ದುಬೈ: ದುಬೈನಲ್ಲಿ 28ನೇ ಶನಿವಾರ, ಫೆಬ್ರವರಿ 2026 ರಂದು ನಡೆಯಲಿರುವ “ವಿಜಯರತ್ನ ಇಂಟರ್‌ನ್ಯಾಷನಲ್ 2026” ಪ್ರಶಸ್ತಿ ಪ್ರದಾನ ಸಮಾರಂಭವು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಈ ಭವ್ಯ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆಯ ಯುವ ಉದ್ಯಮಿ ಹಾಗೂ ಸಮಾಜಮುಖಿ ನಾಯಕ ಶ್ರೀ ಪ್ರದೀಪ್ ವಿ.ಎಲಿ ಅವರು ಗೌರವಾನ್ವಿತರಾಗಲಿರುವುದು ಜಿಲ್ಲೆಯಷ್ಟೇ ಅಲ್ಲ, ರಾಜ್ಯದ ಹೆಮ್ಮೆಯ ಕ್ಷಣವಾಗಲಿದೆ. ಗಣೇಶ್ ರೂಫಿಂಗ್ ಸಂಸ್ಥೆಯ ಮಾಲೀಕರಾಗಿದ್ದು, JSW ರೂಫಿಂಗ್ ಶೀಟ್‌ಗಳ ಅಧಿಕೃತ ವಿತರಕರಾಗಿ ತಮ್ಮ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ ಅವರು, ವಾಣಿಜ್ಯ ಕ್ಷೇತ್ರದಲ್ಲಿ ಪ್ರಾಮಾಣಿಕತೆ, ಗುಣಮಟ್ಟ ಮತ್ತು ಸೇವಾಭಾವದ ಮೂಲಕ ವಿಶಿಷ್ಟ ಗುರುತು ಮೂಡಿಸಿದ್ದಾರೆ.

ಈ ಗೌರವದ ಹಿನ್ನೆಲೆಯಲ್ಲಿ ಡಾ. ಆನಂದ ಸಂಕೇಶ್ವರ, ವ್ಯವಸ್ಥಾಪಕ ನಿರ್ದೇಶಕರು, ವಿಆರ್‌ಎಲ್ ಸಮೂಹ ಸಂಸ್ಥೆಗಳು, ಹುಬ್ಬಳ್ಳಿ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ, ದುಬೈನಲ್ಲಿ ನಡೆಯಲಿರುವ ಸಮಾರಂಭಕ್ಕೆ ಸ್ವಾಗತಿಸಿ ಸನ್ಮಾನಿಸಲು ಕಾತರತೆಯನ್ನು ವ್ಯಕ್ತಪಡಿಸಿದ್ದಾರೆ. “ಕಾಯಕವೇ ಕೈಲಾಸ” ಎಂಬ ಶರಣರ ವಾಣಿಯಂತೆ ನಿರಂತರ ಪರಿಶ್ರಮ, ಛಲ ಮತ್ತು ಪ್ರಾಮಾಣಿಕತೆಯ ಮೂಲಕವೇ ಇಂತಹ ಅಂತಾರಾಷ್ಟ್ರೀಯ ಗೌರವ ಸಿಗುತ್ತದೆ ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಉದ್ಯಮದಲ್ಲಿ ಸಾಧನೆ – ಸಮಾಜದಲ್ಲಿ ಸೇವೆ
ಶ್ರೀ ಪ್ರದೀಪ್ ವಿ.ಎಲಿ ಅವರು ಕೇವಲ ಯಶಸ್ವಿ ಉದ್ಯಮಿಯಷ್ಟೇ ಅಲ್ಲ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ, ಜಿಲ್ಲಾ ಘಟಕ ಶಿವಮೊಗ್ಗದ ಅಧ್ಯಕ್ಷರಾಗಿ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಯುವ ಮುಖಂಡರಾಗಿದ್ದಾರೆ.
ವ್ಯಾಪಾರದಲ್ಲಿ ಯಶಸ್ಸು ಗಳಿಸುವುದು ಒಂದು ಸಾಧನೆ; ಆದರೆ ಆ ಯಶಸ್ಸನ್ನು ಸಮಾಜದ ಒಳಿತಿಗಾಗಿ ಬಳಕೆ ಮಾಡುವುದು ನಿಜವಾದ ಮಹತ್ವದ ಕಾರ್ಯ. ಈ ನಿಟ್ಟಿನಲ್ಲಿ ಪ್ರದೀಪ್ ರವರು ಸಮಾಜದ ಏಳಿಗೆಗೆ ನೀಡುತ್ತಿರುವ ಕೊಡುಗೆ ಅಪಾರವಾಗಿದೆ. ವಿಶೇಷವಾಗಿ ಯುವ ಸಮುದಾಯಕ್ಕೆ ಆತ್ಮವಿಶ್ವಾಸ, ಸ್ವ ಉದ್ಯೋಗ ಮತ್ತು ನಾಯಕತ್ವದ ಪಾಠಗಳನ್ನು ನೀಡುತ್ತಿರುವುದು ಶ್ಲಾಘನೀಯ.

ಶಿವಮೊಗ್ಗ ಜಿಲ್ಲೆಗೆ ಕೀರ್ತಿ
ದುಬೈಯಂತಹ ಜಾಗತಿಕ ನಗರದಲ್ಲಿ ನಡೆಯಲಿರುವ ಈ ಪ್ರಶಸ್ತಿ ಸಮಾರಂಭವು ಶಿವಮೊಗ್ಗ ಜಿಲ್ಲೆಗೆ ವಿಶಿಷ್ಟ ಕೀರ್ತಿಯನ್ನು ತಂದುಕೊಡಲಿದ್ದು, ಅಂತರರಾಷ್ಟ್ರೀಯ ವೇದಿಕೆಯಲ್ಲಿ ಜಿಲ್ಲೆಯ ಹೆಸರನ್ನು ಪ್ರತಿಷ್ಠಿತವಾಗಿ ಎತ್ತಿ ಹಿಡಿಯುವ ಅವಕಾಶವಾಗಲಿದೆ. ಪ್ರದೀಪ್ ವಿ.ಎಲಿ ರವರು ವೀರಶೈವ ಲಿಂಗಾಯತ ಸಮಾಜದ ಹೆಮ್ಮೆಯ ಯುವ ನಾಯಕರೆಂದು ಗುರುತಿಸಿಕೊಂಡಿದ್ದಾರೆ.

ಕೃತಜ್ಞತೆ ಮತ್ತು ಸಂಕಲ್ಪ: ಪ್ರದೀಪ್ ವಿ.ಎಲಿ
ಈ ಗೌರವದ ಸಂದರ್ಭದಲ್ಲಿ ಶ್ರೀ ಪ್ರದೀಪ್ ವಿ.ಎಲಿ ಅವರು ತಮ್ಮ ಯಶಸ್ಸಿಗೆ ಕಾರಣವಾದ ಕುಟುಂಬದವರಿಗೂ, ಗ್ರಾಹಕರಿಗೂ, ಸ್ನೇಹಿತರು ಮತ್ತು ಸಂಘಟನೆಯ ಸಹೋದ್ಯೋಗಿಗಳಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡು ಯುವಕರಿಗೆ ಮಾರ್ಗದರ್ಶನ ನೀಡುವ ಸಂಕಲ್ಪವನ್ನು ವ್ಯಕ್ತಪಡಿಸಿದ್ದಾರೆ.
ಅವರ ಈ ಸಾಧನೆ ಇನ್ನೂ ಅನೇಕ ಯುವಕರಿಗೆ ಪ್ರೇರಣೆಯಾಗಲಿ, ಶಿವಮೊಗ್ಗ ಜಿಲ್ಲೆಗೆ ಮತ್ತಷ್ಟು ಕೀರ್ತಿ ತಂದುಕೊಡಲಿ ಎಂಬುದು ಸಮಾಜದ ಹಾರೈಕೆ. “ವಿಜಯರತ್ನ ಇಂಟರ್‌ನ್ಯಾಷನಲ್ 2026” ಗೌರವವು ಅವರ ಯಶಸ್ವಿ ಪಯಣದ ಮತ್ತೊಂದು ಮಹತ್ವದ ಮೈಲುಗಲ್ಲಾಗಲಿದೆ ಎಂಬುದು ಎಲ್ಲರ ಆಶಯ.

ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಶಿವಮೊಗ್ಗ ಜಿಲ್ಲಾ ಪದಾಧಿಕಾರಿಗಳ ವತಿಯಿಂದ “ವಿಜಯರತ್ನ ಇಂಟರ್‌ನ್ಯಾಷನಲ್ 2026” ಗೌರವಕ್ಕೆ ಆಯ್ಕೆಯಾಗಿರುವ ಶ್ರೀ ಪ್ರದೀಪ್ ವಿ.ಎಲಿ ಅವರಿಗೆ ಶುಭ ಹಾರೈಕೆಗಳನ್ನು ತಿಳಿಸಿದ್ದು. ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅವರು ಶಿವಮೊಗ್ಗ ಜಿಲ್ಲೆಯಷ್ಟೇ ಅಲ್ಲ, ಸಮಸ್ತ ವೀರಶೈವ ಲಿಂಗಾಯತ ಸಮಾಜದ ಹೆಮ್ಮೆಯ ಯುವ ಮುಖಂಡರಾಗಿದ್ದಾರೆ ಎಂದು ಪದಾಧಿಕಾರಿಗಳು ಪ್ರಶಂಸಿಸಿದ್ದಾರೆ.
“ವಿಜಯರತ್ನ ಇಂಟರ್‌ನ್ಯಾಷನಲ್ 2026” ಗೌರವಕ್ಕೆ ಆಯ್ಕೆಯಾಗಿರುವ ಶ್ರೀ ಪ್ರದೀಪ್ ವಿ.ಎಲಿ ಅವರಿಗೆ ನಮ್ಮ ಡಿಟೆಕ್ಟಿವ್ ನ್ಯೂಸ್24 ವತಿಯಿಂದ ಶುಭ ಹಾರೈಕೆಗಳು. ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿ, ಸಮಾಜಮುಖಿ ಕಾರ್ಯಗಳಲ್ಲಿ ಗುರುತಿಸಿಕೊಂಡಿರುವ ಅವರ ಈ ಯಶಸ್ಸು ಇನ್ನಷ್ಟು ಉನ್ನತಿಗೆ ದಾರಿ ಮಾಡಿಕೊಡಲಿ ಹಾಗೂ ಶಿವಮೊಗ್ಗ ಜಿಲ್ಲೆಯ ಕೀರ್ತಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಎತ್ತಿಹಿಡಿಯಲಿ ಎಂಬುದು ನಮ್ಮ ಆಶಯ.








