ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕೇಂದ್ರ ರಾಷ್ಟ್ರೀಯ ಮಹಾಮಂಡಳಿ ಸದಸ್ಯರಾಗಿ ಶಿವಮೊಗ್ಗದ ಸಂಸದರಾದ ಬಿವೈ ರಾಘವೇಂದ್ರರವರು ಆಯ್ಕೆಯಾಗಿದ್ದಾರೆ.
ಇದೀಗ ಈ ಸಮುದಾಯದ ನೂತನ ಕೇಂದ್ರ ರಾಷ್ಟ್ರೀಯ ಮಹಾಮಂಡಳಿ ಸದಸ್ಯರಾಗಿ ಶಿವಮೊಗ್ಗದ ಸಂಸರಾದ ಬಿವೈ ರಾಘವೇಂದ್ರರವರು ಆಯ್ಕೆ ಸಮಾಜದ ಒಳಿತು ಮತ್ತು ಸಮೃದ್ಧಿಗಾಗಿ ಮತ್ತಷ್ಟು ಸೇವೆ ಪ್ರೇರಣೆ ನೀಡುವ ಮೂಲಕ ಮಹಾಸಭೆಯ ಪ್ರಾಮುಖ್ಯತೆಯನ್ನು ಹೆಚ್ಚಿಸಲಿದೆ. ಶಿವಮೊಗ್ಗದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಯೋಜನೆಗಳು ಮತ್ತು ಅನುದಾನವನ್ನು ತರುವುದು ಅವರ ವಿಶಿಷ್ಟ ಗುಣಗಳಿಂದ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದು ಇವರಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದವರಿದ್ದಾರೆ. ಹೀಗಾಗಿ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಬಿವೈ ರಾಘವೇಂದ್ರರವರು ಶ್ರಮಿಸಲಿ ಎಂದು ಶುಭ ಹಾರೈಸುವ.