ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ನ್ಯಾಯ, ನೀತಿ, ಧರ್ಮ ಹಾಗೂ ಸೇವಾ ಮನೋಭಾವ ಉಳಿಸುವಲ್ಲಿ ಅಮೃತಾನಂದಮಯಿ ಮಾತೆಯ ಪಾತ್ರ ಮಹತ್ವದ್ದು: ಸಿಎಂ ಡಿ.ಕೆ. ಶಿವಕುಮಾರ್

On: November 6, 2026 3:31 PM
Follow Us:

ಬೆಂಗಳೂರು, ನ.6: ದೇಶದಲ್ಲಿ ನ್ಯಾಯ, ನೀತಿ, ಧರ್ಮ ಹಾಗೂ ಸೇವಾ ಮನೋಭಾವ ಉಳಿದುಕೊಂಡು ಬಂದಿರುವುದಕ್ಕೆ ಮಾತಾ ಅಮೃತಾನಂದಮಯಿ ಅವರಂತಹ ಮಹಾತಾಯಂದಿರು ಹಾಗೂ ಧರ್ಮಗುರುಗಳ ಕೊಡುಗೆ ಅಪಾರವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಬೆಂಗಳೂರಿನ ಮಾತಾ ಅಮೃತಾನಂದಮಯಿ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಬ್ರಹ್ಮಸ್ಥಾನಂ ದೇವಾಲಯ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾಮಿ ವಿವೇಕಾನಂದರು ತಮಿಳುನಾಡಿನ ಕನ್ಯಾಕುಮಾರಿಗೆ ತೆರಳಿ ಲೋಕಕಲ್ಯಾಣಕ್ಕಾಗಿ ಧ್ಯಾನ ಮಾಡಿದ್ದರು. ಅದೇ ರೀತಿ ಮಾತಾ ಅಮೃತಾನಂದಮಯಿ ಅವರು ಮಾನವಕುಲದ ಒಳಿತಿಗಾಗಿ, ಕರ್ನಾಟಕದ ಜನರ ಶ್ರೇಯೋಭಿವೃದ್ಧಿಗಾಗಿ ದೇವರ ನಾಡು ಕೇರಳದಿಂದ ಆಗಮಿಸಿ ತಮ್ಮ ದರ್ಶನದ ಭಾಗ್ಯ ಕಲ್ಪಿಸಿದ್ದಾರೆ. ಸಮಸ್ತ ಕನ್ನಡಿಗರ ಪರವಾಗಿ ಅವರಿಗೆ ಹೃತ್ಪೂರ್ವಕ ಸ್ವಾಗತ ಹಾಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.

ತಾಯಿಯ ಮಡಿಲಿನಿಂದಲೇ ತ್ಯಾಗದ ನಿಜವಾದ ಅರ್ಥವನ್ನು ಕಲಿಯುತ್ತೇವೆ. ತಪ್ಪು ಮಾಡಿದಾಗ ತಾಯಿ ತಿದ್ದುತ್ತಾಳೆ, ಸೋತಾಗ ಧೈರ್ಯ ತುಂಬುತ್ತಾಳೆ. ಬದುಕಿನಲ್ಲಿ ಇಂತಹ ತಾಯಿಯ ಪ್ರೀತಿ, ಮಾರ್ಗದರ್ಶನ ಮತ್ತು ಆಶೀರ್ವಾದ ಪ್ರತಿಯೊಬ್ಬರಿಗೂ ಅಗತ್ಯ. ಮಾತಾ ಅಮೃತಾನಂದಮಯಿ ಅವರ ತಪಸ್ಸು, ಆಧ್ಯಾತ್ಮಿಕ ಚಿಂತನೆ ಹಾಗೂ ಮಾರ್ಗದರ್ಶನದಿಂದ ಮನುಷ್ಯನ ಅಜ್ಞಾನ ದೂರವಾಗಿ ಜ್ಞಾನದ ಬೆಳಕು ಮೂಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಅಮ್ಮನ ನೆನಪು ಪ್ರೀತಿಯ ಮೂಲ, ಗುರುವಿನ ನೆನಪು ಜ್ಞಾನದ ಮೂಲ, ದೇವರ ನೆನಪು ಭಕ್ತಿಯ ಮೂಲ. ಈ ಮೂರೂ ಮನುಷ್ಯತ್ವದ ತಳಹದಿಯಾಗಿವೆ. ಮನುಷ್ಯತ್ವವೇ ಮೋಕ್ಷದ ಮಾರ್ಗವಾಗಿದೆ. ಧರ್ಮಗಳು ಬೇರೆಬೇರೆಯಾಗಿದ್ದರೂ ಅವುಗಳ ತತ್ವ ಒಂದೇ. ನಾಮಗಳು ನೂರಾದರೂ ದೈವ ಒಂದೇ. ಪೂಜಾ ವಿಧಾನಗಳು ವಿಭಿನ್ನವಾಗಿದ್ದರೂ ಭಕ್ತಿ ಒಂದೇ. ಕರ್ಮಗಳು ಹಲವು ವಿಧವಾಗಿದ್ದರೂ ನಿಷ್ಠೆ ಮುಖ್ಯ. ದೇವನೊಬ್ಬ, ನಾಮ ಹಲವು ಎಂಬ ತತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ತಿಳಿಸಿದರು.

ಭಾರತದ ನಿಜವಾದ ಶಕ್ತಿ ಆಧ್ಯಾತ್ಮದಲ್ಲಿದೆ. ದೇಶದ ಅಮೂಲ್ಯ ಆಸ್ತಿ ನಮ್ಮ ಸಂಸ್ಕೃತಿ ಮತ್ತು ಪರಂಪರೆ. ದೇವರನ್ನು ಕಾಣಲು ದೇವಸ್ಥಾನಕ್ಕೇ ಹೋಗಬೇಕೆಂದಿಲ್ಲ. ಇಂತಹ ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡಿ ಮಹಾತ್ಮರ ಆಶೀರ್ವಾದ ಪಡೆದರೂ ಆಧ್ಯಾತ್ಮಿಕ ಅನುಭೂತಿ ದೊರೆಯುತ್ತದೆ. ಭಕ್ತಿ ಇಲ್ಲದ ಜ್ಞಾನ ಕುರುಡು. ಮನಸ್ಸಿಗೆ ನೆಮ್ಮದಿ, ಶಾಂತಿ ದೊರೆಯಲಿ ಎಂಬ ಉದ್ದೇಶದಿಂದ ಜನರು ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ಅಂತಹ ಶಾಂತಿ, ನೆಮ್ಮದಿ ಹಾಗೂ ಆತ್ಮಸ್ಥೈರ್ಯವನ್ನು ನೀಡುವ ಶಕ್ತಿ ಮಾತಾ ಅಮೃತಾನಂದಮಯಿ ಅವರಂತಹ ಮಹಾತಾಯಂದಿರಲ್ಲಿದೆ ಎಂದರು.

ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದ ವಿಶ್ವಕ್ಕೆ ಶಾಂತಿ ದೊರೆಯಲಿ ಎಂಬುದು ನಮ್ಮ ಗುರುಗಳು ನೀಡಿದ ಸಂದೇಶ. ಅದೇ ಹಾದಿಯಲ್ಲಿ ಮಾತಾ ಅಮೃತಾನಂದಮಯಿ ಅವರು ಪ್ರೀತಿ, ಕರುಣೆ, ಭಕ್ತಿ ಮತ್ತು ಮಾನವೀಯತೆಯ ಮೂಲಕ ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಭಕ್ತಿ ಎನ್ನುವುದು ಮನುಷ್ಯನ ಅಂತರಂಗದಲ್ಲಿರುವ ನಂದಾದೀಪ. ಆ ದೀಪ ಸದಾ ಬೆಳಗುವಂತೆ ನೋಡಿಕೊಳ್ಳಬೇಕು. ಈ ಮಹತ್ವದ ಕಾರ್ಯವನ್ನು ಅಮ್ಮ ನಿರಂತರವಾಗಿ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಾತಾ ಅಮೃತಾನಂದಮಯಿ ಅವರು ತಮ್ಮ ಇಡೀ ಬದುಕನ್ನು ಜನರ ಸೇವೆ, ವಿಶ್ವಶಾಂತಿ ಮತ್ತು ಮಾನವೀಯ ಮೌಲ್ಯಗಳ ಉಳಿವಿಗಾಗಿ ಮುಡಿಪಾಗಿಟ್ಟಿದ್ದಾರೆ. ಅವರು ಪ್ರೀತಿ, ಮಾನವೀಯತೆ ಹಾಗೂ ಸೇವಾಧರ್ಮದ ಪ್ರತೀಕವಾಗಿದ್ದಾರೆ ಎಂದು ಬಣ್ಣಿಸಿದರು.

ಸುಮಾರು 25 ವರ್ಷಗಳ ಹಿಂದೆ ನಾನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ವಿರುದ್ಧ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಮಾತಾ ಅಮೃತಾನಂದಮಯಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದೆ. ಅಂದಿನ ಭೇಟಿಯ ನೆನಪು ಇಂದಿಗೂ ನನ್ನ ಮನಸ್ಸಿನಲ್ಲಿ ಹಸಿರಾಗಿದೆ. ಜನರ ಸೇವೆ, ಸಮಾಜದಲ್ಲಿ ಶಾಂತಿ ಮತ್ತು ಮಾನವೀಯತೆ ನೆಲೆಸುವ ಉದ್ದೇಶದಿಂದ ತಮ್ಮ ಬದುಕನ್ನೇ ಅರ್ಪಿಸಿಕೊಂಡಿರುವ ಅಮ್ಮನ ಆಶೀರ್ವಾದ ಎಲ್ಲರ ಮೇಲೂ ಇರಲಿ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಶಿಸಿದರು.

K.M.Sathish Gowda

Join WhatsApp

Join Now

Facebook

Join Now

Read more

ರಾಜ್ಯದ ಅಭಿವೃದ್ಧಿಗೆ ಸಚಿವ ಸಂಪುಟದ ಮಹತ್ವದ ನಿರ್ಧಾರ: 20 ಸಾವಿರ ಕೋಟಿ ರೂ. ವೆಚ್ಚದಲ್ಲಿ ರಸ್ತೆ, ಸೇತುವೆ ಅಭಿವೃದ್ಧಿಗೆ ಅಸ್ತು

ಶಿವಮೊಗ್ಗ ತುಂಗಾ ಸೇತುವೆ, ಭದ್ರಾವತಿ ಸೇತುವೆ ಮರುನಿರ್ಮಾಣಕ್ಕೆ 82 ಕೋಟಿ ರೂ. ಅನುದಾನ: ಸಚಿವ ಸಂಪುಟ ಅಸ್ತು

ಪ್ರತಿ ರೈತನಿಗೆ ₹5,000 ಬರ ಪರಿಹಾರ: ಮೊದಲ ಕಂತಿನಲ್ಲಿ ₹2,500 ಬಿಡುಗಡೆಗೆ ಸಿಎಂ ಡಿ.ಕೆ. ಶಿವಕುಮಾರ್ ನಿರ್ಧಾರ

ಎಸ್‌ಐಆರ್ ವಿಚಾರದಲ್ಲಿ ಜನರಲ್ಲಿ ಗೊಂದಲ ಸೃಷ್ಟಿಸುತ್ತಿರುವ ಕಾಂಗ್ರೆಸ್; ರಾಹುಲ್ ಗಾಂಧಿ ಅವರದ್ದು ‘ನೋ ಡೇಟಾ, ಓನ್ಲಿ ಗಲಾಟೆ’: ಡಾ. ಸಂಬಿತ್ ಪಾತ್ರಾ ವ್ಯಂಗ್ಯ

ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಲು ಐಕಿಯಾ ಸಂಸ್ಥೆಗೆ ಸಲಹೆ; ಕರ್ನಾಟಕದ ಸಣ್ಣ ಉದ್ಯಮಗಳಿಗೆ ಆದ್ಯತೆ ನೀಡಿ: ಸಿಎಂ ಡಿ.ಕೆ. ಶಿವಕುಮಾರ್

ಭಿಕ್ಷಾಪಾತ್ರೆ ಹಿಡಿದು ಬಿಜೆಪಿ ಪ್ರತಿಭಟನೆ; ಇದು ದುಷ್ಟರ ಲೂಟಿ ಸರ್ಕಾರ: ಆರ್. ಅಶೋಕ್

Leave a Comment