ಶಿವಮೊಗ್ಗ, ಸೆ. 01: ಬೆಂಗಳೂರು ಬನಶಂಕರಿಯಲ್ಲಿರುವ ಸ್ಕೇಟಿಂಗ್ ಕ್ರೀಡಾಂಗಣದಲ್ಲಿ ರಾಜ್ಯ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಕಳೆದ ಮೂರು ದಿನಗಳಿಂದ ಆಯೋಜಿಸಿದ್ದ ನಾಲ್ಕನೇ ರ್ಯಾಂಕಿಂಗ್ ಸ್ಕೇಟಿಂಗ್ ಕ್ರೀಡೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸ್ಕೇಟರ್‌ಗಳು ತಮ್ಮ ಕೌಶಲ್ಯದಿಂದ ಕಂಗೊಳಿಸಿ, ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ನಮ್ಮ ಶಿವಮೊಗ್ಗ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್‌ನ ನಾಲ್ವರು ಸ್ಕೇಟರ್‌ಗಳು ತಮ್ಮ ವಿಭಾಗಗಳಲ್ಲಿ ಪದಕಗಳನ್ನು ಗೆದ್ದು ಗಮನಸೆಳೆದಿದ್ದಾರೆ.
ಪದಕ ವಿಜೇತರು ಮತ್ತು ಸಾಧನೆ:
ಭಕ್ತಿ ಎಂ.ಪಿ. – 6 ವರ್ಷದೊಳಗಿನ ವಯೋಮಿತಿ
ಸೆಂಟ್ ಜೋಸೆಫ್ ಅಕ್ಷರಧಾಮ ಶಾಲೆಯಲ್ಲಿ ಓದುತ್ತಿರುವ ಭಕ್ತಿ, ಎರಡು ಚಿನ್ನದ ಪದಕಗಳನ್ನು ಗೆದ್ದು ಪುಟ್ಟ ವಯಸ್ಸಿನಲ್ಲೇ ತನ್ನ ಸಾಮರ್ಥ್ಯವನ್ನು ತೋರಿಸಿದ್ದಾಳೆ. ಭಕ್ತಿ ಅವರು ಡಾ. ಎಂ.ಸಿ. ಪ್ರದೀಪ್ ಮತ್ತು ಕೆ.ಬಿ. ಮಮತಾ ದಂಪತಿಗಳ ಪುತ್ರಿ.
ಹಿತ ಪ್ರವೀಣ್ – 6 ರಿಂದ 8 ವರ್ಷ ವಯೋಮಿತಿ
ಜ್ಞಾನದೀಪ ಶಾಲೆಯ ವಿದ್ಯಾರ್ಥಿನಿ ಹಿತ ಪ್ರವೀಣ್ ಕೂಡಾ ಎರಡು ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿದ್ದಾಳೆ. ಅವಳು ಆರೋಗ್ಯ ಇಲಾಖೆಯ ಪ್ರವೀಣ್ ಹಾಗೂ ಸೌಮ್ಯ ದಂಪತಿಗಳ ಪುತ್ರಿ.

ಸಮೃದ್ಧಿ ವಿಶ್ವಾಸ್ – 6 ವರ್ಷದೊಳಗಿನ ವಯೋಮಿತಿ
ಸರ್ಜಿ ಫ್ರೀ ಶಾಲೆಯಲ್ಲಿ ಓದುತ್ತಿರುವ ಸಮೃದ್ಧಿ ವಿಶ್ವಾಸ್ ಕಂಚಿನ ಪದಕ ಗೆದ್ದು ತಂಡಕ್ಕೆ ಕೀರ್ತಿ ತಂದಿದ್ದಾಳೆ. ಅವಳು ಶಿವಮೊಗ್ಗದ ಮಾಜಿ ಕಾರ್ಪೊರೇಟರ್ ಈ. ವಿಶ್ವಾಸ್ ಮತ್ತು ಸುಪ್ರಿಯಾ ಎಸ್.ಎಸ್. ಅವರ ಪುತ್ರಿ.
ಅದ್ವಿಕಾ ನಾಯರ್ – 10 ರಿಂದ 12 ವರ್ಷದ ವಯೋಮಿತಿ ಪೋದಾರ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಅದ್ವಿಕಾ ನಾಯರ್ ಬೆಳ್ಳಿ ಪದಕ ಜಯಿಸಿದ್ದಾರೆ. ಅವರು ಆರ್.ಎಲ್. ರಂಜಿತ್ ಮತ್ತು ಗಾಯತ್ರಿ ದಂಪತಿಗಳ ಪುತ್ರಿ.
ಈ ಸಾಧನೆಗೆ ಆರ್. ವಿಶ್ವಾಸ್ ಹಾಗೂ ಆರ್. ಆತೀಶ್ ಎಂಬ ತರಬೇತುದಾರರ ಶ್ರಮ ಹಾಗೂ ಮಾರ್ಗದರ್ಶನ ಪ್ರಮುಖ ಕಾರಣವಾಗಿದೆ. ಸ್ಕೇಟರ್‌ಗಳ ಸಾಮರ್ಥ್ಯವನ್ನು ಮೆರೆಯಲು ಅವರ ನಿರಂತರ ಪ್ರಯತ್ನ ಫಲಕಾರಿಯಾಗಿದ್ದು, ಸಂಸ್ಥೆಯ ಗೌರವವನ್ನು ಹೆಚ್ಚಿಸಿದೆ.
ಈ ಸಾಧಕರಿಗೆ ನಮ್ಮ ಶಿವಮೊಗ್ಗ ಸಂಸ್ಥೆಯ ಅಧ್ಯಕ್ಷ ಮೋಹನ್ ಕುಮಾರ್, ಪದಾಧಿಕಾರಿಗಳಾದ ಎಂ. ರವಿ, ಎಸ್.ಕೆ. ಗಜೇಂದ್ರಸ್ವಾಮಿ, ಉಮಾ ಟಿ., ವಕೀಲ ಪ್ರವೀಣ್, ತಾರಾನಾಥ್ ಹೆಚ್.ಪಿ., ಶ್ರೀನಾಥ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಅಲ್ಲದೆ, ಶಿವಮೊಗ್ಗ ಲೋಕಸಭಾ ಸದಸ್ಯ ಬಿ. ವೈ. ರಾಘವೇಂದ್ರ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಸೇರಿದಂತೆ ಅನೇಕ ಗಣ್ಯರು ಪುಟಾಣಿ ಕ್ರೀಡಾಪಟುಗಳಿಗೆ ಹೃತ್ಪೂರ್ವಕ ಶುಭಹಾರೈಸಿದ್ದಾರೆ.
ಜಿಲ್ಲೆಗೆ ಕೀರ್ತಿ
ಜಿಲ್ಲೆಯ ಪುಟ್ಟ ವಯಸ್ಸಿನ ಮಕ್ಕಳೇ ಇಂತಹ ಕ್ರೀಡಾಕ್ಷೇತ್ರದಲ್ಲಿ ಮೆರೆದಿರುವ ಸಾಧನೆ, ಇಡೀ ಶಿವಮೊಗ್ಗ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದ್ದು, ಭವಿಷ್ಯದಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಪಂದ್ಯಾವಳಿಗಳಲ್ಲಿ ಇವರಿಂದ ಇನ್ನಷ್ಟು ಕೀರ್ತಿ ನಿರೀಕ್ಷಿಸಲಾಗಿದೆ.