ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಪೊಲೀಸ್ ಇಲಾಖೆಯ ನಡವಳಿಕೆಗೆ ಹೊಸ ಮಾರ್ಗಸೂಚಿ: “ಪೊಲೀಸ್ ಎಂದರೆ ಭದ್ರತೆ, ಭಯವಲ್ಲ” – ಡಿಜಿಪಿ ಸಲೀಂ

On: October 24, 2025 9:52 PM
Follow Us:

ಬೆಂಗಳೂರು: ಸಮಾಜದಲ್ಲಿ ಪೊಲೀಸ್ ಇಲಾಖೆಯ ಬಗ್ಗೆ ಉತ್ತಮ ಅಭಿಪ್ರಾಯ ಮೂಡಿಸಲು ಹಾಗೂ ಸಾರ್ವಜನಿಕರ ವಿಶ್ವಾಸವನ್ನು ಬಲಪಡಿಸಲು, ಕರ್ತವ್ಯ ನಿರ್ವಹಿಸುವಾಗ ಪಾರದರ್ಶಕತೆ, ಸೌಜನ್ಯದ ವರ್ತನೆ ಮತ್ತು ನಿಷ್ಠೆಯನ್ನು ಕಾಯ್ದುಕೊಳ್ಳುವಂತೆ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ.ಎ. ಸಲೀಂ ಅವರು ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ.

ಪೊಲೀಸ್ ಅಧಿಕಾರಿಗಳು ಸಾರ್ವಜನಿಕರೊಂದಿಗೆ ವರ್ತಿಸುವ ರೀತಿಯು ಕಾನೂನು ಜಾರಿ ಮತ್ತು ಸಮುದಾಯದೊಂದಿಗೆ ಉತ್ತಮ ಬಾಂಧವ್ಯ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಡಾ. ಸಲೀಂ ತಿಳಿಸಿದ್ದಾರೆ. ಅಧಿಕಾರಿಗಳು ತಮ್ಮ ಅಧಿಕಾರವನ್ನು ಚಲಾಯಿಸುವಾಗ ನಾಗರೀಕರೊಂದಿಗೆ ಸೌಜನ್ಯ, ಗೌರವ ಮತ್ತು ಸಂಯಮದಿಂದ ವರ್ತಿಸುವುದು ಅತ್ಯವಶ್ಯಕ. ಅಧಿಕಾರದ ದುರುಪಯೋಗ ಅಥವಾ ದರ್ಪದಿಂದ ವರ್ತಿಸುವುದು ಇಲಾಖೆಯ ಘನತೆಗೆ ತಕ್ಕುದಲ್ಲ ಎಂದು ಅವರು ಎಚ್ಚರಿಸಿದ್ದಾರೆ.

ಪೊಲೀಸ್ ಇಲಾಖೆಯ ಘನತೆಗೆ ಧಕ್ಕೆಯಾಗುವ ವರ್ತನೆಗೆ ಖಡಕ್ ಎಚ್ಚರಿಕೆ

ಡಾ. ಎಂ.ಎ. ಸಲೀಂ ಅವರು ಬಿಡುಗಡೆ ಮಾಡಿದ ಮಾರ್ಗಸೂಚಿಯು ಕೇವಲ ನಡವಳಿಕೆಗೆ ಸಂಬಂಧಿಸಿದ ದಾಖಲೆ ಅಲ್ಲ; ಅದು ಪೊಲೀಸ್ ಇಲಾಖೆಯ ಒಳಗಿನ ಶಿಸ್ತಿನ ಪುನರುತ್ಥಾನಕ್ಕೆ ನಿದರ್ಶನವಾಗಿದೆ. ಇತ್ತೀಚಿನ ದಿನಗಳಲ್ಲಿ ಕೆಲ ಪೊಲೀಸ್ ಸಿಬ್ಬಂದಿಗಳಿಂದ ವರದಿಯಾಗಿರುವ ದೌರ್ಜನ್ಯ, ಓಸಿ ದಂದೆಕೋರರ ಜೊತೆಗಿನ ಒಡನಾಟ, ಹಣದ ಲಾಭಕ್ಕಾಗಿ ಅಧಿಕಾರದ ದುರುಪಯೋಗ ಮುಂತಾದ ಘಟನೆಗಳು ಇಲಾಖೆಯ ಗೌರವಕ್ಕೆ ಮಸುಕಾಗುತ್ತಿವೆ. ಈ ಹಿನ್ನೆಲೆ, ಪಾರದರ್ಶಕತೆ ಮತ್ತು ನೈತಿಕ ನಡವಳಿಕೆಗೆ ಆದ್ಯತೆ ನೀಡಬೇಕೆಂದು ಸಲೀಂ ಅವರು ಸ್ಪಷ್ಟವಾಗಿ ಸೂಚಿಸಿದ್ದಾರೆ. ಅವರು ಖಡಕ್ ಅಧಿಕಾರಿಯಾಗಿ ಪರಿಚಿತರಾಗಿದ್ದು, ಕಾನೂನು ಜಾರಿ ವೇಳೆ ಯಾವುದೇ ರೀತಿಯ ಅಕ್ರಮ, ಭ್ರಷ್ಟಾಚಾರ ಅಥವಾ ಸಾರ್ವಜನಿಕರ ಮೇಲೆ ದೌರ್ಜನ್ಯ ಸಹಿಸಿಕೊಳ್ಳುವುದಿಲ್ಲವೆಂದು ಸ್ಪಷ್ಟ ಸಂದೇಶ ನೀಡಿದ್ದಾರೆ. ಇಲಾಖೆಯ ನಂಬಿಕೆಯನ್ನು ಪುನಃಸ್ಥಾಪಿಸಲು ಈ ಮಾರ್ಗಸೂಚಿ ಪ್ರಮುಖ ಹೆಜ್ಜೆಯಾಗಿದ್ದು, “ಪೊಲೀಸ್ ಎಂದರೆ ಭಯವಲ್ಲ, ಭದ್ರತೆ” ಎಂಬ ಸಿದ್ಧಾಂತವನ್ನು ನೆಲೆಗೆ ತರುವ ಪ್ರಯತ್ನವಾಗಿದೆ.

🔹 ಪ್ರಮುಖ ಮಾರ್ಗಸೂಚಿಗಳು:

  1. ಪಾರದರ್ಶಕತೆ: ಇಲಾಖೆಯ ಎಲ್ಲಾ ಅಧಿಕೃತ ವ್ಯವಹಾರಗಳಲ್ಲಿ ಸಂಪೂರ್ಣ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು.
  2. ಸಮಾನತೆ: ಪೊಲೀಸ್ ಠಾಣೆಗೆ ಬರುವ ಪ್ರತಿಯೊಬ್ಬರನ್ನು ಅವರ ಸಾಮಾಜಿಕ ಅಥವಾ ಆರ್ಥಿಕ ಹಿನ್ನೆಲೆ ಪರಿಗಣನೆ ಇಲ್ಲದೆ ಸಮಾನವಾಗಿ ಪರಿಗಣಿಸಬೇಕು.
  3. ಸೌಜನ್ಯ: ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಬಳಕೆ ಬೇಡ, ಯಾವಾಗಲೂ ಸೌಜನ್ಯ ಹಾಗೂ ಘನತೆಯಿಂದ ವರ್ತಿಸಬೇಕು.
  4. ಲಂಚ-ಅಕ್ರಮ ನಿಷೇಧ: ಯಾವುದೇ ರೀತಿಯ ಅಕ್ರಮ ಸಹಾಯ ಅಥವಾ ಲಾಭ ಸ್ವೀಕರಿಸಬಾರದು.
  5. ನೈತಿಕತೆ: ಕರ್ತವ್ಯದ ಸಮಯದಲ್ಲಿಯೂ ಹಾಗೂ ನಂತರವೂ ಇತರರಿಗೆ ಮಾದರಿಯಾಗುವ ನೈತಿಕ ನಡವಳಿಕೆ ಇರಬೇಕು.
  6. ದಾಖಲೆ ನಿರ್ವಹಣೆ: ಎಲ್ಲಾ ದಾಖಲೆಗಳು, ಡೈರಿಗಳು ಮತ್ತು ಕೇಸ್ ಫೈಲ್‌ಗಳನ್ನು ನಿಖರವಾಗಿ ನಿರ್ವಹಿಸಬೇಕು.
  7. ತನಿಖಾ ಪಾರದರ್ಶಕತೆ: ತನಿಖೆ ವೇಳೆ ನಾಗರೀಕರಿಗೆ ಅನಗತ್ಯ ತೊಂದರೆ ನೀಡಬಾರದು.
  8. ಸಂತ್ರಸ್ಥರಿಗೆ ಕಾಳಜಿ: ಮಹಿಳೆಯರು, ಹಿರಿಯ ನಾಗರೀಕರು ಮತ್ತು ಮಕ್ಕಳೊಂದಿಗೆ ಸೂಕ್ಷ್ಮತೆ ಹಾಗೂ ಕಾಳಜಿಯಿಂದ ವರ್ತಿಸಬೇಕು.
  9. ಮಾಹಿತಿ ಹಂಚಿಕೆ: ದೂರುಗಳ ಸ್ಥಿತಿಯನ್ನು ಸಾರ್ವಜನಿಕರಿಗೆ ತಿಳಿಸಬೇಕು ಮತ್ತು ಸಮಯಪಾಲನೆ ಪಾಲಿಸಬೇಕು.
  10. ತಂತ್ರಜ್ಞಾನ ಬಳಕೆ: ಬಾಡಿ ಕ್ಯಾಮೆರಾ ಮತ್ತು ಇತರೆ ಸಾಧನಗಳನ್ನು ಜವಾಬ್ದಾರಿಯುತವಾಗಿ ಬಳಸಬೇಕು.
  11. ಖಾಸಗಿತನ ಗೌರವ: ಶೋಧ ಅಥವಾ ಬಂಧನದ ವೇಳೆ ನಾಗರೀಕರ ಗೌರವ ಹಾಗೂ ಖಾಸಗಿತನ ಕಾಯ್ದುಕೊಳ್ಳಬೇಕು.
  12. ಸಮುದಾಯ ಪಾಲ್ಗೊಳ್ಳಿಕೆ: ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು.
  13. ಭ್ರಷ್ಟಾಚಾರ ವಿರೋಧ: ಯಾವುದೇ ಭ್ರಷ್ಟ ಪ್ರಯತ್ನ ಕಂಡುಬಂದರೆ ಹಿರಿಯ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡಬೇಕು.
  14. ಶೂನ್ಯ ಎಫ್‌ಐಆರ್: ಬೇರೆ ಠಾಣಾ ವ್ಯಾಪ್ತಿಯ ದೂರುಗಳಿಗೂ ಶೂನ್ಯ ಎಫ್‌ಐಆರ್ ದಾಖಲಿಸಿ, ಸಂಬಂಧಿತ ಠಾಣೆಗೆ ವರ್ಗಾಯಿಸಬೇಕು.
  15. ಮಹಿಳಾ ವಿಚಾರಣೆ ನಿಯಮ: ಸಂಜೆ 6 ಗಂಟೆಯ ನಂತರ ಮಹಿಳೆಯರನ್ನು ಠಾಣೆಗೆ ವಿಚಾರಣೆಗಾಗಿ ಕರೆತರಬಾರದು; ಅಗತ್ಯವಿದ್ದರೆ ಮಹಿಳಾ ಅಧಿಕಾರಿಯ ಸಮ್ಮುಖದಲ್ಲಿ ವಿಚಾರಣೆ ಮಾಡಬೇಕು.
  16. ಗೌರವಯುತ ವಿಚಾರಣೆ: ಮಹಿಳಾ ಆರೋಪಿಗಳು ಅಥವಾ ಸಂತ್ರಸ್ಥರ ವಿಚಾರಣೆ ವೇಳೆ ಅವಮಾನವಾಗದಂತೆ ನೋಡಿಕೊಳ್ಳಬೇಕು.
  17. ವೃತ್ತಿಪರ ವೇಷಭೂಷಣ: ಸಮವಸ್ತ್ರ ಅಥವಾ ಮಷ್ಟಿ ಬಟ್ಟೆಗಳು ಸದಾ ಸ್ವಚ್ಛ ಮತ್ತು ಶಿಸ್ತಿನಂತಿರಬೇಕು.

ಪೊಲೀಸ್ ಮಹಾನಿರ್ದೇಶಕರು ಸೂಚಿಸಿರುವಂತೆ, ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸದ ಅಧಿಕಾರಿಗಳ ವಿರುದ್ಧ ಕಠಿಣ ಇಲಾಖಾ ಕ್ರಮ ಕೈಗೊಳ್ಳಲಾಗುವುದು. ಎಲ್ಲ ಘಟಕಾಧಿಕಾರಿಗಳು ತಮ್ಮ ಅಧೀನದ ಸಿಬ್ಬಂದಿಗಳಿಗೆ ಈ ಸೂಚನೆಗಳ ಅನುಸರಣೆಯನ್ನು ಖಚಿತಪಡಿಸಬೇಕೆಂದು ಡಾ. ಸಲೀಂ ಅವರು ಆದೇಶಿಸಿದ್ದಾರೆ.

K.M.Sathish Gowda

Join WhatsApp

Join Now

Facebook

Join Now

Read more

ಪೊಲೀಸ್ ಇಲಾಖೆಯಲ್ಲಿ ‘ಮೇಜರ್ ಸರ್ಜರಿ’: 129 ಇನ್ಸ್‌ಪೆಕ್ಟರ್‌, 23 ಡಿವೈಎಸ್ಪಿಗಳಿಗೆ ವರ್ಗಾವಣೆ; ಬೆಂಗಳೂರು ಸಿಟಿ ಪಟ್ಟಿ ಇನ್ನೂ ಬಾಕಿ

ಸೂಡಾ ಕಾಮಗಾರಿಗಳ ಮೇಲೆ ಭ್ರಷ್ಟಾಚಾರ ನೆರಳು; ಡಿಸಿ ಕಚೇರಿ ಮುಂದೆ ಜೆಡಿಎಸ್ ಪ್ರತಿಭಟನೆ

‘ಕೊಟ್ಟ ಮಾತು ಉಳಿಯುತ್ತದೆಯೇ?’ – ಕಾಂಗ್ರೆಸ್ ಒಳಕಿಚ್ಚಿಗೆ ಸುರೇಶ್ ಮಾರ್ಮಿಕ ನುಡಿ, ಡಿಕೆಶಿ ದೆಹಲಿ ಪಯಣ ರಾಜಕೀಯ ಚರ್ಚೆ ತೀವ್ರ

“ಮೊದಲು ನಿಮ್ಮ ಹೈಕಮಾಂಡ್‌ ಹುಡುಕಿ, ಬಳಿಕ ಮೋದಿ ಬಗ್ಗೆ ಮಾತನಾಡಿ”: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ತೀವ್ರ ವಾಗ್ದಾಳಿ

ಪ್ಲಾಸ್ಟಿಕ್ ಮುಕ್ತ ಶಿವರಾತ್ರಿ ಉತ್ಸವಕ್ಕೆ ಹರಕೆರೆ ಹರಕೇಶ್ವರ ದೇವಸ್ಥಾನದಲ್ಲಿ ಸಂಕಲ್ಪ

ಜನಸೇವೆಗೆ ಬದ್ಧ ನಾಯಕತ್ವ: ಹಾರನಹಳ್ಳಿಯಲ್ಲಿ ಡಿ.ಎಸ್. ಅರುಣ್ ಅವರಿಂದ ಪಂಚಾಯಿತಿ ಕಟ್ಟಡ ಉದ್ಘಾಟನೆ ಹಾಗೂ ಹಕ್ಕುಪತ್ರ ವಿತರಣೆ

Leave a Comment