ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಮಣ್ಣಿನ ಅಡಿಯಲ್ಲಿರುವ ಇತಿಹಾಸವನ್ನು ಸಮಾಜದ ಮುಂದೆ ತರುತ್ತಿರುವ ಮಲೆನಾಡು ಇತಿಹಾಸ ಸಂಶೋಧನೆ ಮತ್ತು ಅಧ್ಯಯನ ವೇದಿಕೆಯ ಕಾರ್ಯ ಶ್ಲಾಘನೀಯ; ನಿಮ್ಮ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ: ಕೆ.ಎಸ್. ಈಶ್ವರಪ್ಪ

On: July 25, 2026 8:55 PM
Follow Us:

ಶಿವಮೊಗ್ಗ: ಮಣ್ಣಿನಡಿಯಲ್ಲಿ ಮುಚ್ಚಿಹೋಗಿರುವ ನಮ್ಮ ಭವ್ಯ ಸಂಸ್ಕೃತಿ, ಪರಂಪರೆ ಮತ್ತು ಮಹಾಪುರುಷರ ಇತಿಹಾಸವನ್ನು ಉತ್ಖನನದ ಮೂಲಕ ಜಗತ್ತಿಗೆ ಅನಾವರಣಗೊಳಿಸುತ್ತಿರುವ ಮಲೆನಾಡು ಇತಿಹಾಸ ಸಂಶೋಧನೆ ಮತ್ತು ಅಧ್ಯಯನ ವೇದಿಕೆಯ ಶ್ರಮ ಅತ್ಯಂತ ಶ್ಲಾಘನೀಯ. ಈ ನಿಟ್ಟಿನಲ್ಲಿ ಸಂಸ್ಥೆಗೆ ಎದುರಾಗುವ ಸವಾಲುಗಳನ್ನು ಎದುರಿಸಲು ಹಾಗೂ ಸರ್ಕಾರ ಮತ್ತು ಸಮಾಜದ ಹಂತದಲ್ಲಿ ಅಗತ್ಯವಿರುವ ಎಲ್ಲಾ ರೀತಿಯ ಬೆಂಬಲ, ಸಹಕಾರ ನೀಡಲು ತಾವು ಸದಾ ಸಿದ್ಧರಿರುವುದಾಗಿ ಮಾಜಿ ಉಪ ಮುಖ್ಯಮಂತ್ರಿಗಳಾದ ಕೆ.ಎಸ್. ಈಶ್ವರಪ್ಪನವರು ಭರವಸೆ ವ್ಯಕ್ತಪಡಿಸಿದರು.

ಕರ್ನಾಟಕ ಸಂಘ ಮತ್ತು ಶ್ರೀಗಂಧ ಸಂಸ್ಥೆಯ ಸಹಯೋಗದಲ್ಲಿ, ಮಲೆನಾಡು ಇತಿಹಾಸ ಸಂಶೋಧನೆ ಮತ್ತು ಅಧ್ಯಯನ ವೇದಿಕೆ ವತಿಯಿಂದ ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ಆಯೋಜಿಸಿದ್ದ “ಬಾಡದ ಮಣ್ಣಿನಲ್ಲಿ ಮೂಡಿದ ಕನಕನ ಹೆಜ್ಜೆ ಗುರುತುಗಳು – ಕನಕದಾಸರ ಅರಮನೆ ಉತ್ಖನನದಿಂದ ಅನಾವರಣಗೊಂಡ ಇತಿಹಾಸ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉತ್ಖನನದ ಶ್ರಮ ಸುಲಭವಲ್ಲ: ವೇದಿಕೆಯ ಕಾರ್ಯಕ್ಕೆ ಕೆ.ಎಸ್.ಈಶ್ವರಪ್ಪ ಮೆಚ್ಚುಗೆ

ಶಿವಮೊಗ್ಗದ ಆದಿಚುಂಚನಗಿರಿ ಕ್ಷೇತ್ರದ ಪೂಜ್ಯ ಶ್ರೀ ನಾದಮಯಾನಂದನಾಥ ಸ್ವಾಮಿಯವರ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಈ ಸಮಾರಂಭದಲ್ಲಿ ಮಾತನಾಡಿದ ಈಶ್ವರಪ್ಪನವರು, “ಪುಸ್ತಕಗಳ ರೂಪದಲ್ಲಿ ಸಾಹಿತ್ಯ ಅಥವಾ ಕವಿತೆಗಳನ್ನು ತರುವುದು ಸುಲಭ. ಆದರೆ ನೆಲದಡಿಯಲ್ಲಿ ಅಡಗಿರುವ ಐತಿಹಾಸಿಕ ಅವಶೇಷಗಳನ್ನು ಉತ್ಖನನ ಮಾಡಿ, ಪ್ರತ್ಯಕ್ಷ ಸಾಕ್ಷ್ಯಾಧಾರಗಳೊಂದಿಗೆ ಜಗತ್ತಿಗೆ ತೋರಿಸುವುದು ಅತ್ಯಂತ ಕಠಿಣ ಹಾಗೂ ಜವಾಬ್ದಾರಿಯುತ ಕೆಲಸ. 500 ವರ್ಷಗಳ ಸುದೀರ್ಘ ಅವಧಿಯ ನಂತರ ಬಾಡದ ಮಣ್ಣಿನಲ್ಲಿ ಅಡಗಿದ್ದ ಕನಕದಾಸರ ಅರಮನೆಯ ಹೆಜ್ಜೆಗುರುತುಗಳನ್ನು ಹೊರತೆಗೆದು, ಕರ್ನಾಟಕದ ಚರಿತ್ರೆಯಲ್ಲಿ ಹೊಸ ಸಂಚಲನ ಮೂಡಿಸಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ಈ ಮಲೆನಾಡು ಇತಿಹಾಸ ಸಂಶೋಧನೆ ಮತ್ತು ಅಧ್ಯಯನ ವೇದಿಕೆ ಪಾತ್ರವಾಗಿದೆ,” ಎಂದು ಮುಕ್ತಕಂಠದಿಂದ ಶ್ಲಾಘಿಸಿದರು.

“ಈ ಸಂಸ್ಥೆಯ ಯುವ ಸಂಶೋಧಕರು ಈ ಮಹತ್ಕಾರ್ಯಕ್ಕೆ ಕೈಹಾಕದೇ ಹೋಗಿದ್ದರೆ, ಕನಕದಾಸರ ಆ ಮಹತ್ವದ ಐತಿಹಾಸಿಕ ಸಾಕ್ಷ್ಯಗಳು ಮಣ್ಣಿನಡಿಯಲ್ಲೇ ಲೀನವಾಗಿ ಹೋಗುತ್ತಿದ್ದವು.”

— ಕೆ.ಎಸ್. ಈಶ್ವರಪ್ಪ, ಮಾಜಿ ಉಪ ಮುಖ್ಯಮಂತ್ರಿ

“ನೀವು ಅನಾಥರಲ್ಲ, ನಿಮ್ಮ ಬೆನ್ನೆಲುಬಾಗಿ ನಾವಿದ್ದೇವೆ”

ಕೆ.ಎಸ್.ಈಶ್ವರಪ್ಪನವರು ವೇದಿಕೆಯ ಸಂಶೋಧಕರ ಹಾಗೂ ಪದಾಧಿಕಾರಿಗಳ ಕಾರ್ಯದೈನ್ಯತೆಯನ್ನು ಸ್ಮರಿಸಿದ ಅವರು, “ಇತ್ತೀಚೆಗೆ ದೀಪಕ್ ನಾಡಿಗ್ ಹಾಗೂ ಅವರ ತಂಡ ನನ್ನ ಬಳಿ ಬಂದು ಸೊರಬ ತಾಲೂಕಿನ ಉತ್ಖನನದ ಯೋಜನೆಗಳು, ಇಲಾಖೆಗಳ ಅನುಮತಿ ಪಡೆಯುವಲ್ಲಿ ಆಗುತ್ತಿರುವ ತೊಡಕುಗಳು ಹಾಗೂ ಆರ್ಥಿಕ ಸವಾಲುಗಳ ಬಗ್ಗೆ ಚರ್ಚಿಸಿದಾಗ ನನಗೆ ಸಂತೋಷದ ಜೊತೆಗೆ ನೋವೂ ಆಯಿತು. ಇಷ್ಟೊಂದು ಬುದ್ಧಿವಂತಿಕೆ, ಜ್ಞಾನ ಮತ್ತು ಕಷ್ಟಪಡುವ ಮನಸ್ಸಿದ್ದರೂ ಸರ್ಕಾರಗಳಿಂದ ಸೂಕ್ತ ಪ್ರೋತ್ಸಾಹ ಸಿಗದಿರುವುದು ದುರದೃಷ್ಟಕರ,” ಎಂದರು.

ಇತಿಹಾಸ ಸಂಶೋಧಕರಿಗೆ ಧೈರ್ಯ ತುಂಬಿದ ಅವರು, “ನಾವು ಅನಾಥರಾಗಿದ್ದೇವೆ, ನಮಗೆ ಸರ್ಕಾರ ಅಥವಾ ಸಮಾಜದ ಬೆಂಬಲ ಸಿಗುತ್ತಿಲ್ಲ ಎಂದು ನೀವು ಯಾವುದೇ ಕಾರಣಕ್ಕೂ ನಿರಾಶರಾಗುವ ಅಗತ್ಯವಿಲ್ಲ. ನಿಮ್ಮ ಈ ಪವಿತ್ರವಾದ ಕಾರ್ಯದ ಹಿಂದೆ ಸಂಪೂರ್ಣ ಬೆನ್ನೆಲುಬಾಗಿ ನಿಲ್ಲಲು ನಾನು ತಯಾರಿದ್ದೇನೆ. ಸರ್ಕಾರಿ ಮಟ್ಟದಲ್ಲಿರುವ ತೊಡಕುಗಳನ್ನು ಖುದ್ದು ಕುಳಿತು ಬಗೆಹರಿಸಿ, ಮುಂದಿನ ಎಲ್ಲಾ ಯೋಜನೆಗಳಿಗೆ ಸಂಪೂರ್ಣ ಸಹಕಾರ ನೀಡುವ ಜವಾಬ್ದಾರಿ ನನ್ನದು,” ಎಂದು ಭರವಸೆಯನ್ನು ನೀಡಿದರು.

Oplus_16908288

“ಕುಲ ಕುಲವೆಂದು ಹೊಡೆದಾಡಬೇಡಿ” – ಕನಕದಾಸರ ಸಂದೇಶ ಇಂದಿಗೆ ಅತ್ಯಗತ್ಯ: ಕೆ.ಎಸ್.ಈಶ್ವರಪ್ಪ

ಕನಕದಾಸರ ಚಿಂತನೆಗಳು ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿವೆ ಎಂದು ಹೇಳಿದ ಕೆ.ಎಸ್.ಈಶ್ವರಪ್ಪನವರು, “ಕುಲ ಕುಲವೆಂದು ಹೊಡೆದಾಡಬೇಡಿ ಎಂಬ ಕನಕದಾಸರ ಸಂದೇಶ ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿದೆ. ಜಾತಿ-ಭೇದಗಳನ್ನು ಮೀರಿ ಸಮಾನತೆ ಮತ್ತು ಮಾನವೀಯತೆಯ ಮೌಲ್ಯಗಳನ್ನು ಅವರು ಶತಮಾನಗಳ ಹಿಂದೆಯೇ ಸಾರಿದ್ದರು. ಇಂತಹ ಮಹಾಪುರುಷರ, ಕೆಳದಿ ಶಿವಪ್ಪ ನಾಯಕ ಹಾಗೂ ಮದಕರಿ ನಾಯಕರಂತಹ ಕ್ರಾಂತಿಕಾರಿಗಳ ಇತಿಹಾಸವನ್ನು ಇಂದಿನ ಪೀಳಿಗೆಗೆ ತಲುಪಿಸುವುದು ಪ್ರತಿಯೊಬ್ಬ ನಾಗರಿಕನ ಮತ್ತು ಸರ್ಕಾರದ ಕರ್ತವ್ಯವಾಗಿದೆ,” ಎಂದರು.

ಇತಿಹಾಸವನ್ನು ಪುಸ್ತಕಗಳಲ್ಲಿ ಓದುವುದು ಒಂದು ಭಾಗವಾದರೆ, ಉತ್ಖನನದ ಮೂಲಕ ನೈಜ ಸಾಕ್ಷ್ಯಗಳನ್ನು ಹೊರತೆಗೆದು ಸಮಾಜದ ಮುಂದೆ ತರುವುದು ಅತ್ಯಂತ ಕಠಿಣ ಮತ್ತು ಅಪರೂಪದ ಸಾಧನೆ ಎಂದು ಅವರು ಹೇಳಿದರು.

“ಪುಸ್ತಕಗಳನ್ನು ಬರೆಯುವುದು ಸುಲಭ. ಆದರೆ ಐದು ಶತಮಾನಗಳ ಹಿಂದಿನ ಅರಮನೆ, ಕಟ್ಟಡಗಳು ಮತ್ತು ಪುರಾತತ್ವ ಕುರುಹುಗಳನ್ನು ವೈಜ್ಞಾನಿಕವಾಗಿ ಉತ್ಖನನ ಮಾಡಿ ಇತಿಹಾಸವನ್ನು ಸಾಬೀತುಪಡಿಸುವುದು ಅತ್ಯಂತ ದೊಡ್ಡ ಕಾರ್ಯ. ಮಲೆನಾಡು ಇತಿಹಾಸ ಸಂಶೋಧನೆ ಮತ್ತು ಅಧ್ಯಯನ ವೇದಿಕೆ ಈ ಮಹತ್ತರ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಇದಕ್ಕಾಗಿ ಸಂಸ್ಥೆಯ ಪ್ರತಿಯೊಬ್ಬರೂ ಅಭಿನಂದನೆಗೆ ಅರ್ಹರು” ಎಂದು ಶ್ಲಾಘಿಸಿದರು.

ಕೊನೆಯಲ್ಲಿ ಸಂಶೋಧಕರಿಗೆ ಧೈರ್ಯ ತುಂಬಿದ ಈಶ್ವರಪ್ಪನವರು, “ನಮಗೆ ಸರ್ಕಾರದ ಬೆಂಬಲ ಇಲ್ಲ, ಸಮಾಜದ ಸಹಕಾರ ಕಡಿಮೆ ಎಂದು ಯಾವುದೇ ಕಾರಣಕ್ಕೂ ನಿರಾಶರಾಗಬೇಡಿ. ನಿಮ್ಮಂತಹ ಇತಿಹಾಸ ಪ್ರೇಮಿಗಳ ಪ್ರಯತ್ನವೇ ನಾಳೆಯ ಪೀಳಿಗೆಗೆ ನಿಜವಾದ ಸಂಪತ್ತು. ನಿಮ್ಮೊಂದಿಗೆ ನಾನು ಇದ್ದೇನೆ. ನಿಮ್ಮ ಪ್ರತಿಯೊಂದು ಉತ್ತಮ ಪ್ರಯತ್ನಕ್ಕೂ ನನ್ನ ಸಂಪೂರ್ಣ ಬೆಂಬಲ, ಸಹಕಾರ ಮತ್ತು ಮಾರ್ಗದರ್ಶನ ಸದಾ ಇರುತ್ತದೆ. ಮಲೆನಾಡಿನ ಮಣ್ಣಿನ ಅಡಿಯಲ್ಲಿರುವ ಪ್ರತಿಯೊಂದು ಐತಿಹಾಸಿಕ ಕುರುಹು ಬೆಳಕಿಗೆ ಬರಲಿ, ನಮ್ಮ ಸಂಸ್ಕೃತಿ ಇನ್ನಷ್ಟು ಸಮೃದ್ಧವಾಗಲಿ ಎಂಬುದು ನನ್ನ ಹಾರೈಕೆ” ಎಂದು ಶುಭ ಹಾರೈಸಿದರು.

ಶಿವಮೊಗ್ಗದ ಆದಿಚುಂಚನಗಿರಿ ಕ್ಷೇತ್ರದ ಪೂಜ್ಯ ಶ್ರೀ ನಾದಮಯಾನಂದನಾಥ ಸ್ವಾಮೀಜಿಯವರು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ. ಎಚ್.ಆರ್. ಶಂಕರನಾರಾಯಣ ಶಾಸ್ತ್ರಿ ವಹಿಸಿದ್ದರು.

ವೇದಿಕೆಯಲ್ಲಿ ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಶ್ರೀಗಂಧ ಸಂಸ್ಥೆಯ ಅಧ್ಯಕ್ಷರಾದ ಕೆ.ಎಸ್. ಈಶ್ವರಪ್ಪ, ಕರ್ನಾಟಕ ಸಂಘದ ಕಾರ್ಯದರ್ಶಿ ವಿನಯ್ ಶಿವಮೊಗ್ಗ, ಮಲೆನಾಡು ಇತಿಹಾಸ ಸಂಶೋಧನೆ ಮತ್ತು ಅಧ್ಯಯನ ವೇದಿಕೆ (ನೋಂ.) ಅಧ್ಯಕ್ಷ ಡಾ. ಎಸ್.ಜಿ. ಸಾಮಕ್, ವೇದಿಕೆಯ ಕಾರ್ಯದರ್ಶಿ ದೀಪಕ್ ನಾಡಿಗ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಇದಲ್ಲದೆ, ಇತಿಹಾಸಾಸಕ್ತರು, ಸಂಶೋಧಕರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

“ಬಾಡದ ಮಣ್ಣಿನಲ್ಲಿ ಮೂಡಿದ ಕನಕನ ಹೆಜ್ಜೆ ಗುರುತುಗಳು – ಕನಕದಾಸರ ಅರಮನೆ ಉತ್ಖನನದಿಂದ ಅನಾವರಣಗೊಂಡ ಇತಿಹಾಸ” ಎಂಬ ವಿಷಯಾಧಾರಿತ ಈ ಕಾರ್ಯಕ್ರಮವು ಮಲೆನಾಡಿನ ಇತಿಹಾಸದ ಅಪರೂಪದ ಅಧ್ಯಾಯವನ್ನು ಅನಾವರಣಗೊಳಿಸುವ ಮೂಲಕ ಸಂಶೋಧಕರಲ್ಲಿ ಹೊಸ ಉತ್ಸಾಹ ಮತ್ತು ಆತ್ಮವಿಶ್ವಾಸ ಮೂಡಿಸಿತು. ಇತಿಹಾಸ ಸಂರಕ್ಷಣೆ, ಪುರಾತತ್ವ ಸಂಶೋಧನೆ ಹಾಗೂ ಉತ್ಖನನ ಕಾರ್ಯಗಳಿಗೆ ಸಮಾಜ ಮತ್ತು ಸರ್ಕಾರದ ಬೆಂಬಲ ಇನ್ನಷ್ಟು ಬಲವಾಗಬೇಕೆಂಬ ಸಂದೇಶವನ್ನು ಸಾರಿದ ಈ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.

K.M.Sathish Gowda

Join WhatsApp

Join Now

Facebook

Join Now

Read more

ಧರ್ಮೇಂದ್ರ ಪ್ರಧಾನ ನಿರ್ಧಾರ ವಿದ್ಯಾರ್ಥಿಗಳ ಹಿತಕ್ಕಾಗಿ; ಪರೀಕ್ಷಾ ವ್ಯವಸ್ಥೆಯಲ್ಲಿ ಮೋದಿ ಸರ್ಕಾರ ಮಹತ್ವದ ಸುಧಾರಣೆ ತಂದಿದೆ, ಕಾಂಗ್ರೆಸ್ ಮಾತ್ರ ರಾಜಕೀಯ ಮಾಡುತ್ತಿದೆ: ಬಿ.ವೈ. ವಿಜಯೇಂದ್ರ

​ನೀಟ್-ಯುಜಿ ಅಕ್ರಮ ವಿವಾದ: ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

SIR ಮನೆ ಮನೆ ಅಭಿಯಾನಕ್ಕೆ ಯುವಶಕ್ತಿ ಸಜ್ಜಾಗಲಿ; ಕಾಂಗ್ರೆಸ್ ಅಪಪ್ರಚಾರಕ್ಕೆ ತಕ್ಕ ಉತ್ತರ ಕೊಡಿ: ಸಂಸದ ಬಿ.ವೈ. ರಾಘವೇಂದ್ರ

ಮತದಾನ ನಮ್ಮ ಹಕ್ಕು, ಹೆಸರು ನೋಂದಣಿ ನಮ್ಮ ಹೊಣೆ: ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಜುಲೈ 25-26ರಂದು ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ

SIR ಪರಿಷ್ಕರಣೆ ಕ್ರಾಂತಿ: ಜು. 25-26 ರಂದು ಶಿವಮೊಗ್ಗ ಜಿಲ್ಲಾದ್ಯಂತ 21 ಸಾವಿರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರಿಂದ ಮನೆ ಮನೆ ಅಭಿಯಾನ – ಶಾಸಕ ಚನ್ನಬಸಪ್ಪ

ಶಿವಮೊಗ್ಗ ಬಿಜೆಪಿ ಕಾರ್ಯಾಲಯದ ಮೇಲೆ ಕಾಂಗ್ರೆಸ್ ಗೂಂಡಾಗಿರಿ ಹಾಗೂ ಪೊಲೀಸ್ ಇಲಾಖೆಯ ವೈಫಲ್ಯ ಖಂಡಿಸಿ ಬಿಜೆಪಿ ಮುಖಂಡರ ಆಕ್ರೋಶ!

Leave a Comment