ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣ; 13 ಕಡೆ ಸ್ಥಳ ಮಹಜರು!

On: July 28, 2025 11:01 PM
Follow Us:

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತುಹಾಕಿರುವ ಬಗ್ಗೆ ಅನಾಮಿಕ ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ, ರಾಜ್ಯ ಸರ್ಕಾರವು ಪ್ರಣವ್ ಮೊಹಾಂತಿ ನೇತೃತ್ವದಲ್ಲಿ ಎಸ್‌ಐಟಿ ರಚಿಸಲಾಗಿದೆ. ವಿಶೇಷ ತನಿಖಾ ತಂಡವು ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಮುಸುಕುಧಾರಿ ದೂರುದಾರನೊಂದಿಗೆ ಮಹಜರು ಕಾರ್ಯವನ್ನು ನಡೆಸಿದೆ. ದೂರುದಾರ ಹೂತು ಹಾಕಿರುವ ಶಂಕಿತ ಸ್ಥಳಗಳನ್ನು ಪರಿಶೀಲನೆ ನಡೆಸಲಾಗಿದೆ. ಜುಲೈ 29 ರಂದು ಮತ್ತಷ್ಟು ತನಿಖೆ ಮುಂದುವರಿಯಲಿದೆ ಎನ್ನಲಾಗಿದೆ.

ಬೆಳ್ತಂಗಡಿ(ದ.ಕ.): ಧರ್ಮಸ್ಥಳ ಗ್ರಾಮದಲ್ಲಿನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಅನಾಮಿಕ ವ್ಯಕ್ತಿ ನೀಡಿದ ದೂರಿನ ಬಳಿಕ ದೇಶದ ಗಮನ ಸೆಳೆದ ಪ್ರಕರಣ ಸೋಮವಾರ ಮತ್ತೊಂದು ತಿರುವು ಪಡೆದುಕೊಂಡಿತು.

ವಿಶೇಷ ತನಿಖಾ ತಂಡ(ಎಸ್‌ಐಟಿ) ಸೋಮವಾರ ಸಂಜೆ 6 ಗಂಟೆ ತನಕ ಧರ್ಮಸ್ಥಳ ಗ್ರಾಮದ ಸುತ್ತಮುತ್ತ ಮಹತ್ವದ ಮಹಜರು ಕಾರ್ಯ ನಡೆಸಿತು. ದೂರುದಾರ ಅನಾಮಿಕ ವ್ಯಕ್ತಿಯನ್ನು ಮುಸುಕುಧಾರಿಯಾಗಿ ಕರೆತಂದ ಎಸ್‌ಐಟಿ ತಂಡ ಬೆಳಗ್ಗಿನಿಂದ ಸಂಜೆಯವರೆಗೂ ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಸುತ್ತಮುತ್ತಲಿನ ಅರಣ್ಯ ಪ್ರದೇಶದ ನಿಗೂಢ ಸ್ಥಳಗಳಿಗೆ ಕರೆದೊಯ್ದು ಮಹಜರು ಕಾರ್ಯ ನಡೆಸಿತು.

ತಾನು ಕೆಲಸ ಮಾಡುತ್ತಿದ್ದ ದಿನಗಳಲ್ಲಿ ನೂರಾರು ಶವಗಳನ್ನು ಖುದ್ದು ಹೂತು ಹಾಕಿದ್ದೇನೆ ಎಂದು ನ್ಯಾಯಾಲಯದ ಎದುರು ಈಗಾಗಲೇ ಹೇಳಿಕೆ ದಾಖಲು ಮಾಡಿರುವ ದೂರುದಾರ ಮಹಜರು ಪ್ರಕ್ರಿಯೆಯಲ್ಲಿಪ್ರಧಾನ ಪಾತ್ರ ವಹಿಸಿದ್ದರು. ಶವ ಹೂತು ಹಾಕಿದ್ದೆನ್ನಲಾದ ಶಂಕಿತ ಪ್ರದೇಶಗಳಲ್ಲಿದೂರುದಾರನ ಸಮ್ಮುಖ ಮಹಜರು ನಡೆಸಿದ ಎಸ್‌ಐಟಿ ಅಧಿಕಾರಿಗಳು, ಸಿಬ್ಬಂದಿ ಆ ಸ್ಥಳದ ಪೂರ್ಣ ಚಿತ್ರಣ ದಾಖಲು ಮಾಡಿಕೊಂಡರು. ಅರಣ್ಯ ಭಾಗದ ಸುಮಾರು 13 ಸ್ಥಳಗಳಲ್ಲಿಮಹಜರು ನಡೆಸಲಾಗಿದೆ ಎಂದು ತಿಳಿದುಬಂದಿದೆ. ಈ ಸ್ಥಳಗಳಲ್ಲಿಬಂದೋಬಸ್‌್ತ ನಿಯೋಜಿಸಲಾಗಿದೆ. ಜು.29ರಂದು ಕೂಡ ಮಹಜರು ಕಾರ್ಯ ಮುಂದುವರಿಯಲಿದೆ ಎಂದು ಹೇಳಲಾಗಿದೆ.

K.M.Sathish Gowda

Join WhatsApp

Join Now

Facebook

Join Now

Leave a Comment