ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ಶುದ್ಧ ನೀರಿನ ಘಟಕ ಹಾಳಾದ ದುಸ್ಥಿತಿ ಬಯಲು,.!; “ಕಮೀಷನ್ ವಾಸನೆ”, ಹೋಟೆಲ್ ಲಾಬಿಗೆ ಬಲಿಯಾದ ಆಸ್ಪತ್ರೆ ಸೌಲಭ್ಯ,.!

On: October 10, 2025 8:54 PM
Follow Us:

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಸ್ಥಾಪಿಸಲಾದ ಶುದ್ಧ ಕುಡಿಯುವ ನೀರಿನ ಘಟಕ ಈಗ ಪಾಳು ಬಿದ್ದ ಸ್ಥಿತಿಯಲ್ಲಿದ್ದು, ರೋಗಿಗಳು ಹಾಗೂ ಅವರ ಸಂಬಂಧಿಗಳಿಗೆ ತೀವ್ರ ತೊಂದರೆಯಾಗಿದೆ. ಲಕ್ಷಾಂತರ ರೂ. ವೆಚ್ಚದಲ್ಲಿ ಸ್ಥಾಪಿಸಲಾದ ಈ ಘಟಕವನ್ನು ಅಂದಿನ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅವರು ಪ್ರಾರಂಭಿಸಿದ್ದರು. ಅವರ ಕಾಲದಲ್ಲಿ ಪ್ರಾರಂಭಿಸಲ್ಪಟ್ಟ ಈ ಘಟಕ ಇದೀಗ ಕಬ್ಬಿಣದ ಕಸವಾಗುವ ಹಾದಿಯಲ್ಲಿ ನಿಂತಿದೆ. ಈ ಘಟಕದ ಮೂಲಕ ಆಸ್ಪತ್ರೆಗೂ ಬರುವ ರೋಗಿಗಳು ಹಾಗೂ ಸಾರ್ವಜನಿಕರು ಕಡಿಮೆ ದರದಲ್ಲಿ ಶುದ್ಧ ನೀರನ್ನು ಪಡೆಯುತ್ತಿದ್ದರು. ಈಗ ಅದೇ ರೋಗಿಗಳು ಬಾಯಾರಿಕೆಯಿಂದ ನರಳುತ್ತಿದ್ದಾರೆ.

ಆಸ್ಪತ್ರೆ ಆವರಣದ ಒಳಗೆ ಇರುವ ಈ ಘಟಕವು ಕೆಲವು ವರ್ಷಗಳವರೆಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೆ, ಖಾಸಗಿ ಹೋಟೆಲ್ ಆರಂಭವಾದ ದಿನದಿಂದಲೇ ಘಟಕದ ಚಕ್ರಗಳು ನಿಂತವು. ಹೋಟೆಲ್ ಮಾಲೀಕರಿಗೆ ಹೆಚ್ಚಿನ ಲಾಭ ಆಗುವ ಉದ್ದೇಶದಿಂದಲೇ ಶುದ್ಧ ನೀರಿನ ಘಟಕವನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂಬ ಆರೋಪಗಳು ಸ್ಥಳೀಯರೊಳಗೆ ಕೇಳಿ ಬರುತ್ತಿವೆ.

ಇದರಿಂದ ಬರುವ ಆದಾಯವನ್ನು ಸರ್ಕಾರದ ಮೆಡಿಕಲ್ ಕಾಲೇಜು ಆಡಳಿತ ಮಂಡಳಿಯೇ ಸಂಗ್ರಹಿಸುತ್ತಿತ್ತು. ಆದರೆ, ಇದೀಗ ಈ ಶುದ್ಧ ನೀರಿನ ಘಟಕ ಸಂಪೂರ್ಣವಾಗಿ ಹಾಳಾಗಿದ್ದು, ಯಾರೂ ಅದರ ಸರಿಪಡಿಸುವ ಅಥವಾ ಪುನರಾರಂಭದ ಕಡೆ ಗಮನಹರಿಸಿಲ್ಲ. ಸ್ಥಳೀಯರು ಹೇಳುವಂತೆ, ಘಟಕ ಹಾಳಾಗಲು ಖಾಸಗಿ ಹೋಟೆಲ್ ಪ್ರಾರಂಭವಾಗಿದ್ದೇ ಪ್ರಮುಖ ಕಾರಣ. ಹೋಟೆಲ್ ಆರಂಭವಾದ ದಿನದಿಂದಲೇ ನೀರಿನ ಘಟಕಕ್ಕೆ “ಗೂಟ ಬಿತ್ತು” ಎಂಬಂತಾಗಿದೆ. ರೋಗಿಗಳು ಮತ್ತು ಸಂಬಂಧಿಗಳು ಈಗ ಶುದ್ಧ ನೀರಿಗಾಗಿ ಬೃಹತ್ ಮೊತ್ತ ನೀಡಿ ಖಾಸಗಿ ಹೋಟೆಲ್‌ನಿಂದಲೇ ನೀರು ಖರೀದಿಸುವಂತಾಗಿದೆ.

ಸಾಮಾನ್ಯರಿಗೆ ಅನುಕೂಲವಾಗಬೇಕೆಂದು ಸ್ಥಾಪಿಸಲಾದ ಸಾರ್ವಜನಿಕ ಆಸ್ತಿಯನ್ನು ನಿರ್ಲಕ್ಷ್ಯದಿಂದ ಪಾಳು ಬಿಟ್ಟಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಹಿಂದೆ ಕಮೀಷನ್ ದಂಧೆಯ ವಾಸನೆ ತಾಂಡವಾಡುತ್ತಿದೆ” ಎಂದು ಜನರು ಆರೋಪಿಸುತ್ತಿದ್ದಾರೆ.

ಆಸ್ಪತ್ರೆಗೆ ಬರುವವರು ಬಹುಮಟ್ಟಿಗೆ ಆರ್ಥಿಕವಾಗಿ ಹಿಂದುಳಿದವರು, ಬಡವರು. ಇವರು ಈಗ ಶುದ್ಧ ನೀರಿಗಾಗಿ ಹೆಚ್ಚು ಹಣ ಖರ್ಚುಮಾಡಬೇಕಾದ ಸ್ಥಿತಿ ಎದುರಿಸುತ್ತಿದ್ದಾರೆ.“ನೀರಿನ ಘಟಕ ಕಾರ್ಯನಿರ್ವಹಿಸುತ್ತಿದ್ದರೆ ಜನರು ಕಡಿಮೆ ದರದಲ್ಲಿ ಶುದ್ಧ ನೀರನ್ನು ಪಡೆಯುತ್ತಿದ್ದರು. ಈಗ ರೋಗಿಗಳು ಮತ್ತು ಸಂಬಂಧಿಗಳು ಹೋಟೆಲ್‌ನಿಂದಲೇ ಹೆಚ್ಚು ಬೆಲೆಗೆ ನೀರು ಕೊಂಡುಕೊಳ್ಳಬೇಕಾದ ದುಸ್ಥಿತಿ ಉಂಟಾಗಿದೆ. ಇದು ಬಡವರ ಮೇಲೆ ನಡೆದ ದೌರ್ಜನ್ಯ”ಎಂದು ಜನರು ಕಿಡಿಕಾರುತ್ತಿದ್ದಾರೆ.

ಮೆಡಿಕಲ್ ಕಾಲೇಜು ಆಡಳಿತ ಮಂಡಳಿಯವರು ಘಟಕದಿಂದ ಬಂದ ಆದಾಯವನ್ನು ವರ್ಷಗಳ ಕಾಲ ಪಡೆದುಕೊಳ್ಳುತ್ತಿದ್ದರು. ಆದರೆ ಘಟಕ ಹಾಳಾದ ನಂತರ ತುರ್ತು ದುರಸ್ತಿ ಅಥವಾ ಬದಲಾವಣೆ ಕ್ರಮ ಕೈಗೊಳ್ಳಬೇಕಾದ ಸಂದರ್ಭದಲ್ಲಿ, ಅವರು ಕಣ್ಣು ಮುಚ್ಚಿಕೊಂಡಿರುವುದು ಜನರ ಕೋಪಕ್ಕೆ ಕಾರಣವಾಗಿದೆ. “ಜನರಿಂದ ಬಂದ ಹಣ ತೆಗೆದುಕೊಳ್ಳೋದು ಗೊತ್ತು, ಆದರೆ ಜನರಿಗೆ ಸೇವೆ ನೀಡೋದು ಗೊತ್ತಿಲ್ಲ” ಎಂಬ ಮಾತುಗಳು ಆಸ್ಪತ್ರೆ ಆವರಣದಲ್ಲಿ ಕೇಳಿ ಬರುತ್ತಿವೆ.

ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ತಿಮ್ಮಪ್ಪ ಮತ್ತು ಜಿಲ್ಲಾ ಸರ್ಜನ್ ಡಾ. ಸಿದ್ದನಗೌಡ ಪಾಟೀಲ್ ಅವರಿಗೆ ಘಟಕ ಹಾಳಾಗಿದೆ ಎಂಬುದು ತಿಳಿದಿದ್ದರೂ ಕ್ರಮ ಕೈಗೊಳ್ಳದಿರುವುದು ಜನರ ಆಕ್ರೋಶವನ್ನು ಹೆಚ್ಚಿಸಿದೆ. “ಇವರು ಕಣ್ಣು-ಕಿವಿ ಮುಚ್ಚಿಕೊಂಡಿದ್ದಾರೆ” ಎಂಬ ಮಾತು ಜನರೊಳಗೆ ಕೇಳಿಬರುತ್ತಿದೆ. “ನಮ್ಮ ಆಸ್ಪತ್ರೆ ಜನರ ಬದುಕಿನ ಕೇಂದ್ರ. ಆದರೆ ಅಧಿಕಾರಿಗಳು ಖಾಸಗಿ ಹೋಟೆಲ್ ಮಾಫಿಯಾದ ಮುಂದೆ ತಲೆಬಾಗಿದ್ದಾರೆ” ಎಂದು ರೋಗಿ ಬಂಧುಗಳು ಆರೋಪಿಸುತ್ತಿದ್ದಾರೆ.

ಈ ಘಟನೆಯಲ್ಲಿ ಭ್ರಷ್ಟಾಚಾರದ ವಾಸನೆ ತೀವ್ರವಾಗಿ ಮೂಡಿದೆ. “ಇದರಲ್ಲಿ ಕಮೀಷನ್ ಮಾಫಿಯಾ, ಲಾಭದ ಆಟ, ಅಧಿಕಾರಿಗಳ ಸಂಧಾನ ಎಲ್ಲವೂ ಇದೆ. ಬಡವರ ಹಕ್ಕಿನ ಮೇಲೆ ಯಾರೋ ವ್ಯಾಪಾರ ಮಾಡಿದ್ದಾರೆ” ಎಂದು ನಾಗರಿಕರು ಖಂಡನಾ ಧ್ವನಿಯಲ್ಲಿ ಹೇಳಿದ್ದಾರೆ.

ಸ್ಥಳೀಯ ಶಾಸಕ ಚನ್ನಬಸಪ್ಪ ಅವರೂ ಈ ವಿಷಯದ ಬಗ್ಗೆ ಮೌನವಾಗಿರುವುದು ಜನರಲ್ಲಿ ದೊಡ್ಡ ಅಸಮಾಧಾನ ಉಂಟುಮಾಡಿದೆ. “ಜನರ ಆಯ್ಕೆಯ ಪ್ರತಿನಿಧಿ ಬದಲಿಗೆ ಹೋಟೆಲ್ ಮಾಫಿಯಾದ ಪರವಾಗಿ ನಿಂತಂತಾಗಿದೆ. ಜನರ ಅಳಲು ಕೇಳದ ಶಾಸಕರಿಗೆ ಜನರ ಶಾಪವೇ ಸಿಗಲಿ” ಎಂದು ಕೆಲ ಹಿರಿಯ ನಾಗರಿಕರು ಕಿಡಿಕಾರಿದ್ದಾರೆ.

ಸಾರ್ವಜನಿಕರು ಜಿಲ್ಲಾಡಳಿತವನ್ನು ತೀವ್ರವಾಗಿ ಖಂಡಿಸುತ್ತಾ, ಘಟಕವನ್ನು ತಕ್ಷಣ ಪುನರಾರಂಭ ಮಾಡುವಂತೆ ಆಗ್ರಹಿಸಿದ್ದಾರೆ.“ಜನರ ಹಿತಕ್ಕಾಗಿ ನಿರ್ಮಿಸಿದ ಘಟಕವನ್ನು ಖಾಸಗಿ ಲಾಭಕ್ಕಾಗಿ ನಿಷ್ಕ್ರಿಯಗೊಳಿಸುವುದು ಸರ್ಕಾರದ ನೀತಿಗೂ ವಿರುದ್ಧ. ಜಿಲ್ಲಾಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ಮಾಡಿ, ಘಟಕವನ್ನು ಸರಿ ಪಡಿಸಿ ಜನರ ಸೇವೆಗೆ ಮುಕ್ತಗೊಳಿಸಬೇಕು” ಎಂದು ನಾಗರಿಕರು ಆಗ್ರಹಿಸಿದ್ದಾರೆ.

K.M.Sathish Gowda

Join WhatsApp

Join Now

Facebook

Join Now

Read more

‘ಕೊಟ್ಟ ಮಾತು ಉಳಿಯುತ್ತದೆಯೇ?’ – ಕಾಂಗ್ರೆಸ್ ಒಳಕಿಚ್ಚಿಗೆ ಸುರೇಶ್ ಮಾರ್ಮಿಕ ನುಡಿ, ಡಿಕೆಶಿ ದೆಹಲಿ ಪಯಣ ರಾಜಕೀಯ ಚರ್ಚೆ ತೀವ್ರ

“ಮೊದಲು ನಿಮ್ಮ ಹೈಕಮಾಂಡ್‌ ಹುಡುಕಿ, ಬಳಿಕ ಮೋದಿ ಬಗ್ಗೆ ಮಾತನಾಡಿ”: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ತೀವ್ರ ವಾಗ್ದಾಳಿ

ಪ್ಲಾಸ್ಟಿಕ್ ಮುಕ್ತ ಶಿವರಾತ್ರಿ ಉತ್ಸವಕ್ಕೆ ಹರಕೆರೆ ಹರಕೇಶ್ವರ ದೇವಸ್ಥಾನದಲ್ಲಿ ಸಂಕಲ್ಪ

ಜನಸೇವೆಗೆ ಬದ್ಧ ನಾಯಕತ್ವ: ಹಾರನಹಳ್ಳಿಯಲ್ಲಿ ಡಿ.ಎಸ್. ಅರುಣ್ ಅವರಿಂದ ಪಂಚಾಯಿತಿ ಕಟ್ಟಡ ಉದ್ಘಾಟನೆ ಹಾಗೂ ಹಕ್ಕುಪತ್ರ ವಿತರಣೆ

‘ಎಲ್ಲರೂ ಬಾಯಿ ಮುಚ್ಚಿಕೊಂಡಿರಬೇಕು’: ಕಾಂಗ್ರೆಸ್ ನಾಯಕರಿಗೆ ಡಿಕೆಶಿ ಖಡಕ್ ಸಂದೇಶ

ಜನಸಂಖ್ಯೆಗೆ ಅನುಗುಣವಾಗಿ ಎಸ್‌ಸಿ–ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ಕೇಂದ್ರದ ಮೇಲೆ ಒತ್ತಡ: ಮುಖ್ಯಮಂತ್ರಿ ಸಿದ್ದರಾಮಯ್ಯ

Leave a Comment