ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಪರಿಶ್ರಮವಿಲ್ಲದೆ ಶ್ರೇಯಸ್ಸು ಸಾಧ್ಯವಿಲ್ಲ: ಶ್ರೀ ರಂಭಾಪುರಿ ಜಗದ್ಗುರುಗಳು

On: January 23, 2026 5:10 PM
Follow Us:

ಸಿಂದಗಿ: ಸಂಸಾರಿಕ ಸಂಪತ್ತಿನ ಹಿಂದೆ ಮಾನವನು ನಿರಂತರ ಹೋರಾಟ ನಡೆಸುತ್ತಿದ್ದರೂ, ಆ ಭೌತಿಕ ಸಂಪತ್ತು ಶಾಶ್ವತವಲ್ಲ. ಆದರೆ ಆತ್ಮಸಂಪತ್ತು ಮಾತ್ರ ಶಾಶ್ವತವಾಗಿದ್ದು, ಅದನ್ನು ಸಾಧಿಸಲು ನಿರಂತರ ಪರಿಶ್ರಮ, ಪ್ರಯತ್ನ ಮತ್ತು ಸಾಧನೆ ಅಗತ್ಯವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಶುಕ್ರವಾರ ನಗರದ ಆದಿಶೇಷ ಸಂಸ್ಥಾನದ ಹಿರೇಮಠದಲ್ಲಿ ನಡೆದ 30ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಡಾ. ಚಂದ್ರಶೇಖರ ಸ್ವಾಮೀಜಿಗಳ 55ನೇ ವರ್ಷದ ಅನುಷ್ಠಾನ ಮಂಗಲ ಸಮಾರಂಭದ ಅಂಗವಾಗಿ ಆಯೋಜಿಸಲಾಗಿದ್ದ ಜನಜಾಗೃತಿ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.

ಮಾನವನ ಬದುಕು ಸುಂದರವಾಗಿ, ಸಮೃದ್ಧವಾಗಿ ರೂಪುಗೊಳ್ಳಲು ದೇವರ ಕರುಣೆಯ ಜೊತೆಗೆ ಸಂಸ್ಕಾರ ಮತ್ತು ಸಂಸ್ಕೃತಿಯ ಬೀಜ ಜೀವನದಲ್ಲಿ ಬಿತ್ತಬೇಕು. ಕಷ್ಟ ಬಂದಿತೆಂದು ಕುಗ್ಗಬಾರದು. ಕತ್ತಲೆ ಸರಿದ ನಂತರ ಬೆಳಕು ಬಂದೇ ಬರುತ್ತದೆ ಎಂಬ ದೃಢ ನಂಬಿಕೆ ಇರಬೇಕು. ದೇವರನ್ನು ಹಾಗೂ ಧರ್ಮವನ್ನು ನಿಂದಿಸುವ ಅಜ್ಞಾನಿಗಳಿಗೆ ಸಹ ದೈವ ಕೃಪೆ ದೊರೆಯುತ್ತದೆ. ಒಳ್ಳೆಯದಕ್ಕೂ ಕೆಟ್ಟದಕ್ಕೂ ಮೂಲ ಕಾರಣ ಮಾನವನ ಮನಸ್ಸೇ ಆಗಿದೆ ಎಂದು ಜಗದ್ಗುರುಗಳು ಹೇಳಿದರು.

ನಿರಂತರ ಪ್ರಯತ್ನ ಮತ್ತು ಸಾಧನೆಯ ಮೂಲಕ ಮನಸ್ಸಿನ ಕಹಿತನವನ್ನು ತೊಡೆದು ಹಾಕಿದಾಗ ಜೀವನ ಸಾರ್ಥಕವಾಗುತ್ತದೆ. ಆತ್ಮಜ್ಞಾನದಿಂದಲೇ ಜೀವನದ ನಿಜವಾದ ವಿಕಾಸ ಸಾಧ್ಯವೆಂದು ಅವರು ಬೋಧಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಜಗದ್ಗುರು ರೇಣುಕಾಚಾರ್ಯರು, ಆದಿಶೇಷ ಹಿರೇಮಠದ ಡಾ. ಚಂದ್ರಶೇಖರಸ್ವಾಮೀಜಿಗಳು ಕಳೆದ 55 ವರ್ಷಗಳಿಂದ ಶಿವಾನುಷ್ಠಾನವನ್ನು ನಿಷ್ಠೆಯಿಂದ ಕೈಗೊಂಡು ಭಕ್ತ ಸಮುದಾಯಕ್ಕೆ ಆಶೀರ್ವಾದ ನೀಡುತ್ತಿರುವುದು ಅತ್ಯಂತ ಸ್ಮರಣೀಯ ಸಂಗತಿ ಎಂದರು. ಪ್ರತಿವರ್ಷವೂ ಆದಿಶೇಷ ಮಠದಲ್ಲಿ ಜಾತ್ರಾ ಮಹೋತ್ಸವವನ್ನು ಶ್ರದ್ಧಾಭಕ್ತಿಯಿಂದ ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಷಯವಾಗಿದ್ದು, ಈ ಬಾರಿ ನಡೆಯುತ್ತಿರುವ 30ನೇ ವರ್ಷದ ಜಾತ್ರಾ ಮಹೋತ್ಸವವು ವಿಶೇಷ ವೈಶಿಷ್ಟ್ಯದಿಂದ ಕೂಡಿದೆ ಎಂದು ತಿಳಿಸಿದರು.

ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಾರಂಗಮಠದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿಗಳು, ಅಸ್ಥಿರ ದೇಹದ ಮೇಲೆ ಅತಿಯಾದ ಆಸೆ ಇಡಬಾರದು. ಶ್ರದ್ಧೆ, ನಿಷ್ಠೆ ಹಾಗೂ ಅನುಭವದ ಮೂಲಕ ಬದುಕನ್ನು ಸದೃಢಗೊಳಿಸಬೇಕು. ಮರಣವು ಮಾನವರಿಗೆ ಮಾತ್ರವಲ್ಲ, ಮಹಾತ್ಮರಿಗೂ ಅನಿವಾರ್ಯ. ಆದ್ದರಿಂದ ಆತ್ಮಜ್ಞಾನವನ್ನು ಸಂಪಾದಿಸಿ ಗುರುಕಾರುಣ್ಯದ ಮಾರ್ಗದಲ್ಲಿ ಸಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜಯೋಗಿ ವೀರಾಜಸ್ವಾಮೀಜಿಗಳು ಮಾತನಾಡಿ, ಮಾನವನು ಯಾವ ಸಂಪತ್ತಿಗಾಗಿ ಜಗತ್ತಿನಲ್ಲಿ ಬದುಕುತ್ತಿದ್ದಾನೋ, ಆ ಸಂಪತ್ತನ್ನು ಸಾಧಿಸಲು ಶ್ರಮಿಸಬೇಕು. ಶಿವನ ನೀಡಿದ ಮಂತ್ರವನ್ನು ಮರೆಯದೆ ಆಚರಿಸಿದರೆ ಇದೇ ಜನ್ಮದಲ್ಲೇ ಮುಕ್ತಿಯನ್ನು ಪಡೆಯಲು ಸಾಧ್ಯ. ಜಗದ್ಗುರು ರೇಣುಕಾಚಾರ್ಯರ ವಿಶ್ವಬಂಧುತ್ವದ ಚಿಂತನೆಗಳು ಸಮಸ್ತ ಸಮಾಜಕ್ಕೆ ದಾರಿದೀಪವಾಗಿವೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಹರಸೂರು ಸಿದ್ಧರಾಮ ಶ್ರೀಗಳು, ಮಳಲಿ ಸಂಸ್ಥಾನದ ಮಠದ ಡಾ. ನಾಗಭೂಷಣ ಶ್ರೀಗಳು, ಕೆಂಭಾವಿ ಚನ್ನಬಸವ ಶ್ರೀಗಳು, ಮಣಗೂಳಿ ಅಭಿನವ ಸಂಗನಬಸವ ಶ್ರೀಗಳು ಉಪಸ್ಥಿತರಿದ್ದು ನುಡಿ ನಮನ ಸಲ್ಲಿಸಿದರು.

ಈ ಪವಿತ್ರ ಸಮಾರಂಭದಲ್ಲಿ ಶಿವಶರಣಪ್ಪ ಸಿರಿ, ಅಶೋಕ್ ವಾರದ, ಮಹೇಶ್ವರಿ ವಾಲಿ ಸೇರಿದಂತೆ ಪ್ರಮುಖ ಅತಿಥಿಗಳು ಭಾಗವಹಿಸಿದ್ದರು. ಗಣ್ಯರು ಹಾಗೂ ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಶುಭಹಾರೈಸಿದರು. ಕುಮಾರಿ ಪೂಜೆಯನ್ನು ನಂದೀಶ ಹಿರೇಮಠ ಹಾಗೂ ಸಿದ್ಧಲಿಂಗಯ್ಯ ಹಿರೇಮಠದವರು ನೆರವೇರಿಸಿದರು. ಕಾರ್ಯಕ್ರಮದ ಅಂತ್ಯದಲ್ಲಿ ಅನ್ನದಾಸೋಹವನ್ನು ಏರ್ಪಡಿಸಲಾಗಿತ್ತು.

K.M.Sathish Gowda

Join WhatsApp

Join Now

Facebook

Join Now

Read more

ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಆಯುರ್ವೇದ ಮಹತ್ವದ ಪಾತ್ರ ವಹಿಸುತ್ತದೆ: ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ

ಹುತಾತ್ಮ ಯೋಧರ ಪತ್ನಿಯ ತ್ಯಾಗವೇ ಶ್ರೇಷ್ಠತೆ: ತರಳಬಾಳು ಜಗದ್ಗುರುಗಳ ಹೃದಯಸ್ಪರ್ಶಿ ಸಂದೇಶ

ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ವೈಯಕ್ತಿಕ–ಕುಟುಂಬ ನಿಂದನೆಗೆ ತೆರೆ ಎಳೆಯಲು ರಾಜಕೀಯ ನಾಯಕರಿಗೆ ಜಗದ್ಗುರುಗಳ ಖಡಕ್ ಸೂಚನೆ,.!

ಬೆಳ್ಳಿ ಪಲ್ಲಕ್ಕಿಯಲ್ಲಿ ಜಗದ್ಗುರುಗಳ ದರ್ಶನ: ಭದ್ರಾವತಿಯಲ್ಲಿ ತರಳಬಾಳು ಹುಣ್ಣಿಮೆಯ ವೈಭವ, ಲಕ್ಷಾಂತರ ಭಕ್ತರ ಸಮಾಗಮ

ತರಳಬಾಳು ಹುಣ್ಣಿಮೆ ಮಹೋತ್ಸವ 2026: ‘ಮನೆಯೊಳಗೆ ಧರ್ಮ, ಹೊರಗೆ ಸಂವಿಧಾನ’ – ನ್ಯಾಯಮೂರ್ತಿ ಶ್ರೀಶಾನಂದ ಸಂದೇಶ

ತರಳಬಾಳು ಹುಣ್ಣಿಮೆ ಮಹೋತ್ಸವ 2026: ಸಮೂಹ ಮಾಧ್ಯಮ ಸಮಾಜದ ದಿಕ್ಕು ನಿರ್ಧರಿಸುವ ಶಕ್ತಿಯಾಗಿದೆ: ಸಿ.ಎಸ್. ಷಡಾಕ್ಷರಿ

Leave a Comment