ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಶಿವಮೊಗ್ಗಕ್ಕೆ ಆಗಮಿಸಿದ ಯುದ್ದ ವಿಮಾನ.     

On: August 4, 2025 10:49 PM
Follow Us:

 ಶಿವಮೊಗ್ಗ : ಭಾರತೀಯ ವಾಯು ಸೇನೆಗೆ ಸೇರಿದ ಯುದ್ಧ ವಿಮಾನವನ್ನು ಶಿವಮೊಗ್ಗ ನಗರಕ್ಕೆ ಆಗಸ್ಟ್ 4 ರಂದು ತರಲಾಗಿದೆ.  ಸದರಿ ಯುದ್ಧ ವಿಮಾನವನ್ನು ನಗರದ ಫ್ರೀಡಂ ಪಾರ್ಕ್  ಆವರಣದಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ. ಈಗಾಗಲೇ ಸದರಿ ಪಾರ್ಕ್ ಆವರಣದಲ್ಲಿ, ಭಾರತೀಯ ಸೇನೆಗೆ ಸೇರಿದ ಯುದ್ಧ ಟ್ಯಾಂಕರ್ ನ್ನು ಪ್ರತಿಷ್ಠಾಪಿಸಲಾಗಿದೆ.  ಲೋಕಸಭಾ ಸದಸ್ಯ  ಅವರು ಯುದ್ಧ ವಿಮಾನವನ್ನು ವೀಕ್ಷಿಸಿದರು. ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಯುದ್ದ ತರಬೇತಿಯಲ್ಲಿ ಬಳಸಲಾದ ಸದರಿ ಯುದ್ಧ ವಿಮಾನವನ್ನು ಕೇಂದ್ರ ಸರ್ಕಾರ ಶಿವಮೊಗ್ಗಕ್ಕೆ ಕೊಡುಗೆಯಾಗಿ ನೀಡಿದೆ ಎಂದು ತಿಳಿಸಿದರು.1960 ರಲ್ಲಿ ಸದರಿ ಯುದ್ದ ವಿಮಾನ ನಿರ್ಮಾಣ ಮಾಡಲಾಗಿದ್ದು, 2023 ಕ್ಕೆ ಸೇವೆಯಿಂದ ನಿವೃತ್ತಿಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.  ಪ್ರವಾಸಿಗರನ್ನು ಆಕರ್ಷಿಸಲು ಮತ್ತು ದೇಶಭಕ್ತಿ ಮೂಡಿಸಲು ಯುದ್ದ ನೌಕೆಯೊಂದನ್ನು ಸಿಗಂದೂರು ಸೇತುವೆ ಬಳಿ ಸ್ಥಾಪಿಸುವ ಚಿಂತನೆಯಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಸಂಸದರು ತಿಳಿಸಿದ್ದಾರೆ.

K.M.Sathish Gowda

Join WhatsApp

Join Now

Facebook

Join Now

Leave a Comment