ಧರ್ಮಸ್ಥಳ : ಧರ್ಮಸ್ಥಳದಲ್ಲಿ ನೂರೂರ ಶವಗಳನ್ನು ಹೂತಿಟ್ಟಿರುವುದಾಗಿ ಆರೋಪ ಮಾಡಿದ್ದ ದೂರುದಾರ ಮಹಜರು ವೇಳೆ ಹಲವು ಸಮಾಧಿ ಸ್ಥಳಗಳನ್ನು ಗುರುತಿಸಿದ್ದ. ಇಂದು ಎಸ್ಐಟಿ ಅಧಿಕಾರಿಗಳು ಎಲ್ಲಾ ಕಾನೂನು ಪ್ರಕ್ರಿಯೆ ಮೂಲಕ ಸಮಾಧಿ ಅಗೆದಿದ್ದಾರೆ. ದೂರುದಾರ ಗುರುತಿಸಿದ ಸಮಾಧಿ ಪೈಕಿ ನೇತ್ರಾವತಿ ಸ್ನಾನಘಟ್ಟದ ಪಕ್ಕದಲ್ಲೇ ಗುರುತಿಸಿದ್ದ ಸಮಾಧಿ ಸ್ಥಳ ಅಗೆದಿದ್ದಾರೆ. ಕಾರ್ಮಿಕರ ಮೂಲಕ 4 ಅಡಿ ಅಗೆದ ಬಳಿಕ ಜೆಸಿಬಿ ಮೂಲಕ 8 ಅಡಿ ಅಗೆದರೂ ಯಾವುದೇ ಅಸ್ಥಿಪಂಜರ ಪತ್ತೆಯಾಗಿಲ್ಲ. ಹೀಗಾಗಿ ಮೊದಲ ಸಮಾಧಿ ಸ್ಥಳದ ಕಾರ್ಯಾಚರಣೆ ಅಂತ್ಯಗೊಳಿಸಲಾಗಿದೆ.
ಮುಸುಕುದಾರಿ ದೂರುದಾರ ಸೂಚಿಸಿದ ಮೊದಲ ಸಮಾಧಿ ಸ್ಥಳದಲ್ಲಿ ಬರೋಬ್ಬರಿ 8ಅಡಿ ಆಳ, 15 ಅಡಿ ಅಗಲದಲ್ಲಿ ಸಮಾಧಿ ಅಗೆಯಲಾಗಿದೆ. ಆದರೆ ಯಾವುದೇ ಕಳೇಬರ ಪತ್ತೆಯಾಗಿಲ್ಲ. ಆರಂಭದಲ್ಲಿ ಕಾರ್ಮಿಕರು 4 ಅಡಿ ಆಳ ಅಗೆದಿದ್ದರು. ಕಳೇಬರ ಪತ್ತೆಯಾಗದ ಹಿನ್ನಲೆಯಲ್ಲಿ ಮತ್ತಷ್ಟು ಅಡಿ ಆಳ ಅಗೆಯಲು ದೂರುದಾರ ಸೂಚಿಸಿದ್ದ. ಹೀಗಾಗಿ ಜೆಸಿಬಿ ಮೂಲಕ 8 ಅಡಿ ಆಳ ಸಮಾಧಿ ಅಗೆಯಲಾಗಿದೆ. ಆದರೆ ಕಳೇಬರ ಪತ್ತೆಯಾಗಿಲ್ಲ.
ಮೊದಲ ಸಮಾಧಿ ಕಾರ್ಯಾಚರಣೆ ಅಂತ್ಯಗೊಳಿಸಲಾಗಿದೆ. 6 ಅಡಿಯಲ್ಲಿ ಶವ ಹೂತಿಟ್ಟಿರುವುದಾಗಿ ದೂರುದಾರ ಹೇಳಿದ್ದ. ಆದರೆ 6 ಅಡಿಯಲ್ಲೂ ಸಿಗದ ಕಾರಣ 8 ಅಡಿ ಅಗೆಯಲಾಗಿದೆ. ಕಳೇಬರ ಸಿಗದ ಕಾರಣ ಮೊದಲ ಸಮಾಧಿ ಕಾರ್ಯಾಚರಣೆ ಅಂತ್ಯಗೊಳಿಸಲಾಗಿದೆ. ಇದೀಗ ದೂರುದಾರ ಗುರುತಿಸಿದ 2ನೇ ಸಮಾಧಿ ಸ್ಥಳ ಅಗೆಯುವ ಕಾರ್ಯ ನಾಳೆ ಆರಂಭಗೊಳ್ಳಲಿದೆ.
ಬರಿಗೈಯಲ್ಲಿ ಎಸ್ಐಟಿ ತಂಡ ವಾಪಸ್
ಮೊದಲ ಸಮಾಧಿ ಅಗೆದರೂ ಕಳೇಬರ ಪತ್ತೆಯಾಗದ ಕಾರಣ ಕಾರ್ಯಾಚರಣೆ ಅಂತ್ಯಗೊಳಿಸಿರುವ ಎಸ್ಐಟಿ ತಂಡ ಬರಿಗೈಯಲ್ಲಿ ವಾಪಾಸ್ಸಾಗಿದೆ. ನಾಳೆ ದೂರುದಾರ ಗುರುತಿಸಿದ ಎರಡನೇ ಸಮಾಧಿ ಅಗೆಯುವ ಕಾರ್ಯ ನಡೆಯಲಿದೆ. ಮಳೆ ಹಾಗೂ ಕತ್ತಲಾಗುತ್ತಿರುವ ಕಾರಣ ಕಾರ್ಯಾಚರಣೆ ಅಂತ್ಯಗೊಳಿಸಲಾಗಿದೆ. ನಾಳೆ ಎರಡನೇ ಸಮಾಧಿ ಅಗೆತ ಆರಂಭಗೊಳ್ಳಲಿದೆ. ಎರಡನೇ ಸಮಾಧಿ ಅಗೆಯುವ ಕಾರ್ಯ ಸಂಪೂರ್ಣವಾಗಿ ಜೆಸಿಬಿ ಮೂಲಕ ನಡೆಯಲಿದೆ. ಇಂದು ಮೊದಲ ಸಮಾಧಿಯನ್ನು ಆರಂಭಿಕ 4 ಅಡಿ ಕಾರ್ಮಿಕರು ಅಗೆದಿದ್ದರು. ಆದರೆ ಪತ್ತೆಯಾಗದ ಕಾರಣ ಹಾಗೂ ಮಳೆಯಿಂದ ಕಾರ್ಯಾಚರಣೆ ವಿಳಂಬವಾಗುತ್ತಿರುವ ಕಾರಣ ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಗಿತ್ತು.