ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ವಿಶ್ವದಲ್ಲಿ ಪ್ರಧಾನಿ ಮೋದಿಯೇ ನಂ- 1.. ಅಮೆರಿಕ ಅಧ್ಯಕ್ಷ ಟ್ರಂಪ್​ ಅಲ್ಲವೇ ಅಲ್ಲ, 2ನೇ ಸ್ಥಾನದಲ್ಲಿ ಯಾರಿದ್ದಾರೆ?

On: July 26, 2025 5:47 PM
Follow Us:

ಭಾರತದ ಪ್ರಧಾನಿ ಮೋದಿ ಅವರು ಇಂದಿಗೂ ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ನಂಬಿಕಸ್ಥ, ವಿಶ್ವಾಸಾರ್ಹ ಹಾಗೂ ಗ್ಲೋಬಲ್ ಅಪ್ರೂವಲ್ ರೇಟಿಂಗ್​ನಲ್ಲಿ ಟಾಪ್ ಒನ್ ಸ್ಥಾನದಲ್ಲಿರುವ ನಾಯಕರಾಗಿದ್ದಾರೆ. ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆ ನಡೆಸುವ ಸಮೀಕ್ಷೆಯಲ್ಲಿ ಭಾರತದ ಪ್ರಧಾನಿ ಶೇ.75 ರಷ್ಟು ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್ ಹೊಂದಿದ್ದಾರೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಪ್ರಧಾನಿ ಮೋದಿ ಅತಿ ಹೆಚ್ಚಿನ ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್ ಹೊಂದಿರುವ ನಂಬರ್ ಒನ್ ನಾಯಕರಾಗಿದ್ದಾರೆ.

ಬಿಜೆಪಿ ನಾಯಕ ಅಮಿತ್ ಮಾಳವೀಯ ಈ ಬಗ್ಗೆ ಮಾರ್ನಿಂಗ್ ಕನ್ಸಲ್ಟ್​ನ ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್ ಅನ್ನು ಟ್ವೀಟ್ ಮಾಡಿದ್ದಾರೆ. ಮಾರ್ನಿಂಗ್ ಕನ್ಸಲ್ಟ್ 2025ರ ಜುಲೈ 4 ರಿಂದ ಜುಲೈ 10ರವರೆಗೆ ಈ ಸಮೀಕ್ಷೆ ನಡೆಸಿದೆ. ವಿಶ್ವದ ಬೇರೆ ಬೇರೆ ದೇಶಗಳ ನಾಯಕರಿಗೆ ಹೋಲಿಸಿದರೆ ಭಾರತದ ಪ್ರಧಾನಿ ಮೋದಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ.

ಭಾರತದ 100 ಕೋಟಿ ಜನರ ಪ್ರೀತಿ ಗಳಿಸಿರುವ ಹಾಗೂ ಜಗತ್ತಿನ ಮಿಲಿಯನ್ ಗಟ್ಟಲೇ ಜನರ ಗೌರವ ಗಳಿಸಿರುವ ಭಾರತದ ಮೋದಿ ಮಾರ್ನಿಂಗ್ ಕನ್ಸಲ್ಟ್ ಗ್ಲೋಬಲ್ ಲೀಡರ್ ಅಪ್ರೂವಲ್ ಟ್ರ್ಯಾಕರ್​ನಲ್ಲಿ ಮತ್ತೊಮ್ಮೆ ಅತಿ ಹೆಚ್ಚು ರೇಟಿಂಗ್ ಪಡೆದಿದ್ದಾರೆ ಮತ್ತು ಜಗತ್ತಿನ ಅತಿ ಹೆಚ್ಚು ವಿಶ್ವಾಸಾರ್ಹ ನಾಯಕರಾಗಿದ್ದಾರೆ. ಬಲವಾದ ನಾಯಕತ್ವ, ಜಾಗತಿಕ ಗೌರವ, ಭಾರತವು ಸುರಕ್ಷಿತ ಕೈಗಳಲ್ಲಿದೆ ಎಂದು ಬಿಜೆಪಿ ನಾಯಕ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿ ನಂತರದ ಸ್ಥಾನದಲ್ಲಿ ಯಾರಿದ್ದಾರೆ?

ಭಾರತದ ಪ್ರಧಾನಿ ಮೋದಿ ಶೇ.75 ರಷ್ಟು ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್ ಹೊಂದಿದ್ದರೇ, ದಕ್ಷಿಣ ಕೋರಿಯಾದ ಲಿ.ಜೆ ಮಯುಂಗ್ ಶೇ.59 ರಷ್ಟು ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್​​ನಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಇನ್ನೂ ಅರ್ಜೈಂಟೈನಾದ ಜೇವಿಯರ್ ಮಿಲಿ ಶೇ.57 ರಷ್ಟು ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್ ಹೊಂದಿದ್ದಾರೆ. ಇನ್ನೂ ಕೆನಡಾದ ಹೊಸ ಪ್ರಧಾನಿ ಮಾರ್ಕ್ ಕಾರ್ನಿ ಶೇ.56 ರಷ್ಟು ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್ ಹೊಂದಿದ್ದಾರೆ. ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಈ ಱಕಿಂಗ್​ನಲ್ಲಿ 8ನೇ ಸ್ಥಾನದಲ್ಲಿದ್ದಾರೆ. ಡೋನಾಲ್ಡ್ ಟ್ರಂಪ್ ಶೇ.44 ರಷ್ಟು ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್ ಪಡೆದಿದ್ದಾರೆ. ಈ ಸಮೀಕ್ಷೆಯ ಫಲಿತಾಂಶವು ಜಾಗತಿಕ ಮಟ್ಟದಲ್ಲಿ ಪ್ರಧಾನಿ ಮೋದಿ ಜನಪ್ರಿಯತೆ ಹೆಚ್ಚಾಗುತ್ತಿರುವುದನ್ನು ತೋರಿಸುತ್ತೆ. ಜಗತ್ತಿನಲ್ಲಿ ಅತಿ ಹೆಚ್ಚು ಅಪ್ರೂವಲ್ ರೇಟಿಂಗ್ ಹೊಂದಿರುವುದನ್ನು ಮತ್ತೊಮ್ಮೆ ದೃಢಪಡಿಸಿದೆ.

ಮಾರ್ನಿಂಗ್ ಕನ್ಸಲ್ಟ್ , 2021 ರ ಸೆಪ್ಟೆಂಬರ್​ನಿಂದ ಆಗ್ಗಾಗ್ಗೆ ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್ ಟ್ರ್ಯಾಕರ್ ನಡೆಸುತ್ತಿದೆ. 2021ರಲ್ಲಿ ಪ್ರಧಾನಿ ಮೋದಿ ಶೇ.70 ರಷ್ಟು ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್ ಹೊಂದಿದ್ದರು. 2022ರ ಪ್ರಾರಂಭದಲ್ಲಿ ಶೇ.71 ರಷ್ಟು ಅಪ್ರೂವಲ್ ರೇಟಿಂಗ್ ಹೊಂದಿದ್ದರು. ಆಗಲೂ ವಿಶ್ವದ 13 ನಾಯಕರ ಪೈಕಿ ಮೋದಿಯೇ ಟಾಪ್ ಸ್ಥಾನದಲ್ಲಿದ್ದರು. ಈಗ 2025 ರಲ್ಲೂ ಪ್ರಧಾನಿ ಮೋದಿ ಜಾಗತಿಕ ನಾಯಕರ ಪೈಕಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ.

ಪ್ರಧಾನಿ ಮೋದಿ ಹೊಂದಿದ ರೇಟಿಂಗ್ ಎಷ್ಟು?

ಇನ್ನೂ 2023 ರಲ್ಲಿ ಪ್ರಧಾನಿ ಮೋದಿ ಶೇ.76 ರಷ್ಟು ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್ ಹೊಂದಿದ್ದರು. 2024ರ ಫೆಬ್ರವರಿಯಲ್ಲಿ ಪ್ರಧಾನಿ ಮೋದಿ ಶೇ.78 ರಷ್ಟು ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್ ಹೊಂದಿದ್ದರು. ಈಗ 2025ರ ಜುಲೈನಲ್ಲಿ ಮೋದಿ, ಶೇ,75 ರಷ್ಟು ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್ ಹೊಂದಿದ್ದಾರೆ.

ಆದರೇ, ಭಾರತದಲ್ಲಿ 2024ರ ಏಪ್ರಿಲ್- ಮೇ ಲೋಕಸಭಾ ಚುನಾವಣೆಯಲ್ಲಿ ಮೋದಿ ನಾಯಕತ್ವದಲ್ಲೂ ಬಿಜೆಪಿಗೆ 272ರ ಮ್ಯಾಜಿಕ್ ನಂಬರ್ ದಾಟಲು ಸಾಧ್ಯವಾಗಲಿಲ್ಲ. ಈಗ 2024ರ ಲೋಕಸಭಾ ಚುನಾವಣೆಯ ಬಳಿಕ ಜೆಡಿಯು ಹಾಗೂ ಟಿಡಿಪಿ ಬೆಂಬಲದಿಂದಲೇ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಿದೆ. ಈಗ ಕೇಂದ್ರದಲ್ಲಿ ಜೆಡಿಯು, ಟಿಡಿಪಿ ಬೆಂಬಲದಿಂದ ಮೋದಿ ಸರ್ಕಾರ ಮುನ್ನೆಡೆಯುತ್ತಿದೆ ವಿನಃ ಸ್ವಂತ ಬಲದ ಮೇಲೆ ಮೋದಿ ಸರ್ಕಾರ ನಡೆಯುತ್ತಿಲ್ಲ.

K.M.Sathish Gowda

Join WhatsApp

Join Now

Facebook

Join Now

Leave a Comment