ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಶೌಚಾಲಯದಲ್ಲಿ ಗಂಡು ಮಗುವಿನ ಶವ ಪತ್ತೆ,.!

On: August 16, 2025 8:10 PM
Follow Us:

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯ ಶರಾವತಿ ವಾರ್ಡ್ ನಲ್ಲಿರುವ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಶೌಚಾಲಯದಲ್ಲಿ ಗಂಡು ಮಗುವಿನ ಮೃತ ದೇಹವೊಂದು ಪತ್ತೆಯಾಗಿದೆ. ಕುತ್ತಿಗೆ ಹಿಸುಕಿ ಸಾಯಿಸಿ ಮೃತದೇಹವನ್ನ ಶೌಚಾಲಯದಲ್ಲಿ ಬಿಸಾಕಿರುವ ಘಟನೆ ವರದಿಯಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ಬಾಬು ಆಂಜನಪ್ಪ ಮತ್ತು ದೊಡ್ಡಪೇಟೆ ಪೊಲೀಸ್ ಪಿ ಐ ರವಿ ಸಂಗಣ್ಣ ಗೌಡ ದೌಡಾಯಿಸಿದ್ದಾರೆ.   ಇಂದು ಆಸ್ಪತ್ರೆಯ ಶೌಚಾಲಯಕ್ಕೆ ಮತ್ತೋರ್ವ ಮಹಿಳೆ ಹೋದಾಗ ಗಂಡು ಮಗುವಿನ ಮೃತದೇಹ ಶೌಚಾಲಯದಲ್ಲಿ  ಪತ್ತೆಯಾಗಿದೆ.   

ಮೃತ ದೇಹದ ಬಗ್ಗೆ ಆಸ್ಪತ್ರೆಯ ಸಿಬ್ಬಂದಿಗಳಿಗೆ ತಿಳಿಸಲಾಗಿದ್ದು ನಂತರ ಈ ಪ್ರಕರಣವನ್ನ ಪೊಲೀಸರಿಗೆ ತಿಳಿಸಲಾಗಿದೆ.ಇಂದು ಹೆರಿಗೆಯಾದವರ ಮಗುವನ್ನ ತಪಾಸಣೆ ನಡೆಸಲಾಗಿದೆ. ತಕ್ಷಣವೇ ಯಾರ ಬಳಿ  ಮಗು ಇಲ್ಲದಿರುವುದನ್ನ ಪರಿಶೀಲಿಸಲಾಗುತ್ತಿದೆ. ಹೆರಿಗೆಯಾದ ಮಹಿಳೆಯರನ್ನ ಪರಿಶೀಲಿಸಲಾಗುತ್ತಿದೆ. ಬಹುತೇಕ ಮಹಿಳೆಯರು ನನ್ನದಲ್ಲ ಎಂದಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನ ಪೊಲೀಸರು ಕಲೆಹಾಕುತ್ತಿದ್ದಾರೆ.

ಶೋಕೋ (ಫೋಟೊಗ್ರಫಿ) ತಂಡ ಸ್ಥಳಕ್ಕೆ ಧಾವಿಸಿದ್ದಾರೆ.ಸುಮಾರು 6 ಜನರ ತಂಡ ಶರಾವತಿ ವಾರ್ಡ್ ಒಳಗೆ ಧಾವಿಸಿದ್ದಾರೆ. ಒಂದು ದಿನದ ಗಂಡು‌ಮಗುವಿನ ಮೃತ ದೇಹ ಪತ್ತೆಯಾಗಿದೆ.  ಓರ್ವ ಮಹಿಳೆಯ ಮೇಲೆ ಶಂಕೆ ವ್ಯಕ್ತವಾಗುತ್ತಿದ್ದರೂ ಆ ಮಹಿಳೆ ಮಗು ತನ್ನದಲ್ಲ ಎಂದು ಹೇಳುತ್ತಿರುವುದು ಪ್ರಕರಣಕ್ಕೆ ಮತ್ತಷ್ಟು ಗೊಂದಲವನ್ನ ಸೃಷ್ಠಿಸಿದೆ. ಸ್ಥಳಕ್ಕೆ ಅಡಿಷನಲ್ ಎಸ್ಪಿ ಕಾರ್ಯಪ್ಪ ಸಹ ಭೇಟಿ ನೀಡಿದ್ದಾರೆ. ಹೊನ್ನಾಳಿ ತಾಲೂಕಿನ ತಿಮ್ಲಾಪುರದ ಶೈಲ ಎಂಬುವರ ಮೇಲೆ ಶಂಕಿಸಲಾಗಿದ್ದು, ತಪಾಸಣೆ ಮಾಡಲಾಗುತ್ತಿದೆ.   

ಶೈಲಾರ ನಾದಿನಿಗೆ (ಶೀಲಾ) ಡೆಲಿವರಿಗೆ ಮೆಗ್ಗಾನ್ ಗೆ ಬಂದಾಗ ಇವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಇಂದೇ ಡೆಲಿವರೆಯಾಗಿದೆ.

K.M.Sathish Gowda

Join WhatsApp

Join Now

Facebook

Join Now

Leave a Comment