ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಉಪಗ್ರಹದಿಂದ ನೇರ ಮೊಬೈಲ್ ನೆಟ್‌ವರ್ಕ್: BlueBird Block-2 ಇಸ್ರೋದಿಂದ ಯಶಸ್ವಿ ಉಡಾವಣೆ

On: December 24, 2025 1:36 PM
Follow Us:

ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಅಮೆರಿಕದ ಖಾಸಗಿ ಕಂಪನಿ AST SpaceMobileಗೆ ಸೇರಿದ BlueBird Block-2 ಸಂವಹನ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಇಂದು ಬೆಳಗ್ಗೆ 8:55:30ಕ್ಕೆ ಇಸ್ರೋನ ಬಾಹುಬಲಿ ಹೆವಿ-ಲಿಫ್ಟ್ ರಾಕೆಟ್ LVM3-M6 ಮೂಲಕ ಈ ಉಪಗ್ರಹವನ್ನು ಭೂಮಿಯ ಕೆಳ ಕಕ್ಷೆ (LEO)ಯಲ್ಲಿ ಸ್ಥಾಪಿಸಲಾಗಿದೆ. ಇದು ಇಸ್ರೋ ನಡೆಸಿದ ಸಂಪೂರ್ಣ ವಾಣಿಜ್ಯಿಕ ಉಡಾವಣೆಯಾಗಿದ್ದು, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ವಿಶ್ವಾಸಾರ್ಹತೆಯನ್ನು ಮತ್ತಷ್ಟು ಬಲಪಡಿಸಿದೆ.

ಸುಮಾರು 6100 ಕೆಜಿ ತೂಕ ಹೊಂದಿರುವ BlueBird Block-2 ಉಪಗ್ರಹವು, LVM3 ರಾಕೆಟ್ ಮೂಲಕ ಭೂಮಿಯ ಅತ್ಯಂತ ಕೆಳ ಕಕ್ಷೆಯಲ್ಲಿ ಇರಿಸಲಾದ ಅತಿಭಾರವಾದ ಪೇಲೋಡ್ ಎಂಬ ದಾಖಲೆಯನ್ನು ನಿರ್ಮಿಸಿದೆ. ಈ ಉಪಗ್ರಹದ ಪ್ರಮುಖ ವಿಶೇಷತೆ ಎಂದರೆ 4G ಮತ್ತು 5G ಸ್ಮಾರ್ಟ್‌ಫೋನ್‌ಗಳಿಗೆ ನೇರವಾಗಿ ಬ್ರಾಡ್‌ಬ್ಯಾಂಡ್ ಸಂಪರ್ಕ ಒದಗಿಸುವ ಸಾಮರ್ಥ್ಯ. ಇದರ ಮೂಲಕ ಸಂಪ್ರದಾಯಿಕ ಮೊಬೈಲ್ ಟವರ್‌ಗಳ ಅವಶ್ಯಕತೆ ಬಹುತೇಕ ಕಡಿಮೆಯಾಗಲಿದೆ.

ಈ ಉಪಗ್ರಹ ಉಡಾವಣೆಯ ಪ್ರಮುಖ ಗುರಿ ಸಂಪೂರ್ಣವಾಗಿ ವಾಣಿಜ್ಯಿಕವಾಗಿದ್ದು, ಸಂವಹನ ಉಪಗ್ರಹ ಉಡಾವಣಾ ವಲಯದಲ್ಲಿ ಭಾರತವನ್ನು ಜಾಗತಿಕ ಮಟ್ಟದಲ್ಲಿ ಪ್ರಮುಖ ಕೇಂದ್ರವಾಗಿ ರೂಪಿಸುವುದಾಗಿದೆ. BlueBird Block-2 ಯಶಸ್ವಿ ಉಡಾವಣೆಯೊಂದಿಗೆ, ದೂರದ ಪ್ರದೇಶಗಳು, ಅರಣ್ಯ ಪ್ರದೇಶಗಳು ಹಾಗೂ ನೆಟ್‌ವರ್ಕ್ ಕೊರತೆಯಿರುವ ಭಾಗಗಳಲ್ಲಿಯೂ 4G ಮತ್ತು 5G ಸೇವೆಗಳು ಲಭ್ಯವಾಗಲಿವೆ. ಇದರಿಂದ ಧ್ವನಿ ಕರೆ, ವೀಡಿಯೊ ಕರೆ, ಸಂದೇಶ ವಿನಿಮಯ ಮತ್ತು ಡೇಟಾ ಸೇವೆಗಳು ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಸಾಧ್ಯವಾಗಲಿದೆ.

ಅಮೆರಿಕದ AST SpaceMobile ಕಂಪನಿಯು ಈಗಾಗಲೇ ಸೆಪ್ಟೆಂಬರ್ 2024ರಲ್ಲಿ BlueBird-1 ಸೇರಿದಂತೆ ಐದು ಉಪಗ್ರಹಗಳನ್ನು ಉಡಾವಣೆ ಮಾಡಿದ್ದು, ವಿಶ್ವದಾದ್ಯಂತ 50ಕ್ಕೂ ಹೆಚ್ಚು ಮೊಬೈಲ್ ಆಪರೇಟರ್‌ಗಳೊಂದಿಗೆ ಪಾಲುದಾರಿಕೆ ಹೊಂದಿದೆ. ಸಾಂಪ್ರದಾಯಿಕ ನೆಟ್‌ವರ್ಕ್‌ಗಳು ತಲುಪದ ಪ್ರದೇಶಗಳಿಗೆ ಮೊಬೈಲ್ ಸಂಪರ್ಕ ಒದಗಿಸುವುದು ಈ ಕಂಪನಿಯ ಪ್ರಮುಖ ಗುರಿಯಾಗಿದೆ. ಮುಂದಿನ ದಿನಗಳಲ್ಲಿ ಇದೇ ರೀತಿಯ ಇನ್ನಷ್ಟು ಉಪಗ್ರಹಗಳನ್ನು ಉಡಾವಣೆ ಮಾಡುವ ಯೋಜನೆಯೂ ಇದೆ.

ಈ ಸೇವೆ ಪಡೆಯಲು ಬಳಕೆದಾರರು ತಮ್ಮ ಮೊಬೈಲ್ ಸೇವಾ ಪೂರೈಕೆದಾರರನ್ನು ಬದಲಾಯಿಸುವ ಅಗತ್ಯವಿಲ್ಲ. AST SpaceMobile ಜಾಗತಿಕ ಮೊಬೈಲ್ ಆಪರೇಟರ್‌ಗಳೊಂದಿಗೆ ಕೆಲಸ ಮಾಡುತ್ತಿರುವುದರಿಂದ, ಸಾಮಾನ್ಯ ಬಳಕೆದಾರರಿಗೆ ಈ ಸೇವೆ ಸುಲಭವಾಗಿ ಲಭ್ಯವಾಗಲಿದೆ. ಇಸ್ರೋ ಮತ್ತು AST SpaceMobile ನಡುವಿನ ಒಪ್ಪಂದದ ಅಡಿಯಲ್ಲಿ ನಡೆದ ಈ ಉಡಾವಣೆ, ಭಾರತೀಯ ಬಾಹ್ಯಾಕಾಶ ವಲಯಕ್ಕೆ ಹೊಸ ಆಯಾಮ ನೀಡಿದ್ದು, ಜಗತ್ತಿನ ಮೊಬೈಲ್ ಸಂಪರ್ಕ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ದಾರಿ ಮಾಡಿಕೊಡಲಿದೆ.

K.M.Sathish Gowda

Join WhatsApp

Join Now

Facebook

Join Now

Read more

ಯುವಕರು ಸಂಘಟಿತರಾಗಿ ನಾರಾಯಣ ಗುರುಗಳ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲಿ: ಸಚಿವ ಮಧು ಬಂಗಾರಪ್ಪ

ಧರ್ಮ, ಪರಂಪರೆ ಹಾಗೂ ಮಠಮಾನ್ಯಗಳ ಸಂರಕ್ಷಣೆಗೆ ಸಂಘಟಿತ ಪ್ರಯತ್ನ ಅಗತ್ಯ: ಭಿನ್ನಾಭಿಪ್ರಾಯ ಬದಿಗಿಟ್ಟು ಸಮಾಜದ ಹಿತಕ್ಕಾಗಿ ಒಂದಾಗ ಬೇಕು: ವೀರಶೈವ ಲಿಂಗಾಯತ ಸಮಾಜದ ಒಗ್ಗಟ್ಟು ಕಾಪಾಡುವುದು ಎಲ್ಲರ ಜವಾಬ್ದಾರಿ: ಬಿ.ವೈ. ವಿಜಯೇಂದ್ರ

ಭಕ್ತಿಯ ಮಹಾಪ್ರವಾಹದಲ್ಲಿ ಶಿವಮೊಗ್ಗ: ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಗೆ ಲಕ್ಷಾಂತರ ಜನರ ಸಾಕ್ಷಿ! ಕಾಲಿಡಲೂ ಜಾಗವಿಲ್ಲ, ಬಾನಂಗಳದಲ್ಲಿ ಜೈಕಾರ! ಶಿವಮೊಗ್ಗದಲ್ಲಿ ಮೈ ನವಿರೇಳಿಸಿದ ಗಣೇಶೋತ್ಸವದ ಅದ್ಧೂರಿ ಮೆರವಣಿಗೆ!

ಸೆ.26-27ರಂದು ಬೆಂಗಳೂರಿನಲ್ಲಿ ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಮಹಾಸಮ್ಮೇಳನ: ಪಂಚಪೀಠಾಧೀಶರ ಸಾನ್ನಿಧ್ಯ

ಶಿವಮೊಗ್ಗ ಹಿಂದೂ ಗಣಪತಿ ಮೆರವಣಿಗೆಗೆ ಭಕ್ತಿಯ ಸಾಥ್: ಐದು ಸಾವಿರ ಭಕ್ತರಿಗೆ ಅನ್ನದಾಸೋಹ: ಮೂರನೇ ವರ್ಷವೂ ಸೇವಾ ಪರಂಪರೆ ಮುಂದುವರಿಸಿದ ಎಸ್‌ಆರ್‌ವಿ ಎಂಟರ್‌ಪ್ರೈಸಸ್ ಗೆಳೆಯರ ಬಳಗ

50 ವರ್ಷಗಳ ದಾಂಪತ್ಯ ಜೀವನ ಸಮಾಜಕ್ಕೆ ಮಾದರಿ: ಸಂಸ್ಕಾರ, ಶಿಕ್ಷಣದೊಂದಿಗೆ ಬದುಕು ಕಟ್ಟಿಕೊಳ್ಳಿ: ತಾಯ್ನಾಡಿಗೆ ಮರಳಿ ಸೇವೆ ಸಲ್ಲಿಸಿ ಎಂದು ವಿದ್ಯಾರ್ಥಿಗಳಿಗೆ ಕೆ.ಈ. ಕಾಂತೇಶ್ ಕರೆ

Leave a Comment