ಇದು ಸಿನಿಮಾ ಸ್ಟೋರಿಯಲ್ಲ.. ನಿಜವಾದ ಸ್ಟೋರಿ.. ಸಿನಿಮಾದಲ್ಲಿ ನೋಡಿದ ಹಾಗೇ ರಿಯಲ್ ಲೈಫ್ನಲ್ಲಿ ಮಾಡಿದ್ರೆ ಇದೇ ಆಗೋದು.. ಕಳ್ಳರು ಚಾಪೆ ಕೆಳಗೆ ನುಗ್ಗಿದ್ರೆ ಪೊಲೀಸರು ರಂಗೋಲಿ ಕೆಳಗೆ ನುಗ್ಗುತ್ತಾರೆ ಅನ್ನೋದಕ್ಕೆ ಇದೇ ಪ್ರತ್ಯಕ್ಷ ಸಾಕ್ಷಿ. ಇಲ್ಲೊಬ್ಬ ಖತರ್ನಾಕ್ ಖೈದಿ ಇದ್ದಾನೆ. ಈತ ಮಾಡಿರೋ ಕೆಲಸ ಕೇಳಿದ್ರೆ ನಿವೆಲ್ಲಾ ನಿಜಕ್ಕೂ ಶಾಕ್ ಆಗಿ ಹೋಗ್ತೀರಾ.
ಏನಿದು ಕೇಸ್..?
2011ರ ಫೆಬ್ರವರಿ 1ರಂದು ಕೇರಳದಲ್ಲಿ ಸಂಚಲನ ಸೃಷ್ಟಿಸಿದ್ದ ಯುವತಿ ರೇ*ಪ್ ಅಂಡ್ ಮ*ರ್ಡರ್ ಕೇಸ್ನಲ್ಲಿ ಗೋವಿಂದಚಾಮಿ ಅರೆಸ್ಟ್ ಆಗಿದ್ದ. ಎರ್ನಾಕುಲಂನಿಂದ ಶೋರ್ನೂರಿಗೆ ಹೋಗುತ್ತಿದ್ದ ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 23 ವರ್ಷದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಹತ್ಯೆ ಮಾಡಿದ್ದ. ಈ ಪ್ರಕರಣದಲ್ಲಿ ಆರೋಪಿ ಗೋವಿಂದಚಾಮಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.
ಖೈದಿ ಎಸ್ಕೇಪ್ ಆಗಿದ್ದು ಹೇಗೆ?
ಕೇರಳದ ಕಣ್ಣೂರಿನ ಸೆಂಟ್ರಲ್ ಜೈಲಿನಿಂದ ನಿನ್ನೆ ಮಧ್ಯರಾತ್ರಿ 1 ಗಂಟೆ 20ಕ್ಕೆ ಗೋವಿಂದ ಚಾಮಿ ಎಸ್ಕೇಪ್ ಆಗಿದ್ದ. ಕಣ್ಣೂರು ಕೇಂದ್ರ ಕಾರಾಗೃಹದಿಂದ 4 ಕಿ.ಮೀ ದೂರದಲ್ಲಿರುವ ಪಾಳುಬಿದ್ದ ಮನೆಯ ಬಳಿಯ ಬಾವಿಯಲ್ಲಿ ಅಡಗಿ ಕುಳಿತಿದ್ದ. ಜೈಲಿನಿಂದ ಎಸ್ಕೇಪ್ ವಿಚಾರ ತಿಳಿದ ಪೊಲೀಸರು ಡಾಗ್ ಸ್ಕ್ವಾಡ್, ಸುತ್ತ ಮುತ್ತಲಿನ ಸಿಸಿಟಿವಿ ದೃಶ್ಯ ಆಧರಿಸಿ ಕಾರ್ಯಾಚರಣೆ ನಡೆದಿದ್ದರು. ಇದಾದ ಬಳಿಕ ಬೆಳಗ್ಗೆ 10:30ರ ಸುಮಾರಿಗೆ ಬಾವಿಯಲ್ಲಿ ಅಡಗಿ ಕೂತಿದ್ದ ಗೋವಿಂದ ಚಾಮಿಯನ್ನು ಪತ್ತೆ ಹಚ್ಚಿದ ಪೊಲೀಸರು ಮತ್ತೆ ಲಾಕ್ ಮಾಡಿದ್ದಾರೆ.