ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

“ಶಿವಮೊಗ್ಗದಲ್ಲಿ ಹಸಿರು ಹಬ್ಬ: ಕೃಷಿ ಮತ್ತು ತೋಟಗಾರಿಕೆ ಮೇಳಕ್ಕೆ ಇಂದು ತೆರೆ”

On: November 11, 2025 9:31 AM
Follow Us:

ಶಿವಮೊಗ್ಗ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ನವೆಂಬರ್ 7ರಿಂದ 10ರವರೆಗೆ ನಡೆದ ನಾಲ್ಕು ದಿನಗಳ ‘ಸಹಕಾರ ಕೃಷಿಯಿಂದ ಸುಸ್ಥಿರ ಕೃಷಿ’ಕೃಷಿ–ತೋಟಗಾರಿಕೆ ಮೇಳವು ಜನ ಸಾಗರದೊಂದಿಗೆ ಯಶಸ್ವಿಯಾಗಿ ನಡೆಯಿತು. ರಾಜ್ಯದ ನಾನಾ ಭಾಗಗಳಿಂದ ಹರಿದು ಬಂದ ರೈತರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ನೂತನ ಕೃಷಿ ತಂತ್ರಜ್ಞಾನ ಹಾಗೂ ಮೌಲ್ಯವರ್ಧಿತ ಉತ್ಪಾದನೆಗಳ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡರು.

ನವುಲೆಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ನಾಲ್ಕು ದಿನಗಳ ಕಾಲ ಅದ್ದೂರಿಯಾಗಿ ನಡೆದ ಕೃಷಿ ಮತ್ತು ತೋಟಗಾರಿಕೆ ಮೇಳ–2025’ ರೈತರ ಮನ ಗೆದ್ದು ನವೆಂಬರ್ 7ರಿಂದ 10ರವರೆಗೆ ನಡೆದ ಈ ಮೇಳದಲ್ಲಿ ಅಂದಾಜು 2 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದು, ಶನಿವಾರ ಹಾಗೂ ಭಾನುವಾರ ಜನಸಾಗರವೇ ಹರಿದುಬಂದ ದೃಶ್ಯ ಕಂಡುಬಂದಿತು.

ಮೇಳವನ್ನು ಉದ್ಘಾಟಿಸಿದ ಕೃಷಿ ಸಚಿವ ಚೆಲುವರಾಯಸ್ವಾಮಿ, ಕೃಷಿಯನ್ನು ಉದ್ಯಮದ ಮಟ್ಟಕ್ಕೆ ಏರಿಸುವುದು ಸರ್ಕಾರದ ಪ್ರಧಾನ ಗುರಿ ಎಂದು ಹೇಳಿದರು. ಮೂಡಿಗೆರೆ, ದಾವಣಗೆರೆ, ಬೆಳಗಾವಿ, ಬೆಂಗಳೂರು ಮತ್ತು ಮಂಡ್ಯದಲ್ಲಿ ಹೊಸ ಕೃಷಿ ಕಾಲೇಜುಗಳನ್ನು ಪ್ರಾರಂಭಿಸಿದ್ದು, ರೈತರಿಗೆ ಮೌಲ್ಯವರ್ಧಕ ಉತ್ಪಾದನೆಗೆ ಮಾರ್ಗದರ್ಶನ ನೀಡುವಲ್ಲಿ ಸರ್ಕಾರ ಬದ್ದವಾಗಿದೆ ಎಂದು ಅವರು ಹೇಳಿದರು. ಅಡಕೆಯ ಮೌಲ್ಯವರ್ಧನೆ, ನೂತನ ಅಕ್ಕಿ ತಳಿಗಳು ಹಾಗೂ ಮಳೆಯೂ ಸಹಿಸುವ ಭತ್ತದ ತಳಿಗಳ ಸಂಶೋಧನೆಯತ್ತ ವಿಶ್ವವಿದ್ಯಾಲಯ ಮತ್ತು ಇಲಾಖೆ ತೊಡಗಿಕೊಂಡಿದೆ ಎಂದು ಭರವಸೆ ನೀಡಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆ ಮಾತನಾಡಿ, ಸಹಕಾರಿ ಕೃಷಿಯ ಮೂಲಕ ರೈತರು ಒಟ್ಟಾಗಿ ಕೃಷಿ ಮಾಡಿದರೆ ಲಾಭ ಹೆಚ್ಚಾಗುತ್ತದೆ ಹಾಗೂ ಸುಸ್ಥಿರ ಕೃಷಿಯ ಗುರಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು. “ಸಹಕಾರವೇ ರೈತರ ಶಕ್ತಿ, ಸುಸ್ಥಿರ ಕೃಷಿಯ ಮಾರ್ಗ ಸಹಕಾರ ಸಂಘಗಳ ಮೂಲಕವೇ ಸಾಧ್ಯ” ಎಂದು ಹೇಳಿದರು.

ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಆರ್.ಸಿ. ಜಗದೀಶ್ ರವರು, ವಿಶ್ವವಿದ್ಯಾಲಯದ ಅಭಿವೃದ್ಧಿ, ತಳಿಗಳ ಸಂಶೋಧನೆ ಮತ್ತು ತಂತ್ರಜ್ಞಾನಗಳ ಪ್ರಗತಿಯನ್ನು ವಿವರಿಸಿದರು. 25ಕ್ಕೂ ಹೆಚ್ಚು ಹೊಸ ತಳಿಗಳನ್ನು ಬಿಡುಗಡೆ ಮಾಡಲಾಗಿದ್ದು, 42 ಉತ್ಪಾದನಾ ಮತ್ತು 31 ಸಸ್ಯರಕ್ಷಣಾ ತಂತ್ರಜ್ಞಾನಗಳನ್ನು ರೈತರಿಗೆ ಪರಿಚಯಿಸಲಾಗಿದೆ ಎಂದರು. ವಿದ್ಯಾರ್ಥಿ–ಶಿಕ್ಷಕ ಸಿಬ್ಬಂದಿ ಕೊರತೆ ನಿವಾರಣೆಗಾಗಿ ಸರ್ಕಾರದ ಗಮನ ಸೆಳೆಯುವಂತೆ ಮನವಿ ಮಾಡಿದರು.

ಮೇಳದ ಮೂರನೇ ದಿನವಾದ ಭಾನುವಾರ ಜನಸಾಗರವೇ ಹರಿದು ಬಂದಿತು. ಲಕ್ಷಕ್ಕೂ ಅಧಿಕ ಮಂದಿ, ಸಾವಿರಾರು ವಿದ್ಯಾರ್ಥಿಗಳು ಮೇಳವನ್ನು ನೋಡಿ ಸಂಭ್ರಮಿಸಿದರು. ಸಿರಿಧಾನ್ಯ, ಅಲಂಕಾರಿಕ ಗಿಡಗಳು, ಅಡಕೆ ಮೌಲ್ಯವರ್ಧನೆ, ಜೇನುಸಾಕಣೆ, ಕೃಷಿ ಉಪಕರಣಗಳು, ನರ್ಸರಿ ಸಸಿಗಳು ಸೇರಿದಂತೆ 450ಕ್ಕೂ ಹೆಚ್ಚು ಮಳಿಗೆಗಳು ರೈತರ ಗಮನ ಸೆಳೆದವು. ಮಳಿಗೆಗಳಲ್ಲಿ ನೀಡಿದ ಮಾಹಿತಿಯನ್ನು ರೈತರು ಕುತೂಹಲದಿಂದ ಕೇಳಿಸಿಕೊಂಡರು.

ಪಶುಸಂಗೋಪನಾ ವಿಭಾಗದಲ್ಲಿ ಹರಿಯಾಣದ ಮುರ್ರಾ ಮತ್ತು ಗುಜರಾತಿನ ಜಾ-ಬಾದಿ ಎಮ್ಮೆ ತಳಿಗಳು ವಿಶೇಷ ಆಕರ್ಷಣೆ ಆಗಿದ್ದವು. ಉದ್ದ ಕಿವಿಯ ಮೇಕೆಗಳು, ದುಬಾರಿ ಬೆಲೆಯ ಹಳ್ಳಿಕಾರ್ ಹೋರಿ ಮತ್ತು ಟರ್ಕಿ ಕೋಳಿ ಮಕ್ಕಳ ಗಮನ ಸೆಳೆಯಿತು. ಅಡಕೆ ಸಂಶೋಧನಾ ಕೇಂದ್ರದ ಮಳಿಗೆಯಲ್ಲಿ ಅಡಕೆಯಿಂದ ವೈನ್ ತಯಾರಿಕೆ ವಿಧಾನವನ್ನು ಪ್ರಾತ್ಯಕ್ಷಿಕೆ ಮಾಡಿಕೊಡಲಾಯಿತು.

ಇದರ ಜೊತೆಗೆ, ಆರ್ಗಾನಿಕ್ ಕೃಷಿ, ಅಣಬೆ ಕೃಷಿ, ಜಲಾನಯನ, ಸಸ್ಯ ರೋಗ ನಿರ್ವಹಣೆ, ದ್ವಿದಳ ಧಾನ್ಯಗಳು, ಯಾಂತ್ರೀಕರಣ, ತೋಟಗಾರಿಕೆ ತಂತ್ರಜ್ಞಾನ, ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ನಡೆಯಿತು. ಧಾರವಾಡ ಪೇಡೆ, ಬೆಳಗಾವಿ ಕುಂದಾ, ಮೇಲುಕೋಟೆ ಪುಳಿಯೋಗರೆಯಂತಹ ಆಹಾರ ಮಳಿಗೆಗಳಿಗೂ ಜನರಿಂದ ಹೆಚ್ಚಿನ ಒತ್ತು ಲಭಿಸಿತು.

ಜನಜಾಗೃತಿ ಅಭಿಯಾನದ ಅಂಗವಾಗಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ದತ್ತು ಪ್ರಕ್ರಿಯೆ ಕುರಿತು ಮಾಹಿತಿ ನೀಡುವ ಸ್ಟಾಲ್ ಸ್ಥಾಪಿಸಿತ್ತು. “ಪ್ರತಿಯೊಬ್ಬ ಮಕ್ಕಳಿಗೂ ಕುಟುಂಬದ ಸೌಹಾರ್ದ ಮತ್ತು ಪೋಷಣೆ ಸಿಗಬೇಕು” ಎಂಬ ಆಶಯದೊಂದಿಗೆ ಈ ಜಾಗೃತಿ ಕಾರ್ಯ ನಡೆಯಿತು.

ನಾಲ್ಕು ದಿನಗಳ ಮೇಳದಲ್ಲಿ ರೈತ–ವಿಜ್ಞಾನಿ ಸಂವಾದ, ತಾಂತ್ರಿಕ ಉಪನ್ಯಾಸಗಳು, ಸಾಧನೆಗೈದ ರೈತರ ಗೌರವ ಸಮಾರಂಭಗಳು ನಡೆದವು. ಮೇಳದ ಅಂತಿಮ ದಿನವೂ ಸಾವಿರಾರು ಜನರು ಭಾಗವಹಿಸಿ ಮೇಳವನ್ನು ವೀಕ್ಷಿಸಿದರು. ರೈತರಿಗೆ ಒಂದೇ ಸ್ಥಳದಲ್ಲಿ ನೂತನ ಮಾಹಿತಿ, ತಂತ್ರಜ್ಞಾನ ಮತ್ತು ವ್ಯಾಪಾರದ ಅವಕಾಶ ಒದಗಿಸಿದ ಕಾರಣ ಕೃಷಿ ಮೇಳ–2025 ರೈತರ ಮನ ಗೆದ್ದ ಮೇಳ ಎಂಬ ಹೆಗ್ಗಳಿಕೆ ಪಡೆದಿದೆ.

ಕೆಳದಿ ಶಿವಪ್ಪ ನಾಯಕ ಕೃಷಿ ವಿಶ್ವವಿದ್ಯಾಲಯವು ಆಯೋಜಿಸಿದ ಈ ಮೇಳವು ರೈತರಲ್ಲಿ ಹೊಸ ತಿಳುವಳಿಕೆ ಮೂಡಿಸಿ, “ಕೃಷಿಯ ಭವಿಷ್ಯ ನೂತನ ತಂತ್ರಜ್ಞಾನದಲ್ಲಿ” ಎಂಬ ಸಂದೇಶವನ್ನು ಬಿತ್ತಿದೆ.

ಸಚಿವ ಮಧು ಬಂಗಾರಪ್ಪ,  ಸಂಸದ ಬಿವೈ ರಾಘವೇಂದ್ರ, ಶಾಸಕಿ ಶಾರದಾ ಪೂರ್ಯನಾಯ್ಕ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಬಲ್ಕೀಶ್‌ ಬಾನು, ಡಿಎಸ್‌ ಅರುಣ್‌, ಧನಂಜಯ್ ಸರ್ಜಿ, ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಚೇತನ್ , ಕಾಡಾ ಅಧ್ಯಕ್ಷ ಡಾ.ಅಂಶುಮಂತ್, ರಾಜ್ಯ ರೈತಸಂಘದ ಹೆಚ್‌,ಆರ್‌,ಬಸವರಾಜಪ್ಪ  ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಎಸ್.ಆರ್ ಮಜುನಾಥ ಗೌಡ, ಡಾ.ಹನುಮಂತಪ್ಪ, ಆಡಳಿತ ಮಂಡಳಿ ಸದಸ್ಯರಾದ ಬಿ.ಕೆ ಕುಮಾರಸ್ವಾಮಿ, ಜೆ ಜೆ ಕಾವೇರಪ್ಪ, ಹೆಚ್‌,ಡಿ ದೇವಿಕುಮಾರ್, ಹಾಪ್‌ಕಾಮ್ಸ್ ಅಧ್ಯಕ್ಷ ವಿಜಯಕುಮಾರ್, ಬೆಕ್ಕಿನಕಲ್ಮಠ ಶ್ರೀಗಳು, ಆದಿಚುಂಚನಗಿರಿ ಶ್ರೀಗಳು, ರಾಮಕೃಷ್ಣ ಆಶ್ರಮದ ವಿನಯಾನಂದ ಸರಸ್ವತಿ ಸ್ವಾಮೀಜಿ, ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಆರ್.ಸಿ. ಜಗದೀಶ್, ವಿವಿಧ ಜಿಲ್ಲೆಯ ಕೃಷಿ ವಿಶ್ವವಿದ್ಯಾಲಯಗಳ ಕುಲಪತಿಗಳು, ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರು ಮತ್ತಿತರರು ಭಾಹವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

K.M.Sathish Gowda

Join WhatsApp

Join Now

Facebook

Join Now

Read more

ಪೊಲೀಸ್ ಇಲಾಖೆಯಲ್ಲಿ ‘ಮೇಜರ್ ಸರ್ಜರಿ’: 129 ಇನ್ಸ್‌ಪೆಕ್ಟರ್‌, 23 ಡಿವೈಎಸ್ಪಿಗಳಿಗೆ ವರ್ಗಾವಣೆ; ಬೆಂಗಳೂರು ಸಿಟಿ ಪಟ್ಟಿ ಇನ್ನೂ ಬಾಕಿ

ಸೂಡಾ ಕಾಮಗಾರಿಗಳ ಮೇಲೆ ಭ್ರಷ್ಟಾಚಾರ ನೆರಳು; ಡಿಸಿ ಕಚೇರಿ ಮುಂದೆ ಜೆಡಿಎಸ್ ಪ್ರತಿಭಟನೆ

‘ಕೊಟ್ಟ ಮಾತು ಉಳಿಯುತ್ತದೆಯೇ?’ – ಕಾಂಗ್ರೆಸ್ ಒಳಕಿಚ್ಚಿಗೆ ಸುರೇಶ್ ಮಾರ್ಮಿಕ ನುಡಿ, ಡಿಕೆಶಿ ದೆಹಲಿ ಪಯಣ ರಾಜಕೀಯ ಚರ್ಚೆ ತೀವ್ರ

“ಮೊದಲು ನಿಮ್ಮ ಹೈಕಮಾಂಡ್‌ ಹುಡುಕಿ, ಬಳಿಕ ಮೋದಿ ಬಗ್ಗೆ ಮಾತನಾಡಿ”: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ತೀವ್ರ ವಾಗ್ದಾಳಿ

ಪ್ಲಾಸ್ಟಿಕ್ ಮುಕ್ತ ಶಿವರಾತ್ರಿ ಉತ್ಸವಕ್ಕೆ ಹರಕೆರೆ ಹರಕೇಶ್ವರ ದೇವಸ್ಥಾನದಲ್ಲಿ ಸಂಕಲ್ಪ

ಜನಸೇವೆಗೆ ಬದ್ಧ ನಾಯಕತ್ವ: ಹಾರನಹಳ್ಳಿಯಲ್ಲಿ ಡಿ.ಎಸ್. ಅರುಣ್ ಅವರಿಂದ ಪಂಚಾಯಿತಿ ಕಟ್ಟಡ ಉದ್ಘಾಟನೆ ಹಾಗೂ ಹಕ್ಕುಪತ್ರ ವಿತರಣೆ

Leave a Comment