ಬೆಂಗಳೂರು: ಸಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ದಿ ಡೆವಿಲ್’ ಸಿನಿಮಾ ಡಿಸೆಂಬರ್ 11ರಂದು ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಚಿತ್ರ ಬಿಡುಗಡೆಗೂ ಮುನ್ನವೇ ದೇಶ-ವಿದೇಶಗಳಲ್ಲಿನ ಕನ್ನಡಿಗರಿಂದ ಭರ್ಜರಿ ಮುಂಗಡ ಟಿಕೆಟ್ ಬುಕಿಂಗ್ ಆಗಿದ್ದು, ಲಕ್ಷಾಂತರ ಟಿಕೆಟ್‌ಗಳೇ ಸೋಲ್ಡ್ ಔಟ್ ಆಗಿವೆ. ಅನೇಕ ನಗರಗಳಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮ ಶುರುಮಾಡಿದ್ದಾರೆ.
ಪ್ರಕಾಶ್ ವೀರ್ ನಿರ್ದೇಶನ
ಚಿತ್ರವನ್ನು ಪ್ರಕಾಶ್ ವೀರ್ ನಿರ್ದೇಶಿಸಿದ್ದು, ದರ್ಶನ್ ಜೊತೆಗೆ ರಚನಾ ರೈ, ಶರ್ಮಿಳಾ ಮಾಂಡ್ರೆ, ಅಚ್ಯುತ್ ಕುಮಾರ್, ವಿನಯ್ ಗೌಡ ಮೊದಲಾದ ಕಲಾವಿದರು ನಟಿಸಿದ್ದಾರೆ. ಸಿನಿಮಾ ಆರಂಭಿಕ ದಿನವೇ ದೊಡ್ಡ ಮಟ್ಟದ ಕಲೆಕ್ಷನ್ ದಾಖಲಿಸುವ ಸಾಧ್ಯತೆ ಇದೆ ಎಂದು ಚರ್ಚೆಗಳಿವೆ.

ಫ್ಯಾನ್ಸ್‌ಗೆ ದರ್ಶನ್‌ನಿಂದ ಪತ್ರ
ಚಿತ್ರದ ರಿಲೀಸ್ ಮುನ್ನ ದರ್ಶನ್ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದು, ತಮ್ಮ ವಾಕ್ಬಲದಿಂದಲ್ಲ, ಚಿತ್ರದ ಯಶಸ್ಸಿನಿಂದಲೇ ಪ್ರತಿಕ್ರಿಯೆ ಕೊಡಿ ಎಂದು ವಿನಂತಿ ಮಾಡಿದ್ದಾರೆ.
“ಜನರು ಏನು ಹೇಳುತ್ತಾರೆ ಎಂಬುದರ ಬಗ್ಗೆ ಚಿಂತಿಸಬೇಡಿ. ನೀವು ನನ್ನ ಶಕ್ತಿ, ನನ್ನ ಕುಟುಂಬ. ನಿಮ್ಮ ಪ್ರೀತಿ, ನಿಮ್ಮ ನಂಬಿಕೆ ನನಗೆ ಬದುಕಿನ ಬೆಂಬಲ,” ಎಂದು ದರ್ಶನ್ ಪತ್ರದಲ್ಲಿ ಬರೆಯುತ್ತಾರೆ.
ಅಭಿಮಾನಿಗಳ ಪ್ರಚಾರ, ಬೆಂಬಲ, ಚಿಂತೆಯನ್ನು ತಿಳಿದುಕೊಳ್ಳುತ್ತಿರುವುದಾಗಿ ಹೇಳಿ, ತಾನು ದೂರದಲ್ಲಿದ್ದರೂ ಪ್ರತಿಕ್ಷಣವೂ ಅವರ ಅಕ್ಕಪಕ್ಕದಲ್ಲೇ ಇದ್ದೇನೆ ಎಂದು ಭಾವನಾತ್ಮಕವಾಗಿ ತಿಳಿಸಿದ್ದಾರೆ.
ಸಮಯವೇ ಉತ್ತರ ಕೊಡುತ್ತದೆ”
“ಗೋಡೆಯಂತೆ ನಿಂತಿದ್ದಕ್ಕಾಗಿ ಧನ್ಯವಾದಗಳು. ಸಮಯವೇ ಎಲ್ಲದರಿಗೂ ಉತ್ತರ ನೀಡುತ್ತದೆ. ದ್ವೇಷಕ್ಕೆ ಉತ್ತರ ಕೊಡಬೇಕಾದರೆ ಈ ಚಿತ್ರದ ಯಶಸ್ಸೇ ನಿಮ್ಮ ಧ್ವನಿ ಆಗಲಿ,” ಎಂದು ದರ್ಶನ್ ಪತ್ರದಲ್ಲೇ ಘೋಷಿಸದ್ದಾರೆ.
“ಪ್ರೀತಿಯಿಂದ — ನಿಮ್ಮ ದಾಸ, ದರ್ಶನ” ಎಂದು ಪತ್ರ ಕೊನೆಗೊಳ್ಳುತ್ತದೆ.ರಾಜ್ಯದ ಅತ್ಯಂತ ದೊಡ್ಡ ಮಟ್ಟದ ರಿಲೀಸ್
ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರು ಬಿಡುಗಡೆಗೆ ಸಿದ್ಧತೆ ಪೂರ್ಣಗೊಂಡಿದ್ದು, ಇದೇ ವೇಳೆ:
ರಾಜ್ಯದ 400 ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ‘ದಿ ಡೆವಿಲ್’ ರಿಲೀಸ್
ಮೊದಲ ಶೋ ಬೆಳಗ್ಗೆ 6.30ಕ್ಕೆ
ಬೆಂಗಳೂರು ಕೆ.ಜಿ. ರಸ್ತೆಯ ನರ್ತಕಿ ಥಿಯೇಟರ್‌ನಲ್ಲಿ ವಿಶೇಷ ಮೊದಲ ಪ್ರದರ್ಶನ
ಅತ್ಯಂತ ದೊಡ್ಡಮಟ್ಟದ ರಿಲೀಸ್ ಆಗಲಿದೆ ಎಂದು ತಂಡ ತಿಳಿಸಿದೆ.
ಅಭಿಮಾನಿಗಳ ನಿಷ್ಠೆ, ಸಿನಿಮಾ ತಂಡದ ಬಿಗಿಯಾದ ಸಿದ್ಧತೆ ಮತ್ತು ಭರ್ಜರಿ ಮುಂಗಡ ಬುಕ್ಕಿಂಗ್ — ಇವೆಲ್ಲವೂ ಸೇರಿ ‘ದಿ ಡೆವಿಲ್’ ಚಿತ್ರ ಇದೀಗ ಸಂಡಲ್‌ವುಡ್‌ನಲ್ಲಿ ಹೊಸ ದಾಖಲೆ ಮಾಡಲು ಸಜ್ಜಾಗಿದೆ.











