ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಮುಜರಾಯಿ ಇಲಾಖೆಯ ಚೆಕ್ ಬೌನ್ಸ್-ಅರ್ಚಕ ಬೇಸರ: ಖಾತೆಯಲ್ಲಿ ಹಣ ಇದೆಯೋ ಇಲ್ಲವೋ ಎಂಬುದನ್ನು ನೋಡಿಕೊಳ್ಳದೆ ಕರ್ತವ್ಯ ನಿರ್ಲಕ್ಷ ತೋರಿದ ಶಿವಮೊಗ್ಗ ತಹಸೀಲ್ದಾರ್

On: August 2, 2025 12:10 AM
Follow Us:

ತುಂಗಾ ಭದ್ರ ಸಂಗಮದ ಶ್ರೀಕ್ಷೇತ್ರ ಕೂಡ್ಲಿಯ ಮುಜರಾಯಿ ಇಲಾಖೆಗೆ ಒಳಪಟ್ಟ ಶ್ರೀ ಪಾರ್ವತಿ ಬ್ರಹ್ಮೇಶ್ವರ ದೇವಸ್ಥಾನದ ಅರ್ಚಕರಿಗೆ ನೀಡಿದ್ದ ಇಲಾಖೆ ಚೆಕ್ ಅಮಾನ್ಯ (ಬೌನ್ಸ್) ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಸರ್ಕಾರದ ಬಳಿ ಹಣ ಇಲ್ಲದೆ ಇರುವುದು ಈ ಚೆಕ್ ಬೌನ್ಸ್ ಪ್ರಕರಣಕ್ಕೆ ಹಿಡಿದ ಕೈಗನ್ನಡಿಯಾಗಿದೆ.    ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ದೇವಸ್ಥಾನದ ಅರ್ಚಕ ಕೆ.ಆರ್.ಆನಂದ್ ಅವರ ಮೂರು ತಿಂಗಳ ವೇತನ ಹಾಗೂ ಇತರೆ  ನಿರ್ವಹಣೆ ವೆಚ್ಚ ಸೇರಿ ಒಟ್ಟು 25,900 ರೂ. ಮೌಲ್ಯದ ಚೆಕ್ ಅನ್ನು ಜು.1 ದಿನಾಂಕ ನಮೂದು ಮಾಡಿ ಶಿವಮೊಗ್ಗ ತಹಸೀಲ್ದಾರ್ ಅವರ ಸೀಲು ಸಹಿ ಮಾಡಿರುವ ಚೆಕ್ ನೀಡಲಾಗಿತ್ತು.   ಇತ್ತೀಚೆಗೆ ನಗದೀಕರಣಕ್ಕೆ ಸದರಿ ಚೆಕ್ ಅನ್ನು ಕೂಡ್ಲಿ ಕರ್ನಾಟಕ ಬ್ಯಾಂಕಿಗೆ ನೀಡಲಾಗಿತ್ತು. ಆದರೆ ಚೆಕ್ ನೀಡಲಾಗಿದ್ದ ಖಾತೆಯಲ್ಲಿ ಸಾಕಷ್ಟು ಹಣ ಇಲ್ಲದೆ ಇರುವುದರಿಂದ ಅಮಾನ್ಯಗೊಂಡಿದೆ ಎಂದು ಬ್ಯಾಂಕಿನಿಂದ ಹಿಂಬರಹ ನೀಡಿ ಚೆಕ್ ವಾಪಾಸ್ಸು ನೀಡಿದ್ದಾರೆ.

ಸರಕಾರಿ ಇಲಾಖೆಯೊಂದರ ಖಾತೆಯಲ್ಲಿ ಹಣ ಇಲ್ಲದೆ ಇರುವುದು ಮುಜರಾಯಿ ಇಲಾಖೆ ಹಾಗೂ ಸರಕಾರಕ್ಕೆ ಮುಜುಗರಕ್ಕೀಡು ಮಾಡಿದೆ. ಪ್ರಾಮಾಣಿಕವಾಗಿ ಸೇವೆ ಮಾಡಿದರೂ ಕೂಡ ಸರಕಾರ ನಿಗಧಿ ಪಡಿಸಿದ ಹಣ ನೀಡಲು ತಾಲೂಕು ಕಚೇರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಇಲ್ಲಸಲ್ಲದ ದಾಖಲೆಗಳು ನೀಡುವಂತೆ ಅಲೆಸುತ್ತಾರೆ.    ನಮ್ಮ ಎಲ್ಲಾ ದಾಖಲೆ ಪರಿಶೀಲಿಸುವ ಸಿಬ್ಬಂದಿ ಸಂಬಂಧಪಟ್ಟ ಖಾತೆಯಲ್ಲಿ ಹಣ ಇದೆಯೋ ಇಲ್ಲವೋ ಎಂಬುದನ್ನು ನೋಡಿಕೊಳ್ಳದೆ ಕರ್ತವ್ಯ ನಿರ್ಲಕ್ಷ ತೋರಿದ್ದಾರೆ. ಇದರಿಂದ ಜೀವನ ನಿರ್ವಹಣೆ ಮಾಡುವುದು ಹಾಗೂ ಕರ್ತವ್ಯ ನಿರ್ವಹಿಸುವುದು ಕಷ್ಟಕರ ಆಗಿದ್ದು ಮುಂದಿನ ದಿನಗಳಲ್ಲಿ ಇದು ಸರಿಯಾಗದೆ ಇದ್ದಲ್ಲಿ ಕರ್ತವ್ಯದಿಂದ ಮುಕ್ತಿ ಪಡೆಯುವುದಾಗಿ ಅರ್ಚಕ ಕೆ.ಆರ್.ಆನಂದ್ ಬೇಸರವಾಗಿದ್ದಾರೆ.

K.M.Sathish Gowda

Join WhatsApp

Join Now

Facebook

Join Now

Leave a Comment