ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

“ಧರ್ಮದ ನೀತಿ ಸಂಹಿತೆ ಅರಿತು ಬಾಳಿದರೆ ನೆಮ್ಮದಿಯ ಫಲ”: ಶ್ರೀ ರಂಭಾಪುರಿ ಜಗದ್ಗುರುಗಳು

On: February 14, 2026 7:41 PM
Follow Us:

ಕಮಲಾಪುರ, ಫೆ.14: ಸಮೃದ್ಧಿ ಮತ್ತು ಶಾಂತಿ ಸಾಧಿಸಲು ದೈವೀ ಗುಣಗಳ ಅವಶ್ಯಕತೆ ಇದೆ. ಮಾನವ ಜೀವನದಲ್ಲಿ ಮೌಲ್ಯಗಳ ಉಳಿವು ಮತ್ತು ಬೆಳವಣಿಗೆ ಅತ್ಯಂತ ಮುಖ್ಯ. ಧರ್ಮದ ನೀತಿ ಸಂಹಿತೆಯನ್ನು ಅರಿತು, ಆಚಾರದಲ್ಲಿ ಅಳವಡಿಸಿಕೊಂಡು ಬದುಕಿದರೆ ಜೀವನದಲ್ಲಿ ನಿಜವಾದ ನೆಮ್ಮದಿಯ ಫಲ ದೊರೆಯುತ್ತದೆ ಎಂದು ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ತಾಲೂಕಿನ ಭೂಸನಗಿ ಗ್ರಾಮದಲ್ಲಿ ನಡೆದ ಶ್ರೀ ಜಗದ್ಗುರು ರೇವಣಸಿದ್ದೇಶ್ವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಲಶಾರೋಹಣ ಅಂಗವಾಗಿ ಆಯೋಜಿಸಲಾದ ಧರ್ಮ ಜಾಗೃತಿ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ಜೀವನದ ಗುರಿ ಕೇವಲ ಸಂಪತ್ತಿನ ಗಳಿಕೆಯಾಗಿರಬಾರದು. ಭೌತಿಕ ಸಾಧನೆಗಳ ಜೊತೆಗೆ ಶಿವಜ್ಞಾನ ಹಾಗೂ ಗುರು ಕಾರುಣ್ಯವನ್ನು ಪಡೆದು ಬದುಕಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ದೇಹವೇ ದೇವಾಲಯ; ಅದನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕು. ಸತ್ಯ, ಶಾಂತಿ, ದಯೆ, ಧರ್ಮನಿಷ್ಠೆ ಇಂತಹ ದೈವೀ ಗುಣಗಳನ್ನು ಬೆಳೆಸಿಕೊಂಡು ಅಸುರ ಗುಣಗಳನ್ನು ದೂರವಿಡಬೇಕು. ಸಮಾಜದಲ್ಲಿ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಚೇತನೆಯನ್ನು ಬೆಳೆಸಲು ಶ್ರೀ ಜಗದ್ಗುರು ರೇವಣಸಿದ್ದೇಶ್ವರರ ಕೊಡುಗೆ ಅಮೂಲ್ಯವಾಗಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಧ್ಯೇಯ ಸಾಧನೆಗೆ ಆತ್ಮವಿಶ್ವಾಸ ಮತ್ತು ನಿರಂತರ ಪ್ರಯತ್ನ ಅಗತ್ಯ. ಮಾತು, ಮನಸ್ಸು ಮತ್ತು ಕೃತಿ ಒಂದಾಗಿದಾಗ ಜೀವನ ಸಾರ್ಥಕವಾಗುತ್ತದೆ ಎಂದು ತಿಳಿಸಿದರು. ಶರಣ ಪ್ರಕಾಶ ಮುತ್ಯಾ ಅವರು, ಗುರು ಕರುಣೆ ಇಲ್ಲದೆ ಜೀವನ ಉದ್ಧಾರವಾಗದು. ಅಜ್ಞಾನವನ್ನು ದೂರ ಮಾಡಿ ಸುಜ್ಞಾನ ನೀಡುವವರೇ ನಿಜವಾದ ಗುರು. ಶ್ರೀ ಜಗದ್ಗುರು ರೇವಣಸಿದ್ದೇಶ್ವರರ ಲೀಲಾ ಪಾವಾಡುಗಳು ಅನೇಕರ ಜೀವನಕ್ಕೆ ದೀಪವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಉದ್ಘಾಟನೆ ನೆರವೇರಿಸಿ ಮಾತನಾಡಿ, ಶ್ರೀ ಜಗದ್ಗುರು ರೇವಣಸಿದ್ದೇಶ್ವರರು ಜನಪರ ಕಾರ್ಯಗಳ ಮೂಲಕ ಸಮಾಜದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ ಎಂದು ಆಶಿಸಿದರು.

ಈ ಸಮಾರಂಭದಲ್ಲಿ ಮಾಜಿ ಸಚಿವ ಎಸ್.ಕೆ. ಕಾಂತಾ, ಮಾಜಿ ವಿಧಾನಪರಿಷತ್ ಸದಸ್ಯ ಅಮರನಾಥ ಪಾಟೀಲ್, ಶಿವಪ್ರಭು ಪಾಟೀಲ್, ನೀಲಕಂಠರಾವ್ ಎಸ್. ಮೂಲಗೆ, ಸಿ.ಎ. ವೀರಣ್ಣ ಮಾಂತಗೋಳ, ಶಿವಶರಣಪ್ಪ ಸಿರಿ, ಶಿವಕುಮಾರ ಪಸಾರ, ಬಸವರಾಜ ಕಿಟಗಿ, ಗುಂಡೂರಾವ್ ಕಡಣಿ, ಸಿದ್ಧನಗೌಡ ಕೆ.ಮಾಲಿ ಪಾಟೀಲ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಪ್ರಶಸ್ತಿ ಪ್ರದಾನ: ಮಹಾಗಾಂವಿನ ಅಮೃತಪ್ಪ ಮಲ್ಕಪ್ಪಗೋಳ, ಬೀದರಿನ ಸಿದ್ರಾಮಪ್ಪ ಚ.ಬೆಳಕೇರಿ, ಮುತ್ತಂಗಿಯ ಷಣ್ಮುಖಯ್ಯ ಸ್ವಾಮಿ ಮಠಪತಿ, ಜಹೀರಾಬಾದಿನ ದುಳಪ್ಪ ಬೆಳಕೇರಿ, ನಿರ್ನಾದದ ಶ್ರೀನಿವಾಸ ರಾಮರೆಡ್ಡಿ, ಕುಮಸಿಯ ಬಸವರಾಜ ಇರಡಿ, ಅಂಬಲಗಾದ ದಯಾನಂದ ಮರಗುಟ್ಟಿ ಇವರಿಗೆ ಶ್ರೀ ಜಗದ್ಗುರು ರೇವಣಸಿದ್ದೇಶ್ವರ ಭಕ್ತಿ ಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ಶ್ರೀ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವವು ಭಕ್ತಿಭಾವದಿಂದ ನಡೆಯಿತು. ಸಾವಿರಾರು ಭಕ್ತರು ಪಾಲ್ಗೊಂಡು ದರ್ಶನಾಶೀರ್ವಾದ ಪಡೆದರು. ಸಮಾರಂಭದ ಬಳಿಕ ಪರಮೇಶ್ವರ ಮಲ್ಲೇಶಪ್ಪ ಮಾಳಿ ಬಿರಾದಾರ್ ಅವರಿಂದ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು.

K.M.Sathish Gowda

Join WhatsApp

Join Now

Facebook

Join Now

Read more

ಸಂತ ಸೇವಾಲಾಲ್ 287ನೇ ಜಯಂತಿ: ಲಂಬಾಣಿ ಸಮುದಾಯದ ಹಿತಕ್ಕೆ ಕಾಂಗ್ರೆಸ್‌ ಸರ್ಕಾರದ ಕೊಡುಗೆ ಅಪಾರ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಮಠಗಳು ಭಕ್ತಿ ಮಾತ್ರವಲ್ಲ, ವ್ಯಕ್ತಿತ್ವ ನಿರ್ಮಾಣ–ಸಂಸ್ಕಾರ ಕೇಂದ್ರಗಳಾಗಲಿ: ಶ್ರೀ ರಂಭಾಪುರಿ ಜಗದ್ಗುರುಗಳ ಸಂದೇಶ

ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಆಯುರ್ವೇದ ಮಹತ್ವದ ಪಾತ್ರ ವಹಿಸುತ್ತದೆ: ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ

ಹುತಾತ್ಮ ಯೋಧರ ಪತ್ನಿಯ ತ್ಯಾಗವೇ ಶ್ರೇಷ್ಠತೆ: ತರಳಬಾಳು ಜಗದ್ಗುರುಗಳ ಹೃದಯಸ್ಪರ್ಶಿ ಸಂದೇಶ

ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ವೈಯಕ್ತಿಕ–ಕುಟುಂಬ ನಿಂದನೆಗೆ ತೆರೆ ಎಳೆಯಲು ರಾಜಕೀಯ ನಾಯಕರಿಗೆ ಜಗದ್ಗುರುಗಳ ಖಡಕ್ ಸೂಚನೆ,.!

ಬೆಳ್ಳಿ ಪಲ್ಲಕ್ಕಿಯಲ್ಲಿ ಜಗದ್ಗುರುಗಳ ದರ್ಶನ: ಭದ್ರಾವತಿಯಲ್ಲಿ ತರಳಬಾಳು ಹುಣ್ಣಿಮೆಯ ವೈಭವ, ಲಕ್ಷಾಂತರ ಭಕ್ತರ ಸಮಾಗಮ

Leave a Comment