ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಮಹಿಳಾ ಏಕದಿನ ವಿಶ್ವಕಪ್ ಗೆಲುವಿನ ಸಂಭ್ರಮ : ಪ್ರಧಾನಮಂತ್ರಿ ಮತ್ತು ರಾಷ್ಟ್ರಪತಿಯಿಂದ ಅಭಿನಂದನೆ ಪಡೆದ ಭಾರತೀಯ ಮಹಿಳಾ ಕ್ರಿಕೆಟ್ ತಂಡ

On: November 6, 2025 7:01 PM
Follow Us:

ನವದೆಹಲಿ: ಮಹಿಳಾ ಏಕದಿನ ವಿಶ್ವಕಪ್–2025ರಲ್ಲಿ ಇತಿಹಾಸ ನಿರ್ಮಿಸಿದ ಭಾರತದ ಮಹಿಳಾ ಕ್ರಿಕೆಟ್ ತಂಡ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದ್ದಾರೆ . ದಕ್ಷಿಣ ಆಫ್ರಿಕಾ ವಿರುದ್ಧ ನವ ಮುಂಬೈಯ ಡಾ. ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಫೈನಲ್ನಲ್ಲಿ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿ ಮೊದಲ ಬಾರಿಗೆ ವಿಶ್ವಕಪ್ ಟ್ರೋಫಿ ತಂದಿಕೊಟ್ಟಿದ್ದಾರೆ.

ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಅವರ ನೇತೃತ್ವದ 16 ಸದಸ್ಯರ ತಂಡ, 7 ಲೋಕ ಕಲ್ಯಾಣ್ ಮಾರ್ಗದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸಕ್ಕೆ ಆಗಮಿಸಿತು. ಈ ಭೇಟಿ ಸಂಪೂರ್ಣವಾಗಿ ಆತ್ಮೀಯತೆ ಮತ್ತು ಗೌರವದಿಂದ ತುಂಬಿತ್ತು. ಕ್ರೀಡಾಪಟುಗಳು ತಮ್ಮ ವಿಶ್ವಕಪ್ ಟ್ರೋಫಿಯೊಂದಿಗೆ ಪ್ರಧಾನಿಯನ್ನು ಭೇಟಿಯಾದಾಗ, ಮೋದಿ ಅವರು ಪ್ರತಿ ಆಟಗಾರ್ತಿಯೊಂದಿಗೆ ಮಾತನಾಡಿ ಅವರ ಕಠಿಣ ಪರಿಶ್ರಮವನ್ನು ಪ್ರಶಂಸಿಸಿದರು.

ಗಾಯದ ಕಾರಣದಿಂದ ಟೂರ್ನಿಯಿಂದ ಹೊರಗಾಗಬೇಕಾದ ಪ್ರತೀಕಾ ರಾವಲ್ ಈ ಸಮಾರಂಭದಲ್ಲಿ ವಿಶೇಷ ಗಮನಸೆಳೆದರು. ಗಾಯದ ನಡುವೆಯೂ ವೀಲ್ಚೇರ್ನಲ್ಲಿ ಪ್ರಧಾನಿಯನ್ನು ಭೇಟಿ ಮಾಡಿದ ಅವರು ತಂಡದ ಆತ್ಮ ವಿಶ್ವಾಸ ಮತ್ತು ಕಂಮಿಟ್‌ಮೆಂಟ್‌ನ ಪ್ರತೀಕವಾಗಿದ್ದಾರೆ.

ಗುರುವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಮತ್ತೊಂದು ಹಬ್ಬದ ವಾತಾವರಣದಲ್ಲಿ ಆಟಗಾರ್ತಿಯರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದರು. ಈ ವೇಳೆ ತಂಡದ ಆಟಗಾರ್ತಿಯರ ಸಹಿ ಹೊಂದಿರುವ ವಿಶೇಷ ನೀಲಿ ಜೆರ್ಸಿಯನ್ನು ರಾಷ್ಟ್ರಪತಿಗೆ ಉಡುಗೊರೆಯಾಗಿ ನೀಡಲಾಯಿತು. ಟ್ರೋಫಿಯೊಂದಿಗೆ ಎಲ್ಲರೂ ಒಟ್ಟಿಗೆ ಫೋಟೋಗೆ ಪೋಸ್ ನೀಡಿದರು.

ರಾಷ್ಟ್ರಪತಿ ಮುರ್ಮು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಸಂತೋಷವನ್ನು ಹೀಗೆ ವ್ಯಕ್ತಪಡಿಸಿದ್ದಾರೆ: “ಮಹಿಳಾ ತಂಡ ಇತಿಹಾಸ ಸೃಷ್ಟಿಸಿದ್ದಾರೆ ಮತ್ತು ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ ಎಂದು ಹೇಳಿದ್ದಾರೆ.

ಟೂರ್ನಿಯಲ್ಲಿ ಭಾರತ ತಂಡದ ಭಾಗವಾಗಿದ್ದ ಒಟ್ಟು 8 ಮಹಾರಾಷ್ಟ್ರದ ಆಟಗಾರ್ತಿಯರು ಮತ್ತು ಕೋಚ್‌ಗೆ ವಿಶೇಷ ಗೌರವ ಘೋಷಿಸಲಾಗಿದೆ. ನವೆಂಬರ್ 7ರಂದು ಮಹಾರಾಷ್ಟ್ರ ಸರ್ಕಾರ ಮುಂಬೈಯಲ್ಲಿ ವಿಶೇಷ ಸನ್ಮಾನ ಸಮಾರಂಭವನ್ನು ಆಯೋಜಿಸಿದೆ. ಉಪನಾಯಕಿ ಸ್ಮೃತಿ ಮಂದನಾ, ಜೆಮೀಮಾ ರೋಡ್ರಿಗಸ್, ಮತ್ತು ಸ್ಪಿನ್ನರ್ ರಾಧಾ ಯಾದವ್—ಈ ಮೂವರು ಪ್ರಮುಖ ಆಟಗಾರ್ತಿಯರಿಗೆ ತಲಾ ₹2.25 ಕೋಟಿ ಬಹುಮಾನ ಘೋಷಿಸಲಾಗಿದೆ. ತಂಡದ ಮುಖ್ಯ ಕೋಚ್ ಅಮೋಲ್ ಮುಜುಮ್ದಾರ್ ಅವರಿಗೆ ₹22.5 ಲಕ್ಷ ನೀಡಲಾಗುತ್ತದೆ.

ಭಾರತದ ಮಹಿಳಾ ತಂಡದ ಈ ಐತಿಹಾಸಿಕ ಗೆಲುವು ದೇಶದಲ್ಲಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಹೊಸ ಅಧ್ಯಾಯ ನಿರ್ಮಿಸಿದೆ. ಹರ್ಮನ್ಪ್ರೀತ್ ಕೌರ್ ಮತ್ತು ಅವರ ಬಳಗದ ಶಿಸ್ತು, ಕಠಿಣ ಪರಿಶ್ರಮ ಮತ್ತು ದೃಢ ವಿಶ್ವಾಸ — ಇವೆಲ್ಲವೂ ಭಾರತದ ಮಹಿಳಾ ಕ್ರೀಡಾಪಟುಗಳಿಗೆ ಹೊಸ ದಿಕ್ಕನ್ನು ತೋರಿಸುತ್ತಿವೆ.

K.M.Sathish Gowda

Join WhatsApp

Join Now

Facebook

Join Now

Leave a Comment