ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಎಲ್ಲಾ ಸಮಾಜಗಳಿಗೆ ನೆರಳು ಹಾಗೂ‌ ಆಶ್ರಯ ನೀಡುವ ಶಕ್ತಿ ವೀರಶೈವ ಲಿಂಗಾಯತ ಸಮಾಜಕ್ಕಿದೆ: ಬಿ.ವೈ ವಿಜಯೇಂದ್ರ

On: March 1, 2026 8:14 PM
Follow Us:

ಬಾಳೆಹೊನ್ನೂರು: ವೀರಶೈವ ಲಿಂಗಾಯತ ಸಮಾಜ‌ ಜಾಗೃತಿಯಾಗಬೇಕಾದ ಅಗತ್ಯವಿದೆ, ಕೆಲವು‌ ದುಷ್ಟ ಶಕ್ತಿಗಳು ಸಮಾಜವನ್ನು‌ ಒಡೆದು ಆಳುವ ನೀತಿಯನ್ನ ಅನುಸರಿಸುತ್ತಿವೆ.‌ ವೀರಶೈವ ಲಿಂಗಾಯತ ಸಮಾಜದ ಎಲ್ಲಾ ಒಳಪಂಗಡಗಳು ವ್ಯತ್ಯಾಸಗಳನ್ನು ಮರೆತು ಒಟ್ಟಾಗಿ, ಒಂದಾಗಿ ಒಟ್ಟುಗೂಡಿ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯವಿದೆ. ಎಲ್ಲಾ ಸಮಾಜಗಳಿಗೆ ನೆರಳು ಹಾಗೂ‌ ಆಶ್ರಯ ನೀಡುವ ಶಕ್ತಿ ವೀರಶೈವ ಲಿಂಗಾಯತ ಸಮಾಜಕ್ಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯೇಂದ್ರ ಹೇಳಿದರು.

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಶ್ರೀ ರಂಭಾಪುರಿ ವೀರ ಸಿಂಹಾಸನ ಮಹಾಸಂಸ್ಥಾನ ಮಠದಲ್ಲಿ ಜರುಗಿದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಮಾಜದ ಏಕತೆ ಇಂದಿನ ಅಗತ್ಯವಾಗಿದ್ದು, ಕೆಲವು ದುಷ್ಟಶಕ್ತಿಗಳು “ಒಡೆದು ಆಳುವ” ನೀತಿಯ ಮೂಲಕ ಸಮಾಜದೊಳಗೆ ಭಿನ್ನಾಭಿಪ್ರಾಯ ಸೃಷ್ಟಿಸಲು ಯತ್ನಿಸುತ್ತಿವೆ. ಇಂತಹ ಸಂದರ್ಭಗಳಲ್ಲಿ ವೀರಶೈವ ಲಿಂಗಾಯತ ಸಮುದಾಯದ ಎಲ್ಲಾ ಒಳಪಂಗಡಗಳು ಪರಸ್ಪರ ಭೇದಾಭೇದಗಳನ್ನು ಮರೆತು ಸಂಘಟಿತ ಶಕ್ತಿಯಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಅವರು ಕರೆ ನೀಡಿದರು.

ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಡಳಿತಾವಧಿಯಲ್ಲಿ ವೀರಶೈವ ಲಿಂಗಾಯತ ಮಠಗಳಷ್ಟೇ ಅಲ್ಲದೆ, ರಾಜ್ಯದ ವಿವಿಧ ಸಮುದಾಯಗಳ ಮಠಮಾನ್ಯಗಳಿಗೆ ಸಮಾನ ಅನುದಾನ ನೀಡಿ ಅವುಗಳ ಆರ್ಥಿಕ ಬಲವರ್ಧನೆಗೆ ಒತ್ತು ನೀಡಲಾಗಿತ್ತು. ಮಠಮಾನ್ಯಗಳು ಅಕ್ಷರದಾಸೋಹ, ಅನ್ನದಾಸೋಹ ಹಾಗೂ ಜ್ಞಾನ ದಾಸೋಹಗಳ ಮೂಲಕ ಸಮಾಜಮುಖಿ ಸೇವೆ ಸಲ್ಲಿಸುತ್ತಿದ್ದು, ಅವುಗಳು ಶಿಕ್ಷಣ ಮತ್ತು ಮೌಲ್ಯಾಧಾರಿತ ಸಮಾಜ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ವಿಜಯೇಂದ್ರ ಪ್ರಶಂಸಿಸಿದರು.

ರಂಭಾಪುರಿ ಶ್ರೀಗಳು ಯಡಿಯೂರಪ್ಪ ಅವರ ರಾಜಕೀಯ ಏರುಪೇರುಗಳ ಸಮಯದಲ್ಲಿ ಧೈರ್ಯ ತುಂಬಿ ಮಾರ್ಗದರ್ಶನ ನೀಡಿದ ವಿಚಾರವನ್ನು ಸ್ಮರಿಸಿದ ಅವರು, ರಾಜಕೀಯ ಜೀವನದ ಆರಂಭಿಕ ಹಂತದಲ್ಲಿರುವ ತಮಗೂ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಶಕ್ತಿ ನೀಡುವಂತೆ ಆಶೀರ್ವಾದ ಕೋರಿ ಮನವಿ ಮಾಡಿದರು.

ಜಗದ್ಗುರುಗಳ ನೇತೃತ್ವದಲ್ಲಿ ಸಮಾಜ ಸುಧಾರಣೆಯ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಶ್ರೀ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನ ಒದಗಿಸಬೇಕೆಂದು ಅವರು ಮನವಿ ಮಾಡಿದರು. ವಿಶೇಷವಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕ್ಷೇತ್ರದ ಮೂಲಸೌಕರ್ಯ ಹಾಗೂ ಧಾರ್ಮಿಕ-ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚಿನ ಬೆಂಬಲ ನೀಡುವಂತೆ ವಿನಂತಿಸಿದರು.

ಈ ಸಂದರ್ಭದಲ್ಲಿ ಪೂಜ್ಯ ಶ್ರೀ ಡಾ. ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮಿಗಳು, ಪೂಜ್ಯ ಶ್ರೀ ಡಾ. ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮಿಗಳು, ಕೇಂದ್ರ ಸಚಿವ ಶ್ರೀ ಪ್ರಹ್ಲಾದ್ ಜೋಷಿ, ಉಪಮುಖ್ಯಮಂತ್ರಿ ಶ್ರೀ ಡಿ.ಕೆ.ಶಿವಕುಮಾರ್ , ಸಚಿವ ಶ್ರೀ ಎಸ್.ಎಸ್.ಮಲ್ಲಿಕಾರ್ಜುನ, ಶಾಸಕ ಶ್ರೀ ರಾಜೇಗೌಡರು, ಪಕ್ಷದ ಹಾಸನ ಜಿಲ್ಲಾಧ್ಯಕ್ಷ ಶ್ರೀ ಸಿದ್ದೇಶ್ ನಾಗೇಂದ್ರ, ಮಾಜಿ ಶಾಸಕ ಶ್ರೀ ಜೀವರಾಜ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು, ಗಣ್ಯರು ಮತ್ತು ಸಮಾಜದ ಮುಖಂಡರು ಭಾಗವಹಿಸಿ ಉತ್ಸವಕ್ಕೆ ವೈಭವ ತುಂಬಿದರು. ಜಯಂತಿ ಹಾಗೂ ಮಹಾರಥೋತ್ಸವವು ಭಕ್ತಿ, ಸಂಸ್ಕೃತಿ ಮತ್ತು ಸಮುದಾಯ ಏಕತೆಯ ಸಂದೇಶ ಸಾರಿದ ಮಹತ್ವದ ಸಮಾರಂಭವಾಗಿ ಗಮನ ಸೆಳೆಯಿತು.

K.M.Sathish Gowda

Join WhatsApp

Join Now

Facebook

Join Now

Read more

ಧರ್ಮ ವೃಕ್ಷದ ತಾಯಿಯಾಗಿ ಶ್ರೀ ಜಗದ್ಗುರು ರೇಣುಕಾಚಾರ್ಯರು: ಶ್ರೀ ರಂಭಾಪುರಿ ಜಗದ್ಗುರು

ಚಿಕ್ಕಮಗಳೂರಿನಲ್ಲಿ ಬಸವತತ್ವ ಸುವರ್ಣ ಮಹೋತ್ಸವ ಸಂಭ್ರಮ; ವೀರಶೈವ ಲಿಂಗಾಯತ ಸಮಾಜ ಒಗ್ಗಟ್ಟಿಗೆ ವಿಜಯೇಂದ್ರ ಕರೆ

🌸 ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವಕ್ಕೆ ತಮ್ಮೆಲ್ಲರಿಗೂ ಸುಸ್ವಾಗತ 🌸

‘ಇಷ್ಟಲಿಂಗ ದೀಕ್ಷೆಗೆ ವರ್ಣ–ವರ್ಗ ಭೇದವಿಲ್ಲ’: ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರುಗಳಿಂದ ಪಶ್ಚಿಮ ಬಂಗಾಳದ ಯುವಕರಿಗೆ ಇಷ್ಟಲಿಂಗ ದೀಕ್ಷೆ

ಅಟ್ಲಾಂಟಿಕ್ ಸಾಗರವನ್ನು ಮೂರು ಸಾವಿರ ಮೈಲು ಏಕಾಂಗಿಯಾಗಿ ದಾಟಿದ ಕನ್ನಡತಿ: ನಾಳೆ ಬೆಂಗಳೂರು ತರಳಬಾಳು ಕೇಂದ್ರದಲ್ಲಿ ‘ತೊರೆಯ ಹಂಬಲ’ ಅಭಿನಂದನಾ ಸಮಾರಂಭ

ಚಿಕ್ಕಮಗಳೂರಿನಲ್ಲಿ ಶ್ರೀ ಬಸವತತ್ವ ಪೀಠದ ಸುವರ್ಣ ಮಹೋತ್ಸವ: 2026ರ ಫೆಬ್ರವರಿ 24ರಿಂದ 28ರವರೆಗೆ ಡಾ. ಬಸವ ಮರುಳಸಿದ್ಧ ಸ್ವಾಮಿಗಳವರ ನೇತೃತ್ವದಲ್ಲಿ ಬಸವತತ್ವ ಸಮಾವೇಶ

Leave a Comment