್ನು ಆರಂಭಿಸಿದ ಸಂದರ್ಭದಲ್ಲಿಯೂ ಉದ್ಘಾಟನೆಗೆ ಹೆಚ್ಚಾಗಿ ಹೋಗುವುದಿಲ್ಲ. ಇದೇ ಮೊದಲ ಬಾರಿಗೆ ಮಳಿಗೆಯೊಂದರ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದೇನೆ ಎಂದು ಹೇಳಿದರು.

ಜಾಗತಿಕ ಬಂಡವಾಳ ಹೂಡಿಕೆದಾರರನ್ನು ಕರ್ನಾಟಕಕ್ಕೆ ಆಹ್ವಾನಿಸುತ್ತಿದ್ದೇವೆ. ಹೂಡಿಕೆ ಮತ್ತು ಉದ್ಯಮ ಸ್ಥಾಪನೆಗೆ ರಾಜ್ಯದಲ್ಲಿ ಹಲವು ಅವಕಾಶಗಳನ್ನು ಕಲ್ಪಿಸಲಾಗಿದೆ. ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಐಕಿಯಾ ತನ್ನ ಮಳಿಗೆಯನ್ನು ಆರಂಭಿಸಿರುವುದು ಸಂತಸದ ವಿಚಾರ. ಗುಣಮಟ್ಟದ ಉತ್ಪನ್ನಗಳಿಗೆ ಹೆಸರಾಗಿರುವ ಐಕಿಯಾ ಸಂಸ್ಥೆ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.

ಸ್ವೀಡನ್, ಭಾರತ ಮತ್ತು ಕರ್ನಾಟಕದ ನಡುವೆ ಉತ್ತಮ ಬಾಂಧವ್ಯವಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸಬೇಕು. ನಮ್ಮ ಯುವಕರು ಪ್ರತಿಭಾವಂತರು, ಸುಸಂಸ್ಕೃತರು ಹಾಗೂ ಉತ್ತಮ ಕೌಶಲ್ಯ ಹೊಂದಿದ್ದಾರೆ. ಗ್ರಾಹಕರನ್ನು ಆಕರ್ಷಿಸುವ ಮಾರುಕಟ್ಟೆ ಕೌಶಲ್ಯವೂ ಅವರಲ್ಲಿದೆ. ಹೀಗಾಗಿ ಸ್ಥಳೀಯ ಯುವಕರಿಗೆ ಉದ್ಯೋಗ ನೀಡುವ ಮೂಲಕ ಅವರ ಸಾಮರ್ಥ್ಯವನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಐಕಿಯಾ ಸಂಸ್ಥೆಯ ಉತ್ಪನ್ನಗಳು ಎಲ್ಲ ವರ್ಗದ ಗ್ರಾಹಕರಿಗೂ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುತ್ತಿದ್ದು, ಗುಣಮಟ್ಟವನ್ನೂ ಕಾಯ್ದುಕೊಂಡಿದೆ. ಇಂತಹ ಸಂಸ್ಥೆಗಳಿಗೆ ಸರ್ಕಾರ ಅಗತ್ಯ ಉತ್ತೇಜನ ಮತ್ತು ಸಹಕಾರ ನೀಡಲಿದೆ. ನಿಮ್ಮೊಂದಿಗೆ ಕರ್ನಾಟಕ ಸರ್ಕಾರ ಇದೆ ಎಂಬ ಭರವಸೆ ನೀಡಲು ನಾನು ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇವೆ. ಸಂಸ್ಥೆಯ ಮುಂದಿನ ಉದ್ಯಮ ಪಯಣ ಯಶಸ್ವಿಯಾಗಲಿ. ಭವಿಷ್ಯದಲ್ಲಿ ಇನ್ನಷ್ಟು ಅಭಿವೃದ್ಧಿ ಸಾಧಿಸಲಿ ಎಂದು ಶುಭ ಹಾರೈಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಐಟಿ-ಬಿಟಿ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಐಕಿಯಾ ಇಂಡಿಯಾದ ಸಿಇಒ ಪ್ಯಾಟ್ರಿಕ್ ಆಂಟೋನಿ, ದಕ್ಷಿಣ ಭಾರತದಲ್ಲಿ ಸ್ವೀಡನ್‌ನ ಕಾನ್ಸುಲ್ ಜನರಲ್ ಅರುಣ್ ವಾಸು, ಜಾಗತಿಕ ಹೂಡಿಕೆ ಮತ್ತು ಸಾಗರೋತ್ತರ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಎಸ್.ಎಸ್. ನಕುಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

ಭಿಕ್ಷಾಪಾತ್ರೆ ಹಿಡಿದು ಬಿಜೆಪಿ ಪ್ರತಿಭಟನೆ; ಇದು ದುಷ್ಟರ ಲೂಟಿ ಸರ್ಕಾರ: ಆರ್. ಅಶೋಕ್

ಬೆಲೆ ಏರಿಕೆ, ಅರಾಜಕತೆ ಖಂಡಿಸಿ ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ; 2028ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬರಲಿದೆ: ಬಿ.ವೈ. ವಿಜಯೇಂದ್ರ

1,000 ಸರ್ಕಾರಿ ಶಾಲೆಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಜೋಡಿಸುವ ಗುರಿ; 56 ಶಾಲೆಗಳ ಅಭಿವೃದ್ಧಿಗೆ ₹206.10 ಕೋಟಿ ವೆಚ್ಚದ ಒಡಂಬಡಿಕೆ: ಸರ್ಕಾರಿ ಶಾಲೆಗಳಿಗೂ ಖಾಸಗಿ ಶಾಲೆಗಳ ಗುಣಮಟ್ಟ ತರುವ ಸಂಕಲ್ಪ – ಸಿಎಂ ಡಿ.ಕೆ. ಶಿವಕುಮಾರ್

2032ರ ವೇಳೆಗೆ ಕರ್ನಾಟಕವನ್ನು ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಗುರಿ; ಬದುಕಿನಲ್ಲಿ ರಾಜಯೋಗದ ಜೊತೆಗೆ ಕೌಶಲ್ಯವೂ ಇರಬೇಕು: ಸಿಎಂ ಡಿ.ಕೆ. ಶಿವಕುಮಾರ್

ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಿ: ಸಿಎಂ ಡಿ.ಕೆ. ಶಿವಕುಮಾರ್

ಬರ ಮುಕ್ತ ಹಿರಿಯೂರು; ದಿವಂಗತ ಸುಧಾಕರ್ ಅವರ ಕನಸನ್ನು ನನಸು ಮಾಡೋಣ: ಸಿಎಂ ಡಿ.ಕೆ. ಶಿವಕುಮಾರ್

Leave a Comment