ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಡ್ರೋನ್‌ ಮೂಲಕ ನ್ಯಾನೋ ಯೂರಿಯಾ ಸಿಂಪಡಣೆ: ಕೃಷಿಯಲ್ಲಿ ಹೊಸ ಕ್ರಾಂತಿ

On: August 1, 2025 11:30 PM
Follow Us:

ಶಿವಮೊಗ್ಗ : ಕೃಷಿ ಇಲಾಖೆ ಹಾಗೂ ಇಫ್ಕೊ ಸಂಸ್ಥೆ ಸಹಭಾಗಿತ್ವದಲ್ಲಿ ಇಲ್ಲಿನ ಕೃಷಿ ಭೂಮಿಯಲ್ಲಿ ಡ್ರೋನ್‌ ಮೂಲಕ ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿ ಸಿಂಪಡಣೆ ಪ್ರಾತ್ಯಕ್ಷಿಕೆ ಜರುಗಿತು.

ಗ್ರಾಮೀಣ ಕೃಷಿಯಲ್ಲಿ ತಂತ್ರಜ್ಞಾನ  ಅಳವಡಿಕೆ ಇದು ಸಜೀವ ಉದಾಹರಣೆಯಾಗಿ, ಹಾರನಹಳ್ಳಿ ರಾಮನಗರ ಹಿರಿಯ ರೈತ ನಾಗೋಜಿ ರಾವ್ ಅವರ ಮೆಕ್ಕೆಜೋಳದ ಜಮೀನಿನಲ್ಲಿ ಡ್ರೋನ್ ಮೂಲಕ ನ್ಯಾನೋ ಯೂರಿಯಾ ಸಿಂಪಡಣೆಯ ಕ್ಷೇತ್ರ ಪ್ರದರ್ಶನ ನಡೆಯಿತು.

ಈ ಪ್ರಯೋಗವನ್ನು ಕೃಷಿ ಇಲಾಖೆ ಮತ್ತು ಇಫ್ಕೊ (IFFCO) ಸಂಸ್ಥೆ ಸಂಯುಕ್ತವಾಗಿ ಆಯೋಜಿಸಿದ್ದವು. ಡ್ರೋನ್ ತಂತ್ರಜ್ಞಾನದ ಮೂಲಕ ಗೊಬ್ಬರ ಸಿಂಪಡಣೆ ಮಾಡುವುದು, ರೈತರಿಗೆ ಅನುಕೂಲ, ದುಡಿಮೆ ಉಳಿತಾಯ ಮತ್ತು ಪರಿಸರಪಾಲನೆಯ ದೃಷ್ಟಿಯಿಂದ ಮಹತ್ತರ ಹೆಜ್ಜೆಯೆಂದು ಕೃಷಿ ಅಧಿಕಾರಿಗಳು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಉದ್ಘಾಟನಾ ಭಾಷಣದಲ್ಲಿ ಮಂಜುಳಾ, ಉಪ ಕೃಷಿ ನಿರ್ದೇಶಕರು ಮಾತನಾಡಿ, “ಹೆಚ್ಚು ಪ್ರಮಾಣದಲ್ಲಿ ರಾಸಾಯನಿಕ ಯೂರಿಯಾ ಬಳಕೆ ಭೂಮಿ ಹಾಗೂ ನೀರಿನ ಮೇಲಿನ ಪರಿಣಾಮವನ್ನು ಉಂಟುಮಾಡುತ್ತದೆ. ಆದರೆ ನ್ಯಾನೋ ಯೂರಿಯಾ ಬಳಕೆಯಿಂದ ಈ ದೋಷಗಳು ತಗ್ಗುತ್ತವೆ. ಕೇವಲ 500 ಮಿ.ಲೀ ನ್ಯಾನೋ ಯೂರಿಯಾ ಬಳಕೆ ಒಂದು ಎಕರೆಗೆ ಸಾಕಾಗುತ್ತದೆ. ಇದರ ಬೆಲೆ ರೂ.250 ಮಾತ್ರ. ಜೊತೆಗೆ ನ್ಯಾನೋ ಡಿಎಪಿ 600 ರೂ.ಗೆ ಲಭ್ಯವಿದೆ,” ಎಂದು ತಿಳಿಸಿದರು.

ಡ್ರೋನ್ ಬಳಕೆಯ ಪ್ರಯೋಜನಗಳ ಬಗ್ಗೆ ಅವರು ವಿವರವಾಗಿ ಮಾತನಾಡಿ: “ಒಂದು ಎಕರೆಗೆ ಸಿಂಪಡಿಸಲು ಕೇವಲ 6ರಿಂದ 8 ನಿಮಿಷಗಳು ಬೇಕು. ಇದು ರೈತರ ಸಮಯ ಉಳಿತಾಯಕ್ಕೆ ಮತ್ತು ಕೆಳಮಟ್ಟದ ಕೆಲಸಗಾರರ ಅವಲಂಬನೆಗೆ ಪರ್ಯಾಯವಾಗಿ ಬದಲಾಗುತ್ತದೆ. ಪ್ರತಿ ಎಕರೆ ಡ್ರೋನ್ ಸೇವೆಗೂ ಕೇವಲ 400 ರೂ ವೆಚ್ಚ ಮಾತ್ರ ಆಗುತ್ತದೆ,” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಸ್.ಟಿ. ರಮೇಶ್ ಸಹಾಯಕ ಕೃಷಿ ನಿರ್ದೇಶಕರು, ಜಗದೀಶ್ ಕೃಷಿಕ ಸಮಾಜ ನಿರ್ದೇಶಕರು, ಜ್ಞಾನೇಶ್, ಕೃಷಿಕ ಸಮಾಜ ಸದಸ್ಯರು, ರಾಮಚಂದ್ರಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷರು,  ಸೌರವ್, ಇಫ್ಕೊ ಸಂಸ್ಥೆಯ ಜಿಲ್ಲಾ ಪ್ರತಿನಿಧಿ ಪ್ರತಿಮಾ.ಪಿ ಕೃಷಿ ಅಧಿಕಾರಿ. ನಾಗರಾಜ್ ತಾಲೂಕು ತಾಂತ್ರಿಕ ವ್ಯವಸ್ಥಾಪಕರು, ಹನುಮಂತಪ್ಪ, ಮಂಜಪ್ಪ, ಮಲ್ಲೇಶಪ್ಪ ಸೇರಿದಂತೆ ಹಲವಾರು ಸ್ಥಳೀಯ ರೈತರು ಭಾಗವಹಿಸಿದ್ದರು.

ಈ ಪ್ರಯೋಗದ ಮುಖಾಂತರ ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನಗಳ ಪರಿಚಯವೂ ಆಯಿತು. ಪ್ರಪಂಚದ ಮಟ್ಟಿಗೆ ಸಹಕಾರ ನೀಡುತ್ತಿರುವ ನ್ಯಾನೋ ತಂತ್ರಜ್ಞಾನ, ಸ್ಥಳೀಯ ಮಟ್ಟದ ರೈತರ ಬೆಳೆ ಸುಧಾರಣೆಗೆ ಮಾರ್ಗದರ್ಶಿಯಾಗುತ್ತಿದೆ. ಇಂತಹ ಕಾರ್ಯಕ್ರಮಗಳ ಮೌಲ್ಯವರ್ಧನೆಗೆ ನಿರಂತರ ನೆರವು ಅಗತ್ಯವೆಂದು ಅಭಿಪ್ರಾಯ ವ್ಯಕ್ತವಾಯಿತು.

K.M.Sathish Gowda

Join WhatsApp

Join Now

Facebook

Join Now

Leave a Comment