ಧರ್ಮಸ್ಥಳದಲ್ಲಿ ಸಾಮೂಹಿಕ ಅಂತ್ಯಕ್ರಿಯೆ ಬಗ್ಗೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು ಒಂದು ದೊಡ್ಡ ಅಸ್ಥಿ ಪಂಜರ ಪತ್ತೆಯಾದ ಆರನೇ ಸ್ಥಳದಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದು, ಅವಶೇಷಗಳ ಸಂಗ್ರಹ ಕಾರ್ಯ ಮುಂದುವರೆದಿದೆ. ಪ್ರಕರಣದ ಪ್ರಾಥಮಿಕ ದೂರುದಾರ ಈ ಜಾಗವನ್ನು ತೋರಿಸಿದ್ದಾರೆ.
ಈ ಪ್ರದೇಶದಲ್ಲಿ ನೂರಾರು ಶವಗಳನ್ನು ಹೂತ್ತಿಟ್ಟ ಆರೋಪ ಕೇಳಿಬಂದಿದೆ. 6ನೇ ಸ್ಥಳದಲ್ಲಿ ನಡೆಸಿದ ಮೃತದೇಹದ ಕುರುಹು ಪತ್ತೆಯಾಗಿದೆ. ಈ ಜಾಗವನ್ನು ಸಂರಕ್ಷಿಸಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ.
ನದಿ ತಟದಲ್ಲಿರುವುದರಿಂದ ನೀರು ಅಥವಾ ಮಳೆಯಿಂದ ಯಾವುದೇ ಹಾನಿಯಾಗದಂತೆ ಮೇಲ್ಭಾಗ ಮತ್ತು ನಾಲ್ಕು ಕಡೆಗಳಲ್ಲಿ ರಕ್ಷಣಾತ್ಮಕ ಶೀಟ್ ಗಳನ್ನು ಅಳವಡಿಸಲಾಗಿದೆ. ಅವಶೇಷಗಳನ್ನು ವಿಶ್ಲೇಷಣೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ನಿರೀಕ್ಷೆಯಿದೆ. ಅವಶೇಷಗಳನ್ನು ತಕ್ಷಣಕ್ಕೆ ಪ್ರಯೋಗಾಲಯಕ್ಕೆ ಕಳುಹಿಸದ ಅಧಿಕಾರಿಗಳು, ವಿಶ್ಲೇಷಣೆಗೆ ಅನುಕೂಲವಾಗುವಂತೆ ಇತರ ಎರಡು ಜಾಗಗಳಲ್ಲಿ ದೊರೆತ ವಸ್ತುಗಳೊಂದಿಗೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ಸಾಧ್ಯತೆಯಿದೆ.