ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಹೊಸ ಉದ್ಯಮಗಳಿಗೆ ಸಾಲ ನೀಡಿಕೆ ಮೂಲಕ ಸಹಕಾರ ಕ್ಷೇತ್ರ ಸದೃಢಗೊಳಿಸಲು ಶಿಮೂಲ್ ಅಧ್ಯಕ್ಷ ಹೆಚ್.ಎನ್. ವಿದ್ಯಾಧರ್ ಕರೆ

On: November 14, 2025 9:48 PM
Follow Us:

ಶಿವಮೊಗ್ಗ: “ಆತ್ಮನಿರ್ಭರ ಭಾರತದ ನಿರ್ಮಾಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಅತ್ಯಂತ ಪ್ರಮುಖ. ಸಹಕಾರಿ ಸಂಸ್ಥೆಗಳು ಹೊಂದಿರುವ ಸಾಲ ವಿತರಣೆ ಸಾಮರ್ಥ್ಯವನ್ನು ಜನಪರ ಮತ್ತು ಉದ್ಯಮಪರ ಚಟುವಟಿಕೆಗಳಿಗೆ ಬಳಸಿದಲ್ಲಿ, ಸಹಕಾರ ಚಳವಳಿ ಗ್ರಾಮೀಣ–ನಗರ ಆರ್ಥಿಕತೆಗೆ ಹೊಸ ಬಲ ನೀಡಲು ಸಾಧ್ಯ” ಎಂದು ಶಿವಮೊಗ್ಗ ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷ ಹೆಚ್.ಎನ್. ವಿದ್ಯಾಧರ್ ಅಭಿಪ್ರಾಯಪಟ್ಟರು.

72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ “ಕಾರ್ಯಕ್ಷಮತೆ, ಉತ್ತರದಾಯಿತ್ವ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲು ಡಿಜಿಟಲೀಕರಣ ಪ್ರೋತ್ಸಾಹ” ಎಂಬ ಕೇಂದ್ರ ವಿಷಯದಡಿ ನವೆಂಬರ್ 14, 2025 ರಂದು ಮಾಚೇನಹಳ್ಳಿಯ ಡಾ. ಕುರಿಯನ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಪ್ತಾಹಾಚರಣೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ, ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಶಿಮೂಲ್, ಸಹಕಾರ ಇಲಾಖೆ ಹಾಗೂ ಶಿವಮೊಗ್ಗ ತಾಲ್ಲೂಕಿನ ವಿವಿಧ ಸಹಕಾರಿ ಸಂಘಗಳು ಸಂಯುಕ್ತವಾಗಿ ಆಯೋಜಿಸಿದ್ದವು.

ಸಹಕಾರಿ ಚಳವಳಿಯಲ್ಲಿ ಜವಾಬ್ದಾರಿ ಮುಖ್ಯ: ವಿದ್ಯಾಧರ್

ಉದ್ಘಾಟನಾ ಭಾಷಣದಲ್ಲಿ ಅವರು ಮಾತನಾಡಿ, “ಸಹಕಾರ ಸಂಘವನ್ನು ಕಟ್ಟುವುದಷ್ಟೇ ಸಾಕಾಗುವುದಿಲ್ಲ, ಸಂಘದ ಬಲವು ಸದಸ್ಯರಿಗೆ ನೀಡಬಹುದಾದ ನೈಜ ಸೌಲಭ್ಯಗಳಲ್ಲಿ ಪ್ರತಿಫಲಿಸಬೇಕು. ಚುನಾವಣಾ ಸಮಯದ ಉತ್ಸಾಹ ನಿರ್ದೇಶಕರಾಗಿ ಆಯ್ಕೆಯಾದ ನಂತರವೂ ಮುಂದುವರಿದರೆ ಮಾತ್ರ ಸಂಘಗಳ ನಿಲುವು ಬದಲಾಗುತ್ತದೆ. ಸಾಮರಸ್ಯದ ವಾತಾವರಣದಲ್ಲಿ ಸಾಧ್ಯವಾದಲ್ಲಿ ಸಂಘಗಳಲ್ಲಿ ಅವಿರೋಧ ಆಯ್ಕೆ ನಡೆಯಬೇಕು.” ಎಂದು ಹೇಳಿದರು.

ಶಿಮೂಲ್ ಒಕ್ಕೂಟದ ಸಾಧನೆ ಬಗ್ಗೆ ಮಾತನಾಡಿದ ಅವರು, ಪ್ರತಿ ದಿನ 8 ಲಕ್ಷ ಲೀಟರ್ ಹಾಲು ಸಂಗ್ರಹಣೆ ನಡೆಯುತ್ತಿದ್ದು, ರೈತರಿಗೆ ವಾರಕ್ಕೆ 30 ಕೋಟಿ ಮತ್ತು ತಿಂಗಳಿಗೆ 100 ಕೋಟಿಗೂ ಹೆಚ್ಚು ಪಾವತಿಸಲಾಗುತ್ತಿದೆ ಎಂದು ತಿಳಿಸಿದರು. “ಇದು ಸಾವಿರಾರು ಹಾಲು ಉತ್ಪಾದಕರ ಜೀವನೋಪಾಯಕ್ಕೆ ಶಿಮೂಲ್ ದೊಡ್ಡ ಆರ್ಥಿಕ ಆಧಾರವಾಗಿದೆ” ಎಂದು ಅವರು ವಿಶೇಷವಾಗಿ ಉಲ್ಲೇಖಿಸಿದರು.

ಸಹಕಾರಿ ಚಳವಳಿಗೆ ಹೊಸ ಒತ್ತು, ನೆಹರು ಜಯಂತಿಯಿಂದ ಏಳು ದಿನಗಳ ಸಪ್ತಾಹಾಚರಣೆ: ದಿನೇಶ್ ಬುಳ್ಳಾಪುರ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾಸಹಕಾರ ಯೂನಿಯನ್ ಹಾಗೂ ಜಿಲ್ಲಾಸಹಕಾರ ಹಾಲು ಒಕ್ಕೂಟದ ನಿರ್ದೇಶಕರಾದ ಹೆಚ್.ಬಿ. ದಿನೇಶ್ ಬುಳ್ಳಾಪುರ ಮಾತನಾಡಿ, ಸಹಕಾರಿ ಚಳವಳಿಯ ತತ್ವ–ತತ್ತ್ವಗಳನ್ನು ನೆನಪಿಸುವ ನವೆಂಬರ್ 14 ರಂದು ದೇಶದ ಪ್ರಥಮ ಪ್ರಧಾನಮಂತ್ರಿ ಪಂಡಿತ ಜವಾಹರಲಾಲ್ ನೆಹರುರವರ ಜನ್ಮದಿನದಿಂದ ಪ್ರಾರಂಭವಾಗಿ ಏಳು ದಿನಗಳ ಕಾಲ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಪ್ರತಿಯೊಂದು ತಾಲ್ಲೂಕು ಮಟ್ಟದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದೆಂದು ಹೇಳಿದರು. ಸಹಕಾರದ ಮೂಲ ಮೌಲ್ಯಗಳಾದ ಪಾರದರ್ಶಕತೆ, ಉತ್ತರದಾಯಿತ್ವ, ಸದಸ್ಯಕೇಂದ್ರೀಕೃತ ಆಡಳಿತ ಹಾಗೂ ಗ್ರಾಮೀಣ ಆರ್ಥಿಕತೆಯ ಶಕ್ತಿಕರಣವನ್ನು ಜನಮನಕ್ಕೆ ತಲುಪಿಸುವುದು ಸಪ್ತಾಹಾಚರಣೆಯ ಉದ್ದೇಶವಾಗಿದ್ದು, ಇದರ ಅಂಗವಾಗಿ ಸಹಕಾರ ಸಂಘಗಳ ಪಾತ್ರ, ಕಾರ್ಯಕ್ಷಮತೆ ಮತ್ತು ಡಿಜಿಟಲೀಕರಣದ ಮಹತ್ವವನ್ನು ಒತ್ತಿಹೇಳುವ ಹಲವು ಚಿಂತನಾ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ವಿವರಿಸಿದರು.

ಶಿವಮೊಗ್ಗ ತಾಲ್ಲೂಕಿನ ‘ಉತ್ತಮ ಸಹಕಾರ ಸಂಘ’ಗಳ ಘೋಷಣೆ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ, ಸೂಗೂರು. ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘ, ಮೇಲಿನಹನಸವಾಡಿ, ಹಾಲು ಉತ್ಪಾದಕರ ಸಂಘ, ಸಿದ್ದರಹಳ್ಳಿ, ಅರ್ಬನ್ ಕೋ-ಆಪರೇಟಿವ್ ಸೊಸೈಟಿ, ಶಿವಮೊಗ್ಗ, ಸಂಸ್ಥೆಗಳ ಕಾರ್ಯಪದ್ಧತಿ, ಸದಸ್ಯಸೇವೆ, ಪಾರದರ್ಶಕತೆ ಮತ್ತು ಆರ್ಥಿಕ ನಿರ್ವಹಣೆ ಆಧಾರದ ಮೇಲೆ ಈ ಸಂಘಗಳನ್ನು ಉತ್ತಮ ಸಹಕಾರ ಸಂಘಗಳಾಗಿ ಆಯ್ಕೆ ಮಾಡಲಾಯಿತು.

ತಾಲ್ಲೂಕಿನ ಉತ್ತಮ ಸಹಕಾರಿ” ಗೌರವ ಪಡೆದವರು

ವಿಶ್ವನಾಥ – ಹಾಲು ಉತ್ಪಾದಕರ ಸಂಘ, ಹೊಳೆಹಟ್ಟಿ, ಬಿ.ಆರ್. ನಾಗರಾಜ್ – ಮಾಜಿ ಅಧ್ಯಕ್ಷರು, ಪಿಕೆಪಿಎಸ್, ಸಿರಿಗೆರೆ, ಎಸ್.ಎಂ. ವೆಂಕಟೇಶ್ – ಮಾಜಿ ಅಧ್ಯಕ್ಷರು, ದುರ್ಗಿಗುಡಿ ಸಹಕಾರ, ಶ್ರೀಮತಿ ರಾಧಮ್ಮ – ಹಾಲು ಉತ್ಪಾದಕರ ಸಂಘ, ಓತಿಗಟ್ಟ, ಶ್ರೀಮತಿ ಜಾಹೇದಾ ಖಾತುನ್ – ಹಮ್ದರ್ದ್ ಸಹಕಾರಿ, ಶಿವಮೊಗ್ಗ ಇವರುಗಳನ್ನು ಸಹಕಾರ ಕ್ಷೇತ್ರಕ್ಕೆ ನೀಡಿದ ಸೇವೆಯನ್ನು ಗುರುತಿಸಿ ಸನ್ಮಾನ ಮಾಡಲಾಯಿತು.

ಉತ್ತಮ ನೌಕರ ಪ್ರಶಸ್ತಿಗೆ ಆಯ್ಕೆಯಾದವರು

ಮಲ್ಲೇಶಪ್ಪ – ಕಾರ್ಯದರ್ಶಿ, ಬುಳ್ಳಾಪುರ ಹಾಲು ಉತ್ಪಾದಕರ ಸಂಘ, ಮಂಜುನಾಥ ರೆಡ್ಡಿ – CEO, ಕಸಬಾ, ಸಚ್ಚಿನ್ ಬಿನ್ ಲಕ್ಷ್ಮೀನಾರಾಯಣ ಶೆಟ್ಟಿ ಟಿ.ಎನ್. – CEO, ಆರವೈಶ್ಯ ಶ್ರೀರಾಮ ಸಹಕಾರ ಸಂಘ, ಲೀಲಾವತಿ – ಕಾರ್ಯದರ್ಶಿ, ಹೊಳೆಬೆಳಗಲು ಮಹಿಳಾ ಹಾಲು ಉತ್ಪಾದಕರ ಸಂಘ ಇವರುಗಳಿಗೆ ಸಂಸ್ಥೆಗಳ ಸುಗಮ ಕಾರ್ಯನಿರ್ವಹಣೆಯ ಮೌಲ್ಯಮಾಪನ ಆಧಾರದ ಮೇಲೆ ಈ ನೌಕರರಿಗೆ ಪ್ರಶಸ್ತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ನರಸಿಂಹ ಸಿ. ಗಂಧದಮನೆ (ನಿರ್ದೇಶಕ, ಜಿಲ್ಲಾ ಸಹಕಾರ ಯೂನಿಯನ್), ಉಂಬಳೇಬೈಲು ಮೋಹನ್ (ಅಧ್ಯಕ್ಷರು, ಜಿಲ್ಲಾ ಸಹಕಾರ ಮಾರಾಟ ಒಕ್ಕೂಟ), ಎಂ.ಎನ್. ಜಯಣ್ಣ ಗಾಡಿಕೊಪ್ಪ (ಅಧ್ಯಕ್ಷರು, TAPCMS), ನಾಗಭೂಷಣ ಸಿ. ಕಲ್ಮನೆ (ಸಹಕಾರ ಉಪನಿಬಂಧಕರು), ತೇಜೋಮೂರ್ತಿ ಆರ್. (ಲೆಕ್ಕಪರಿಶೋಧನಾ ಉಪನಿರ್ದೇಶಕರು), ಎಸ್.ಜಿ. ಶೇಖರ್ (ವ್ಯವಸ್ಥಾಪಕ ನಿರ್ದೇಶಕರು, ಶಿಮೂಲ್), ರಾಜಣ್ಣ ರೆಡ್ಡಿ (ವ್ಯವಸ್ಥಾಪಕ ನಿರ್ದೇಶಕರು, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್), ಟಿ.ವಿ. ಶ್ರೀನಿವಾಸ (ಸಹಾಯಕ ನಿಬಂಧಕರು) ಸೇರಿದಂತೆ ವಿವಿಧ ಸಹಕಾರ ಕ್ಷೇತ್ರದ ಗಣ್ಯರು ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಚುನಾವಣೆಯಲ್ಲಿ ಅಯ್ಕೆಯಾದ ದಿನೇಶ್ ಬುಳ್ಳಾಪುರ ಇವರಿಗೆ ಸನ್ಮಾನಿಸಲಾಯಿತು.

K.M.Sathish Gowda

Join WhatsApp

Join Now

Facebook

Join Now

Read more

ಪೊಲೀಸ್ ಇಲಾಖೆಯಲ್ಲಿ ‘ಮೇಜರ್ ಸರ್ಜರಿ’: 129 ಇನ್ಸ್‌ಪೆಕ್ಟರ್‌, 23 ಡಿವೈಎಸ್ಪಿಗಳಿಗೆ ವರ್ಗಾವಣೆ; ಬೆಂಗಳೂರು ಸಿಟಿ ಪಟ್ಟಿ ಇನ್ನೂ ಬಾಕಿ

ಸೂಡಾ ಕಾಮಗಾರಿಗಳ ಮೇಲೆ ಭ್ರಷ್ಟಾಚಾರ ನೆರಳು; ಡಿಸಿ ಕಚೇರಿ ಮುಂದೆ ಜೆಡಿಎಸ್ ಪ್ರತಿಭಟನೆ

‘ಕೊಟ್ಟ ಮಾತು ಉಳಿಯುತ್ತದೆಯೇ?’ – ಕಾಂಗ್ರೆಸ್ ಒಳಕಿಚ್ಚಿಗೆ ಸುರೇಶ್ ಮಾರ್ಮಿಕ ನುಡಿ, ಡಿಕೆಶಿ ದೆಹಲಿ ಪಯಣ ರಾಜಕೀಯ ಚರ್ಚೆ ತೀವ್ರ

“ಮೊದಲು ನಿಮ್ಮ ಹೈಕಮಾಂಡ್‌ ಹುಡುಕಿ, ಬಳಿಕ ಮೋದಿ ಬಗ್ಗೆ ಮಾತನಾಡಿ”: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ತೀವ್ರ ವಾಗ್ದಾಳಿ

ಪ್ಲಾಸ್ಟಿಕ್ ಮುಕ್ತ ಶಿವರಾತ್ರಿ ಉತ್ಸವಕ್ಕೆ ಹರಕೆರೆ ಹರಕೇಶ್ವರ ದೇವಸ್ಥಾನದಲ್ಲಿ ಸಂಕಲ್ಪ

ಜನಸೇವೆಗೆ ಬದ್ಧ ನಾಯಕತ್ವ: ಹಾರನಹಳ್ಳಿಯಲ್ಲಿ ಡಿ.ಎಸ್. ಅರುಣ್ ಅವರಿಂದ ಪಂಚಾಯಿತಿ ಕಟ್ಟಡ ಉದ್ಘಾಟನೆ ಹಾಗೂ ಹಕ್ಕುಪತ್ರ ವಿತರಣೆ

Leave a Comment