ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಶಿವಮೊಗ್ಗ ವಾರ್ತಾಧಿಕಾರಿ ಮಾರುತಿ ದಾವಣಗೆರೆಗೆ ವರ್ಗಾವಣೆ

On: August 23, 2025 6:13 PM
Follow Us:

ಶಿವಮೊಗ್ಗ: ಶಿವಮೊಗ್ಗ ವಾರ್ತಾಧಿಕಾರಿ ಮಾರುತಿ ಆರ್. ಅವರನ್ನು ಸರ್ಕಾರ ದಾವಣಗೆರೆಗೆ ವರ್ಗಾವಣೆ ಮಾಡುವ ಆದೇಶ ಹೊರಡಿಸಿದೆ. ಕಳೆದ 15 ವರ್ಷಗಳಿಂದ ಶಿವಮೊಗ್ಗ ವಾರ್ತಾ ಇಲಾಖೆಯಲ್ಲಿಯೇ ಸೇವೆ ಸಲ್ಲಿಸುತ್ತಿದ್ದ ಅವರು ಇದೇ ಮೊದಲ ಬಾರಿಗೆ ವರ್ಗಾವಣೆಗೆ ಒಳಗಾಗಿದ್ದಾರೆ.

ಮಾರುತಿ ವಿರುದ್ಧ ಹಲವು ಪತ್ರಕರ್ತರಿಂದ ದೂರುಗಳು ದಾಖಲಾಗಿದ್ದವು. ಕೆಲವರೊಂದಿಗೆ ಸೇರಿಕೊಂಡು ತಾನು ಇಷ್ಟಪಟ್ಟಂತೆ ಕಾರ್ಯ ನಿರ್ವಹಿಸುತ್ತಿದ್ದರೆಂಬ ಹಾಗೂ ನೈಜ ಪತ್ರಕರ್ತರಿಗೆ ತಾರತಮ್ಯ ತೋರಿಸುತ್ತಿದ್ದರೆಂಬ ಆರೋಪಗಳು ಕೇಳಿಬಂದಿದ್ದವು. ಇದರಿಂದ ವಾರ್ತಾ ಇಲಾಖೆ ಒಳಜಗಳಕ್ಕೆ ಗುರಿಯಾಗಿತ್ತು.

ಭ್ರಷ್ಟ ವಾರ್ತಾಧಿಕಾರಿಗಳ ವರ್ಗಾವಣೆ: ಸಮಾಜದ ಕನ್ನಡಿಯ ಮೇಲೆ ಧೂಳು

ವಾರ್ತಾ ಇಲಾಖೆ ಹಾಗೂ ಮಾಧ್ಯಮವನ್ನು ಸಾಮಾನ್ಯವಾಗಿ “ಸಮಾಜದ ಕನ್ನಡಿ” ಮತ್ತು “ಜನತೆಯ ರಕ್ಷಕ” ಎಂದು ಕರೆಯಲಾಗುತ್ತದೆ. ಆದರೆ ಈ ಕನ್ನಡಿಯ ಮೇಲೆ ಧೂಳು ಬೀಳುವಾಗ, ಸಮಾಜ ನೋಡುತ್ತಿರುವ ಪ್ರತಿಬಿಂಬವೂ ವಿಕೃತವಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಭ್ರಷ್ಟ ವಾರ್ತಾಧಿಕಾರಿಗಳ ವರ್ಗಾವಣೆ ಒಂದು ಗಂಭೀರ ಸಮಸ್ಯೆಯಾಗಿ ಬೆಳೆಯುತ್ತಿದೆ. ಒಬ್ಬ ಅಧಿಕಾರಿಯ ವಿರುದ್ಧ ಭ್ರಷ್ಟಾಚಾರ ಅಥವಾ ಅನೈತಿಕ ವರ್ತನೆಯ ಆರೋಪಗಳು ಸ್ಪಷ್ಟವಾಗಿದ್ದರೂ, ಕಾನೂನು ಕ್ರಮ ಕೈಗೊಳ್ಳುವ ಬದಲು ಅವನನ್ನು ಇನ್ನೊಂದು ಜಾಗಕ್ಕೆ ವರ್ಗಾವಣೆ ಮಾಡುವ ಪದ್ಧತಿ ಇಲಾಖೆಯಲ್ಲಿ ಗಾಢವಾಗಿ ಬೇರೂರಿದೆ.

ಇದರಿಂದ ಜನತೆಗಾಗಬೇಕಾದ ನಂಬಿಕೆ ಕುಸಿಯುತ್ತಿದೆ. ಏಕೆಂದರೆ, ತಪ್ಪಿತಸ್ಥನಿಗೆ ಶಿಕ್ಷೆಯ ಬದಲು “ಸ್ಥಳಾಂತರ” ಎಂಬ ಸುಲಭದ ದಾರಿ ಕಲ್ಪಿಸಲಾಗುತ್ತಿದೆ. ಇದು ಇಲಾಖೆಯ ಶುದ್ಧತೆಗೆ ಧಕ್ಕೆ ತರುವುದಲ್ಲದೆ, ಸಾರ್ವಜನಿಕರ ವಿಶ್ವಾಸಕ್ಕೂ ತೀವ್ರ ಹೊಡೆತ ನೀಡುತ್ತಿದೆ.

ಈತನಿಗೆ ಹಲವಾರು ಬಾರಿ ವರ್ಗಾವಣೆಯಾದಾಗಲೂ ತನ್ನ ಪ್ರಭಾವ ಬಳಸಿಕೊಂಡು ಇದೇ ಜಾಗದಲ್ಲಿ ಮುಂದುವರೆದಿದ್ದಲ್ಲದೇ ಕಳೆದ ಎರಡು ವರ್ಷಗಳದ ಇಲ್ಲಿ ತೆರವಾಗಿದ್ದ ಹಿರಿಯ ಸಹಾಯಕರ ಹುದ್ದೆಗೆ ಯಾರೂ ಬರದಂತೆ ನೋಡಿಕೊಂಡಿದ್ದ. ಈತ ಒಂದೇ ಜಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರೂ ಈತನ ವರ್ಗಾವಣೆಗೆ ಕ್ರಮ ಕೈಗೊಂಡಿರಲಿಲ್ಲ.

ಅಂತಿಮವಾಗಿ, ಸರ್ಕಾರದ ಅಧೀನ ಕಾರ್ಯದರ್ಶಿಯಿಂದ ಹೊರಬಂದ ಆದೇಶದ ಮೂಲಕ ಮಾರುತಿ ಆರ್. ದಾವಣಗೆರೆಯ ವಾರ್ತಾ ಇಲಾಖೆಗೆ ವರ್ಗಾವಣೆಯಾಗಿದ್ದಾರೆ. ಈ ನಿರ್ಧಾರದಿಂದ ಹಲವಾರು ಪತ್ರಕರ್ತರು ಸಂತಸ ವ್ಯಕ್ತಪಡಿಸಿದ್ದಾರೆ.

K.M.Sathish Gowda

Join WhatsApp

Join Now

Facebook

Join Now

Leave a Comment