ಸಿಡ್ನಿ, :- ಹದಿಹರೆಯದವರ ಮಕ್ಕಳು ಸಾಮಾಜಿಕ ಮಾಧ್ಯಮ ಬಳಸುವುದಕ್ಕೆ ನಿಷೇಧ ಹೇರಿದ್ದ ಆಸ್ಟ್ರೇಲಿಯಾ ಇದೀಗ ಸಾಮಾಜಿಕ ಜಾಲತಾಣದ ಜೊತೆಗೆ “ಯೂಟೂಬ್” ಕೂಡ ನಿಷೇಧಿಸಿದೆ. ಈ ಮೂಲಕ ಹದಿ ಹರೆಯದ ಮಕ್ಕಳನ್ನು ಸಾಮಾಜಿಕ ಜಾಲತಾಣದಿಂದ ಹೊರಗಿಡುವ ಉದ್ದೇಶ ಇದಾಗಿದೆ.
ಆಸ್ಟ್ರೇಲಿಯಾ ಸರ್ಕಾರ ಸಾಮಾಜಿಕ ಜಾಲತಾಔನ್ನು 16 ವರ್ಷದ ಒಳಗಿನ ಮಕ್ಕಳು ಬಳಸುವುದಕ್ಕೆ ನಿಷೇಧ ಹೇರಲಾಗಿದೆ,ಇದೀಗ ಅದರ ಜೊತೆಗೆ ಯೂಟೂಬ್ ಕೂಡ ಸೇರ್ಪಡೆ ಮಾಡಿರುವುದರಿಂದ ಹದಿ ಹರೆಯದ ಮಕ್ಕಳನ್ನು ಸಾಮಾಜಿಕ ಜಾಲತಾಣದಿಂದ ಹೊರಗಿಡುವ ಪ್ರಯತ್ನ ಮಾಡಲಾಗಿದೆ.
ಈಗಾಗಲೇ ಟಿಕ್ ಟಾಕ್ ಇನ್ ಸ್ಟಾ ಗ್ರಾಮ್, ಫೇಸ್ ಬುಕ್, ಸ್ನಾಪ್ ಚಾಟ್ ಬಳಕೆಗೂ ಕೂಡ ನಿಷೇಧ ಹೇರಲಾಗಿದೆ, ಅದರ ಸಾಲಿಗೆ ಯೂ ಟೂಬ್ ಕೂಡ ಸೇರಿಕೊಂಡಿದೆ. ಸಾಮಾಜಿಕ ಜಾಲತಾಣ ನಿಷೇಧ ಮಾಡಿರುವ ಹಿನ್ನೆಲೆಯಲ್ಲಿ ಈ ರೀತಿಯ ಸಾಮಾಜಿಕ ಜಾಲತಾಣ ಬಳಕೆ ಮಾಡುವುದಕ್ಕೆ ಕಡಿವಾಣ ಬೀಳಲಿದೆ.
ಆಸ್ಟ್ರೇಲಿಯಾ ಸರ್ಕಾರದ ಹೊಸ ನೀತಿಯಿಂದಾಗಿ ಹದಿ ಹರೆಯದ ಮಕ್ಕಳು ಸಾಮಾಜಿಕ ಜಾಲತಾಣ ಬಳಕೆ ಮಾಡುವುದನ್ನು ಮತ್ತು ವಿಡಿಯೋ ಅಪ್ ಲೋಡ್ ಮಾಡುವುದಕ್ಕೆ ಅಥವಾ ಯಾವುದೇ ರೀತಿಯ ಸಂವಹನ ನಡೆಸುವುದಕ್ಕೆ ಕಡಿವಾಣ ಬೀಳಲಿದೆ.
ಆಸ್ಟ್ರೇಲಿಯಾದ ಕಾನೂನುಗಳನ್ನು ಜಾಗತಿಕ ನಾಯಕರು ಹೆಚ್ಚಿನ ಆಸಕ್ತಿಯಿಂದ ವೀಕ್ಷಿಸುತ್ತಿದ್ದಾರೆ, ನಾರ್ವೆ ಇದೇ ರೀತಿಯ ನಿಷೇಧವನ್ನು ಘೋಷಿಸಿದೆ ಮತ್ತು ಅಮೇರಿಕಾ ಕೂಡ ಈ ನಿಟ್ಟಿನಲ್ಲಿ ಚಿಂತಿಸಿದೆ ಎಂದು ಹೇಳಲಾಗಿದೆ
ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಪ್ರತಿಕ್ರಿಯೆ ನೀಡಿ, “ಸಾಮಾಜಿಕ ಮಾಧ್ಯಮ ನಮ್ಮ ಮಕ್ಕಳಿಗೆ ಸಾಮಾಜಿಕ ಹಾನಿಯನ್ನುಂಟುಮಾಡುತ್ತಿದೆ. ಆಸ್ಟ್ರೇಲಿಯಾದ ಪೋಷಕರು ನಮಗೆ ಬೆಂಬಲ ನೀಡುತ್ತಾರೆ ಎಂದು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ.
ಆಸ್ಟ್ರೇಲಿಯಾದ ಇ-ಸೇಫ್ಟಿ ಆಯುಕ್ತ ಜೂಲಿ ಇನ್ಮನ್ ಗ್ರಾಂಟ್ ಕಳೆದ ತಿಂಗಳು ಯೂಟ್ಯೂಬ್ ಅನ್ನು ನಿಷೇಧಕ್ಕೆ ಸೇರಿಸಲು ಶಿಫಾರಸು ಮಾಡಿದ್ದರು ಅದಕ್ಕೆ ಸಮ್ಮತಿ ನೀಡಲಾಗಿದೆ. 10 ರಿಂದ 15 ವರ್ಷದ ಮಕ್ಕಳು ಯೂಟೂಬ್ ಬಳಕೆಗೆ ನಿಷೇಧ ಹೇರಲಾಗಿದೆ ಎಂದಿದ್ದಾರೆ.