ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಶಿವಮೊಗ್ಗದಲ್ಲಿ ಅದ್ದೂರಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಮೆರವಣಿಗೆ

On: September 6, 2025 2:43 PM
Follow Us:

ಕೋಟೆ ಶ್ರೀ ಭೀಮೇಶ್ವರ ದೇವಸ್ಥಾನದಿಂದ ಪ್ರಾರಂಭ – ಸಾವಿರಾರು ಭಕ್ತರ ಸಂಭ್ರಮ, ಬಿಗಿ ಪೊಲೀಸ್ ಬಂದೋಬಸ್ತ್

ಶಿವಮೊಗ್ಗ :ನಗರದ ಭೀಮೇಶ್ವರ ದೇವಸ್ಥಾನದಿಂದ ಹಿಂದೂ ಮಹಾಸಭಾ ವತಿಯಿಂದ ಅದ್ಧೂರಿಯಾಗಿ ಗಣಪತಿ ವಿಸರ್ಜನೆ ಮೆರವಣಿಗೆ ಆರಂಭವಾಯಿತು. ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದು, ಉತ್ಸಾಹಭರಿತ ವಾತಾವರಣದಲ್ಲಿ ಮೆರವಣಿಗೆ ಸಾಗಿತು.

ಬೆಳಗ್ಗಿನಿಂದಲೇ ದೇವಸ್ಥಾನ ಪ್ರದೇಶದಲ್ಲಿ ಭಕ್ತರ ಸಂಚಾರ ಹೆಚ್ಚಾಗಿತ್ತು. ಗಣಪತಿ ಬಪ್ಪಾ ಮೋರಿಯಾ ಎಂಬ ಘೋಷಣೆಗಳಿಂದ ನಗರವೇ ಮುಗಿಲುಮುಟ್ಟಿದಂತಿತ್ತು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ತಮ್ಮ ವೈವಿಧ್ಯಮಯ ಕಲೆಗಳನ್ನು ಪ್ರದರ್ಶಿಸಿ ಜನರನ್ನು ಮನರಂಜಿಸಿತು. ನಾದಸ್ವರ, ಡೊಳ್ಳು ಕುಣಿತ, ಹುಲಿ ಕುಣಿತ, ಕೀಲುಕುದುರೆ, ಸೇರಿದಂತೆ ಹಲವಾರು ಜನಪದ ಕಲಾ ರೂಪಗಳು ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆಯಾಗಿದ್ದವು.

ಮಹಿಳೆಯರು, ಮಕ್ಕಳು ಮತ್ತು ಯುವಕರು ಪರಂಪರೆಯ ಉಡುಪಿನಲ್ಲಿ ಭಕ್ತಿಗೀತೆಗಳು ಮತ್ತು ನೃತ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಮೆರವಣಿಗೆಯ ಹರ್ಷೋಲ್ಲಾಸವನ್ನು ಇನ್ನಷ್ಟು ಹೆಚ್ಚಿಸಿತು. ಭಕ್ತರ ಉತ್ಸಾಹ, ಭಕ್ತಿ ಮತ್ತು ನಂಬಿಕೆಗಳು ಗಣೇಶನಿಗೆ ಸಲ್ಲಿಸಿದ ಹೃದಯಸ್ಪರ್ಶಿ ಭಕ್ತಿಭಾವವನ್ನು ವ್ಯಕ್ತಪಡಿಸಿತು.

ಜನಸಾಗರ ನಿಯಂತ್ರಣಕ್ಕಾಗಿ ನಗರದಾದ್ಯಂತ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಮಾಡಿತ್ತು. ಟ್ರಾಫಿಕ್ ಪೊಲೀಸ್ ಸಿಬ್ಬಂದಿಗಳು ವಾಹನ ಸಂಚಾರವನ್ನು ಸುಗಮಗೊಳಿಸಲು ವಿಶೇಷ ಕ್ರಮಗಳನ್ನು ಕೈಗೊಂಡಿದ್ದರು. ಭದ್ರತಾ ದೃಷ್ಟಿಯಿಂದ ಸಿಸಿಟಿವಿ ನಿಗಾ ವ್ಯವಸ್ಥೆಯನ್ನೂ ಏರ್ಪಡಿಸಲಾಗಿದೆ.

K.M.Sathish Gowda

Join WhatsApp

Join Now

Facebook

Join Now

Leave a Comment