ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಶಿವಮೊಗ್ಗದಲ್ಲಿ ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮ

On: August 23, 2025 10:16 PM
Follow Us:

ಶಿವಮೊಗ್ಗ: ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಆಶ್ರಯದಲ್ಲಿ “ಬಸವ ಸಂಸ್ಕೃತಿ ಅಭಿಯಾನ” ಕಾರ್ಯಕ್ರಮವು ಸೆಪ್ಟೆಂಬರ್ 17, 2025ರಂದು ಶಿವಮೊಗ್ಗದಲ್ಲಿ ಭವ್ಯವಾಗಿ ನಡೆಯಲಿದೆ.

ರಾಜ್ಯ ಸರ್ಕಾರವು ಬಸವಣ್ಣನನ್ನು “ಕರ್ನಾಟಕದ ಸಾಂಸ್ಕೃತಿಕ ನಾಯಕ” ಎಂದು ಘೋಷಿಸಿ ಒಂದು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟವು ಸೆಪ್ಟೆಂಬರ್ 1ರಿಂದ ಅಕ್ಟೋಬರ್ 5ರವರೆಗೆ ಒಂದು ತಿಂಗಳು ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ “ಬಸವ ಸಂಸ್ಕೃತಿ ಅಭಿಯಾನ” ನಡೆಸಲು ತೀರ್ಮಾನಿಸಿದೆ.

ಧಾರ್ಮಿಕ, ಸಾಮಾಜಿಕ ಮತ್ತು ವೈಚಾರಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಅಭಿಯಾನವು ನಡೆಯಲಿದ್ದು, ಸಮಾಜದಲ್ಲಿ ಸಮಾನತೆ, ಸಹಕಾರ ಮತ್ತು ಭ್ರಾತೃತ್ವದ ಸಂದೇಶ ಹರಡುವ ಉದ್ದೇಶ ಹೊಂದಿದೆ.

ಸಮಾಜದಲ್ಲಿ ಮಾನವೀಯತೆ, ಸಮಾನತೆ ಮತ್ತು ಸತ್ಯದ ಸಂದೇಶವನ್ನು ಹರಡುವ ಉದ್ದೇಶದಿಂದ ಬಸವ ಸಂಸ್ಕೃತಿ ಅಭಿಯಾನವನ್ನು ಜಿಲ್ಲಾದ್ಯಂತ ಜಾರಿಗೆ ತರಲಾಗಿದೆ. ವಚನ ಸಾಹಿತ್ಯದ ಮೌಲ್ಯಗಳನ್ನು ಜನಮನದಲ್ಲಿ ಬಿತ್ತುವ ಮೂಲಕ ಹೊಸ ಪೀಳಿಗೆಗೆ ಬಸವ ತತ್ತ್ವವನ್ನು ಪರಿಚಯಿಸುವ ಅಭಿಯಾನಕ್ಕೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ.

ಅಭಿಯಾನದ ಅಂಗವಾಗಿ ಶಾಲೆ-ಕಾಲೇಜುಗಳಲ್ಲಿ ವಚನ ಪಾಠ, ಕಾವ್ಯ ಪಠಣ, ಚರ್ಚಾಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಜನಸಾಮಾನ್ಯರ ಪಾಲ್ಗೊಳ್ಳುವಿಕೆಯಿಂದ ಅಭಿಯಾನವು ಒಂದು ಸಮಾಜ ಜಾಗೃತಿ ಚಳವಳಿಯ ರೂಪ ತಾಳುತ್ತಿದೆ.

ಬಸವಣ್ಣನ ತತ್ತ್ವವಾದ “ಕಾಯಕವೇ ಕೈಲಾಸ “ ಹಾಗೂ “ಮನುಜನು ಒಕ್ಕೊರಲಾಗಿ ಬದುಕಬೇಕು “ ಎಂಬ ಸಂದೇಶವನ್ನು ಹಬ್ಬಿಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಯುವಜನತೆಗೆ ಸಾಮಾಜಿಕ ಹೊಣೆಗಾರಿಕೆ ಬೆಳೆಸುವ ದೃಷ್ಟಿಯಿಂದ ಕಾರ್ಯಾಗಾರಗಳು, ಉಪನ್ಯಾಸ, ಕಲಾ ಪ್ರದರ್ಶನಗಳು ನಡೆಸಲಾಗುತ್ತಿದೆ.

ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಬಸವ ಸಂಸ್ಕೃತಿ ಅಭಿಯಾನವು ಶ್ರೇಷ್ಠ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸುವುದರೊಂದಿಗೆ, ಜನರಲ್ಲಿ ಆತ್ಮವಿಶ್ವಾಸ ಮೂಡಿಸುತ್ತಿದೆ.

ಈ ಬಸವ ಸಂಸ್ಕೃತಿ ಅಭಿಯಾನವು ನಮ್ಮ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಸಂಚರಿಸಲಿದ್ದು, ಶಿವಮೊಗ್ಗ ಜಿಲ್ಲೆಗೆ ಸೆಪ್ಟೆಂಬರ್ 17, 2025ರಂದು ಆಗಮಿಸಲಿದೆ. ಈ ಸಂದರ್ಭದಲ್ಲಿ ನಾಡಿನ ಹಲವು ಪ್ರಮುಖ ಮಠಗಳ ಜಗದ್ಗುರುಗಳು, ಮಹಾಸ್ವಾಮಿಗಳು, ಪ್ರಜ್ನಾವಂತ ಚಿಂತಕರು, ಅನುಭಾವಿಗಳ, ಕಲಾವಿದರು ಆಗಮಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

ಸಮಾಜ ಸುಧಾರಣೆಯ ದಾರಿದೀಪನಾದ ಬಸವ ತತ್ತ್ವವನ್ನು ವಿಶ್ವ ಮಟ್ಟದಲ್ಲಿ ಪ್ರಸಾರಗೊಳಿಸಲು ಈ ಅಭಿಯಾನ ಮಹತ್ವದ ಹೆಜ್ಜೆಯಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಶಿವಮೊಗ್ಗದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು, ಬೆಕ್ಕಿನಕಲ್ಮಠ, ಗದಗದ ಶ್ರೀ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು, ಯಡಿಯೂರು ತೋಂಟದಾರ್ಯ ಮಠ, ಬಾಲ್ಕಿಯ  ಶ್ರೀ ಡಾ. ವಸವಲಿಂಗ ಪಟ್ಟಾಧ್ಯಕ್ಷರು ಹೀರೆಮಠ ಸಂಸ್ಥಾನ,  ಸಾಣೆಹಳ್ಳಿಯ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ.

ಅಭಿಯಾನದ ಉದ್ದೇಶಗಳು

  • ಸಾರ್ವಜನಿಕರಲ್ಲಿ ಅಧ್ಯಾತ್ಮದ ಅರಿವು ಮೂಡಿಸುವುದು
  • ಸಮಾಜದಲ್ಲಿ ಶಾಂತಿ ಮತ್ತು ಸಹಬಾಳ್ವೆ ಬೆಳೆಸುವುದು
  • ವ್ಯಸನಮುಕ್ತ ಸಮಾಜ ನಿರ್ಮಾಣ
  • ಸದುಪದೇಶದ ಮೂಲಕ ಯುವಜನತೆಗೆ ದಾರಿದೀಪವಾಗುವುದು
  • ಅಂಧಶ್ರದ್ಧೆ ಅಳಿಸಿ ಸುಜ್ಞಾನ ಬೆಳೆಸುವುದು
  • ಸಮ ಸಮಾಜ ನಿರ್ಮಾಣ
  • ಮಹಿಳೆಯರ ಘನತೆ ಕಾಪಾಡುವುದು

ಅಭಿಯಾನದ ದಿನ ನಡೆಯುವ ಕಾರ್ಯಕ್ರಮಗಳು (17-09-2025 ಬುಧವಾರ)

  • ಬೆಳಿಗ್ಗೆ 11:00: ಶಿವಮೊಗ್ಗ ನಗರದಲ್ಲಿನ ವಿವಿಧ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ವಚನ ಸಂವಾದ
  • ಸಂಜೆ 4:00 – 6:00: ಶಿವಶರಣರ ಅಕ್ಕಮಹಾದೇವಿ ವೃತ್ತದಿಂದ ಕುವೆಂಪು ರಂಗಮಂದಿರದವರೆಗೆ ಪಾದಯಾತ್ರೆ
  • ಸಂಜೆ 6:00 ರಿಂದ: ಕುವೆಂಪು ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ವಚನಗಾನ, ಉಪನ್ಯಾಸ, ಆಶೀರ್ವಚನ ಮತ್ತು ಪುಸ್ತಕ ಬಿಡುಗಡೆ
  • ರಾತ್ರಿ 8:30: ‘ಜಂಗಮದೆಡೆಗೆ’ ನಾಟಕ ಪ್ರದರ್ಶನ

 “ಬನ್ನಿ, ಭಾಗವಹಿಸಿ… ಬಸವ ಸಂಸ್ಕೃತಿ ಅಭಿಯಾನಕ್ಕೆ ಕೈ ಜೋಡಿಸಿ” ಎಂದು ಆಯೋಜಕರು ಕೋರಿದ್ದಾರೆ.

K.M.Sathish Gowda

Join WhatsApp

Join Now

Facebook

Join Now

Read more

ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಆಯುರ್ವೇದ ಮಹತ್ವದ ಪಾತ್ರ ವಹಿಸುತ್ತದೆ: ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ

ಹುತಾತ್ಮ ಯೋಧರ ಪತ್ನಿಯ ತ್ಯಾಗವೇ ಶ್ರೇಷ್ಠತೆ: ತರಳಬಾಳು ಜಗದ್ಗುರುಗಳ ಹೃದಯಸ್ಪರ್ಶಿ ಸಂದೇಶ

ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ವೈಯಕ್ತಿಕ–ಕುಟುಂಬ ನಿಂದನೆಗೆ ತೆರೆ ಎಳೆಯಲು ರಾಜಕೀಯ ನಾಯಕರಿಗೆ ಜಗದ್ಗುರುಗಳ ಖಡಕ್ ಸೂಚನೆ,.!

ಬೆಳ್ಳಿ ಪಲ್ಲಕ್ಕಿಯಲ್ಲಿ ಜಗದ್ಗುರುಗಳ ದರ್ಶನ: ಭದ್ರಾವತಿಯಲ್ಲಿ ತರಳಬಾಳು ಹುಣ್ಣಿಮೆಯ ವೈಭವ, ಲಕ್ಷಾಂತರ ಭಕ್ತರ ಸಮಾಗಮ

ತರಳಬಾಳು ಹುಣ್ಣಿಮೆ ಮಹೋತ್ಸವ 2026: ‘ಮನೆಯೊಳಗೆ ಧರ್ಮ, ಹೊರಗೆ ಸಂವಿಧಾನ’ – ನ್ಯಾಯಮೂರ್ತಿ ಶ್ರೀಶಾನಂದ ಸಂದೇಶ

ತರಳಬಾಳು ಹುಣ್ಣಿಮೆ ಮಹೋತ್ಸವ 2026: ಸಮೂಹ ಮಾಧ್ಯಮ ಸಮಾಜದ ದಿಕ್ಕು ನಿರ್ಧರಿಸುವ ಶಕ್ತಿಯಾಗಿದೆ: ಸಿ.ಎಸ್. ಷಡಾಕ್ಷರಿ

Leave a Comment