ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ವೀರಶೈವ–ಲಿಂಗಾಯತ ಯುವಜನತೆಗೆ ಜಾಗತಿಕ ವೇದಿಕೆ: ಜ.29ರಿಂದ ಫೆ.1ರವರೆಗೆ ಬೆಂಗಳೂರಿನಲ್ಲಿ ಗ್ಲೋಬಲ್ ಬಿಸಿನೆಸ್‌ ಕಾಂಕ್ಲೇವ್

On: January 16, 2026 10:02 PM
Follow Us:

ಬೆಂಗಳೂರು: ವೀರಶೈವ–ಲಿಂಗಾಯತ ಸಮಾಜದ ಪ್ರತಿಯೊಬ್ಬ ಯುವಕ–ಯುವತಿಯು ಆರ್ಥಿಕವಾಗಿ ಸಬಲರಾಗಬೇಕು, ಸ್ವಾಭಿಮಾನಿ ಹಾಗೂ ಸ್ವಾವಲಂಬಿ ಬದುಕು ರೂಪಿಸಬೇಕು ಮತ್ತು ಜಾಗತಿಕ ಮಟ್ಟದಲ್ಲಿ ತಮ್ಮದೇ ಆದ ಗುರುತು ಮೂಡಿಸಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ ಅಂತರಾಷ್ಟ್ರೀಯ ಲಿಂಗಾಯಿತ ಯುವ ವೇದಿಕೆ ವತಿಯಿಂದ ವೀರಶೈವ–ಲಿಂಗಾಯತ ಗ್ಲೋಬಲ್ ಬಿಸಿನೆಸ್‌ ಕಾಂಕ್ಲೇವ್ ಅನ್ನು ಆಯೋಜಿಸಲಾಗಿದೆ. ಈ ಮಹತ್ವದ ಕಾರ್ಯಕ್ರಮವು ಜ.29ರಿಂದ ಫೆಬ್ರವರಿ 1ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ವೈಟ್ ಪೆಟಲ್ಸ್ ಸಭಾಂಗಣದಲ್ಲಿ ನಡೆಯಲಿದೆ.

ಈ ಸಂಬಂಧ ನಗರದ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಲಿಂಗಾಯಿತ ಯುವ ವೇದಿಕೆ ವತಿಯಿಂದ ಪತ್ರಿಕಾಗೋಷ್ಠಿ ನಡೆಸಲಾಗಿದ್ದು, ವೇದಿಕೆಯ ಪ್ರಮುಖರಾದ ಸಂತೋಷ್ ಕೆಂಚಾಂಬರ, ಟ್ರಸ್ಟಿ ಸತೀಶ್ ಮೂಡಿ, ಸಂಸ್ಥಾಪಕ ಸದಸ್ಯರುಗಳಾದ ವಿದ್ಯಾ ಪಟೇಲ್, ಶಿವಕುಮಾರ್ ಸರಶೆಟ್ಟಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವಿನಯ್ ಮಹದೇವಸ್ವಾಮಿ, ಬೆಂಗಳೂರು ನಗರ ಅಧ್ಯಕ್ಷ ಪ್ರತಾಪ್ ಆರಾಧ್ಯ ಸೇರಿದಂತೆ ಹಲವರು ಪಾಲ್ಗೊಂಡು ಮಾಹಿತಿ ನೀಡಿದರು.

ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಸಂತೋಷ್ ಕೆಂಚಾಂಬರ ಅವರು,
“ಸ್ವಾವಲಂಬಿ ಹಾಗೂ ಸ್ವಾಭಿಮಾನಿ ಬದುಕಿಗೆ ಸಂಘಟನೆ ಅತ್ಯಂತ ಅಗತ್ಯ. ನಮ್ಮ ಸಮಾಜದ ಯುವಜನತೆ ಉದ್ಯಮ, ಕೈಗಾರಿಕೆ, ತಂತ್ರಜ್ಞಾನ ಮತ್ತು ಸೇವಾ ಕ್ಷೇತ್ರಗಳಲ್ಲಿ ಮುಂದೆ ಬರಬೇಕೆಂಬ ಉದ್ದೇಶದಿಂದಲೇ ಈ ಗ್ಲೋಬಲ್ ಬಿಸಿನೆಸ್‌ ಕಾಂಕ್ಲೇವ್ ಅನ್ನು ರೂಪಿಸಲಾಗಿದೆ. ಇದು ಕೇವಲ ಕಾರ್ಯಕ್ರಮವಲ್ಲ, ವೀರಶೈವ–ಲಿಂಗಾಯತ ಯುವಜನತೆಗೆ ಭವಿಷ್ಯ ನಿರ್ಮಾಣದ ವೇದಿಕೆ” ಎಂದು ಹೇಳಿದರು.

ಜ.29ರಂದು ನಡೆಯುವ ಉದ್ಘಾಟನಾ ಸಮಾರಂಭವನ್ನು ಸಿದ್ದಗಂಗಾ ಮಠದ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ನೆರವೇರಿಸಲಿದ್ದು, ಸಚಿವ ಸಂಪುಟದ ಸಚಿವರಾದ ಎಂ.ಬಿ. ಪಾಟೀಲ್, ಈಶ್ವರ್ ಖಂಡ್ರೆ, ಶರಣಗೌಡ ದರ್ಶನಪೂರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಕಾಂಕ್ಲೇವ್‌ನಲ್ಲಿ 230ಕ್ಕೂ ಹೆಚ್ಚು ಮಳಿಗೆಗಳು ಸ್ಥಾಪನೆಯಾಗಲಿದ್ದು, ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣದ ವಿವಿಧ ಜಿಲ್ಲೆಗಳಿಂದ ವೀರಶೈವ–ಲಿಂಗಾಯತ ಸಮುದಾಯದ ಉದ್ಯಮಿಗಳು ತಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರದರ್ಶಿಸಲಿದ್ದಾರೆ. ಯುವ ಉದ್ಯಮಿಗಳಿಗೆ ವಿಶೇಷವಾಗಿ ನೆಟ್‌ವರ್ಕಿಂಗ್ ಝೋನ್ ಆರಂಭಿಸಲಾಗಿದ್ದು, ಕೈಗಾರಿಕೆ, ವೈದ್ಯಕೀಯ, ಬ್ಯಾಂಕಿಂಗ್, ಐಟಿ–ಬಿಟಿ ಸೇರಿದಂತೆ ವಿವಿಧ ಕ್ಷೇತ್ರಗಳ ಬಗ್ಗೆ ಸಮಗ್ರ ಮಾಹಿತಿ ಮತ್ತು ಮಾರ್ಗದರ್ಶನ ಲಭ್ಯವಾಗಲಿದೆ.

ಇದಲ್ಲದೆ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಹಾಗೂ ಮೈಸೂರು ಭಾಗದ ವಿಶೇಷ ಖಾದ್ಯ–ತಿನಿಸುಗಳ ಫುಡ್ ಫೆಸ್ಟ್ ಆಯೋಜಿಸಲಾಗಿದ್ದು, ಅಂದಾಜು ಒಂದು ಲಕ್ಷಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಫೆಬ್ರವರಿ 1ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಚಿಕ್ಕಮಗಳೂರಿನ ಬಸವತತ್ವ ಪೀಠದ ಡಾ. ಬಸವಮರಳಸಿದ್ದಪ್ಪ ಸ್ವಾಮೀಜಿಗಳು, ಸಚಿವರಾದ ಡಾ. ಶರಣ ಪ್ರಕಾಶ್ ಪಾಟೀಲ್, ಶಾಸಕರಾದ ವಿಜಯಾನಂದ ಕಾಶಪ್ಪನವರ್, ಶಂಕರ್ ಬಿದರಿ, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಶ್ರೀಮತಿ ರಾಣಿ ಸತೀಶ್, ವಿಧಾನಪರಿಷತ್ ಸದಸ್ಯ ನವೀನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಈ ಕಾಂಕ್ಲೇವ್ ಮೂಲಕ ವೀರಶೈವ–ಲಿಂಗಾಯತ ಸಮಾಜದ ಯುವಜನತೆ ಆರ್ಥಿಕವಾಗಿ ಸಬಲರಾಗಿ, ಬದುಕು ಕಟ್ಟಿಕೊಳ್ಳಬೇಕು, ಜೊತೆಗೆ ದೇಶ–ವಿದೇಶಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಬೇಕು ಎಂಬುದೇ ಅಂತರಾಷ್ಟ್ರೀಯ ಲಿಂಗಾಯಿತ ಯುವ ವೇದಿಕೆಯ ಮುಖ್ಯ ಆಶಯವಾಗಿದೆ. ಸಮಾಜದ ಎಲ್ಲ ವರ್ಗದವರಿಗೂ ಮುಕ್ತ ಅವಕಾಶ ನೀಡಲಾಗಿದ್ದು, ಪ್ರತಿಯೊಬ್ಬರೂ ಭಾಗವಹಿಸಿ ಈ ಐತಿಹಾಸಿಕ ಪ್ರಯತ್ನಕ್ಕೆ ಕೈಜೋಡಿಸಬೇಕೆಂದು ಸಂಘಟಕರು ಮನವಿ ಮಾಡಿದ್ದಾರೆ.

K.M.Sathish Gowda

Join WhatsApp

Join Now

Facebook

Join Now

Read more

ನೀಟ್ ವಿಚಾರದಲ್ಲಿ ಕೇಂದ್ರದ ವಿರುದ್ಧ ಅಪಪ್ರಚಾರ, ಹಿಜಾಬ್ ಮೂಲಕ ಮತಬ್ಯಾಂಕ್ ರಾಜಕಾರಣ: ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್ ಎನ್.ಕೆ ಆರೋಪ

​ಶಿವಮೊಗ್ಗದಲ್ಲಿ ಹರಿದುಬರಲಿದೆ ಭಕ್ತಿಯ ಮಹಾಪೂರ: 34 ವರ್ಷಗಳ ಬಳಿಕ ಜಗದ್ಗುರುಗಳ ಭವ್ಯ ಅಡ್ಡಪಲ್ಲಕ್ಕಿ ಉತ್ಸವ, ಬಿಎಸ್‌ವೈಗೆ ಅಭಿನಂದನೆ ಹಾಗೂ ಬಸವೇಶ್ವರ ಸೊಸೈಟಿಯ ಶತಮಾನೋತ್ಸವದ ತ್ರಿವೇಣಿ ಸಂಗಮ!

​ರೇಣುಕಾಸ್ವಾಮಿ ಹತ್ಯೆ ಕೇಸ್: ದರ್ಶನ್‌ಗೆ ಸುಪ್ರೀಂ ‘ಶಾಕ್’; ಇನ್ನೂ ಒಂದು ವರ್ಷ ಜೈಲೇ ಫಿಕ್ಸ್!

ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ (SIR) ಚುನಾವಣಾ ಆಯೋಗದ ‘ಮಹಾ ಮಾಸ್ಟರ್ ಪ್ಲಾನ್’: ಜೂನ್ 30ರಿಂದ ಮನೆ-ಮನೆಗೆ ಅಧಿಕಾರಿಗಳ ಭೇಟಿ ಆರಂಭ

ನೀಟ್ ಅಕ್ರಮದಲ್ಲಿ ಮೋದಿ ಸರ್ಕಾರ ಸಂಪೂರ್ಣ ವಿಫಲ: ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟ ಖಂಡನೀಯ – ಮುಖ್ಯಮಂತ್ರಿ ಸಿದ್ದರಾಮಯ್ಯ

ಶಾಲೆಗಳಲ್ಲಿ ಹಿಜಾಬ್ ಕಿಡಿ: ಸರ್ಕಾರದ ವಿರುದ್ಧ ಬಿಜೆಪಿ ನಾಯಕರ ಕೆಂಡಾಮಂಡಲ

Leave a Comment