ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಲೀಡರ್ ಅವಾರ್ಡ್ಸ್ 2025: “Best ಜನನಾಯಕ” ವಿಭಾಗದಲ್ಲಿ ಮಾಡಾಳ್ ಮಲ್ಲಿಕಾರ್ಜುನ್ – ಹೆಚ್ಚಿನ ವೋಟ್ ನೀಡಿ ಬೆಂಬಲಿಸಲು ಮನವಿ

On: March 8, 2026 5:32 PM
Follow Us:

ಚನ್ನಗಿರಿ: ಕರ್ನಾಟಕ ಟಿವಿ ನಡೆಸುತ್ತಿರುವ ಲೀಡರ್ ಅವಾರ್ಡ್ಸ್ 2025 ಕಾರ್ಯಕ್ರಮದಲ್ಲಿ “Best ಜನನಾಯಕ – ಜನರೊಂದಿಗೆ ನಿರಂತರ” ವಿಭಾಗದಲ್ಲಿ ಯುವ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್ ಅವರು ನಾಮಿನೇಟ್ ಆಗಿರುವುದು ಚನ್ನಗಿರಿ ಕ್ಷೇತ್ರದ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ. ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತು ಮೂಡಿಸಿಕೊಂಡಿರುವ ಅವರು ಯುವಕರಿಗೆ ಪ್ರೇರಣೆಯಾಗಿರುವ ನಾಯಕರೆಂದು ಜನರು ಗುರುತಿಸಿದ್ದಾರೆ.

ಸಮಾಜದ ಎಲ್ಲಾ ವರ್ಗದ ಜನರೊಂದಿಗೆ ಹತ್ತಿರದ ಸಂಪರ್ಕ ಹೊಂದಿರುವ ಮಾಡಾಳ್ ಮಲ್ಲಿಕಾರ್ಜುನ್ ಅವರು ಯಾವುದೇ ಸಮಸ್ಯೆ ಬಂದಾಗ ತಕ್ಷಣ ಸ್ಪಂದಿಸುವ ಸ್ವಭಾವದಿಂದ ಜನಮನ ಗೆದ್ದಿದ್ದಾರೆ. ಕ್ಷೇತ್ರದ ಜನರೊಂದಿಗೆ ಸದಾ ಸಂಪರ್ಕದಲ್ಲಿದ್ದು, ಅವರ ಕಷ್ಟ-ಸುಖಗಳಿಗೆ ಕೈಜೋಡಿಸುವ ಮೂಲಕ ಅವರು ಜನಸೇವೆಯ ದಾರಿಯಲ್ಲಿ ಮುಂದುವರಿಯುತ್ತಿದ್ದಾರೆ.

ಅವರ ತಂದೆಯಾದ ಹಿರಿಯ ನಾಯಕ ಮಾಡಾಳ್ ವಿರೂಪಾಕ್ಷ ಅವರು ಚನ್ನಗಿರಿ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ಇಂದಿಗೂ ಹಳ್ಳಿ-ಹಳ್ಳಿಗಳಲ್ಲಿ ಜನರ ನೆನಪಿನಲ್ಲಿ ಉಳಿದಿವೆ. ರಸ್ತೆ, ಕುಡಿಯುವ ನೀರು, ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅವರು ಮಾಡಿದ ಸೇವೆಗಳು ಕ್ಷೇತ್ರದ ಅಭಿವೃದ್ಧಿಗೆ ಭದ್ರವಾದ ನೆಲೆಯನ್ನೇ ನಿರ್ಮಿಸಿವೆ. ತಂದೆಯ ಅದೇ ಸೇವಾ ಪರಂಪರೆಯನ್ನು ಮುಂದುವರೆಸುತ್ತಾ ಮಾಡಾಳ್ ಮಲ್ಲಿಕಾರ್ಜುನ್ ಅವರು ಜನರ ಮಧ್ಯೆ ಸದಾ ಲಭ್ಯವಿರುವ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.

ರಾಜ್ಯದ ಹಿರಿಯ ರಾಜಕೀಯ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರೊಂದಿಗೆ ಸಮನ್ವಯದಿಂದ ಕೆಲಸ ಮಾಡುತ್ತಿರುವ ಅವರು ಯುವ ನಾಯಕತ್ವದ ಶಕ್ತಿಯನ್ನು ತೋರಿಸುತ್ತಿದ್ದಾರೆ. ಸಮಾಜದ ಅಭಿವೃದ್ಧಿ, ಯುವಕರ ಪ್ರಗತಿ ಮತ್ತು ಕ್ಷೇತ್ರದ ಸಮಗ್ರ ಬೆಳವಣಿಗೆ ಎಂಬ ಗುರಿಯನ್ನು ಇಟ್ಟುಕೊಂಡು ಅವರು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವೀರಶೈವ ಲಿಂಗಾಯತ ಸಮುದಾಯದ ಪ್ರಮುಖ ಮುಖಂಡರಾಗಿರುವ ಮಾಡಾಳ್ ಮಲ್ಲಿಕಾರ್ಜುನ್ ಅವರು ಸಮಾಜದ ಎಲ್ಲಾ ವರ್ಗಗಳ ಜನರನ್ನು ಒಂದೇ ವೇದಿಕೆಗೆ ತರುವ ಕೆಲಸ ಮಾಡುತ್ತಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕತ್ವ, ಸಮಾಜಮುಖಿ ಚಿಂತನೆ ಮತ್ತು ಯುವಶಕ್ತಿಯ ಪ್ರತಿನಿಧಿಯಾಗಿ ಅವರು ಈ ಅವಾರ್ಡ್‌ಗೆ ಆಯ್ಕೆಯಾಗಿರುವುದು ಕ್ಷೇತ್ರದ ಜನರಿಗೆ ಗೌರವದ ವಿಷಯವಾಗಿದೆ.

https://whatsapp.com/channel/0029Va9hDAN7dmeQoqBuVQ0K/1283

ವೋಟ್ ಮಾಡುವ ವಿಧಾನ:

  • ಮೇಲ್ಕಂಡ ಲಿಂಕ್ ಅನ್ನು ಓಪನ್ ಮಾಡಿ
  • ಮಾಡಾಳ್ ಮಲ್ಲಿಕಾರ್ಜುನ್ ಅವರ ಹೆಸರನ್ನು ಆಯ್ಕೆ ಮಾಡಿ
  • ನಿಮ್ಮ ಅಮೂಲ್ಯವಾದ ವೋಟ್ ನೀಡಿ

ಈ ಮಾಹಿತಿಯನ್ನು ವಾಟ್ಸ್ಆಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಂಚಿಕೊಳ್ಳಿ. ನಿಮ್ಮ ಪ್ರತಿಯೊಂದು ವೋಟ್ ನಮ್ಮ ಯುವ ನಾಯಕನಿಗೆ ಬಲ ನೀಡುತ್ತದೆ.

ಮಾಡಾಳ್ ಮಲ್ಲಿಕಾರ್ಜುನ್ ಅವರ ಅಭಿಮಾನಿ ಬಳಗದ ವತಿಯಿಂದ ಸಾರ್ವಜನಿಕರಲ್ಲಿ ಮನವಿ ಮಾಡಿದ್ದು, ನಮ್ಮ ನಾಯಕರು ಸದಾ ಜನರೊಂದಿಗೆ ಹಾಗೂ ಸಮಾಜದ ಎಲ್ಲಾ ವರ್ಗದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಯುವ ನಾಯಕರು. ಇಂತಹ ಜನಪರ ನಾಯಕತ್ವವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಎಲ್ಲರೂ ಒಂದಾಗಿ ಮುಂದೆ ಬಂದು ನಮ್ಮ ನಾಯಕ ಮಾಡಾಳ್ ಮಲ್ಲಿಕಾರ್ಜುನ್ ಅವರಿಗೆ ವೋಟ್ ಮಾಡಿ ಅವರನ್ನು ಜಯಶೀಲರನ್ನಾಗಿಸಬೇಕು. ಬನ್ನಿ… ನಮ್ಮ ನಾಯಕನಿಗೆ ವೋಟ್ ಮಾಡಿ ಯುವ ನಾಯಕತ್ವವನ್ನು ಬೆಂಬಲಿಸೋಣ ಎಂದು ಮಾಡಾಳ್ ಮಲ್ಲಿಕಾರ್ಜುನ್ ಅಭಿಮಾನಿ ಬಳಗ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

K.M.Sathish Gowda

Join WhatsApp

Join Now

Facebook

Join Now

Leave a Comment