ಉತ್ತರಾಖಂಡ್ ರಾಜ್ಯದ ಕೇದಾರನಾಥ್ ಕಣಿವೆಯಲ್ಲಿ 2013ರ ಜೂನ್ ತಿಂಗಳಲ್ಲಿ ಧೀಡೀರ್ ಪ್ರವಾಹ ಬಂದಿದ್ದನ್ನು ಜನರು ಮರೆಯಲು ಸಾಧ್ಯವಿಲ್ಲ. ಈಗ ಅಂಥದ್ದೇ ಮತ್ತೊಂದು ಧೀಡೀರ್ ಪ್ರವಾಹ ಉತ್ತರಾಖಂಡ್ ರಾಜ್ಯದ ಉತ್ತರಕಾಶಿ ಜಿಲ್ಲೆಯ ಥರಾಲಿ ಗ್ರಾಮದಲ್ಲಿ ಬಂದಿದೆ. ಮೇಘಸ್ಪೋಟದಿಂದಾಗಿ ಭಾರಿ ಮಳೆ ಸುರಿದಿದೆ. ಇದರಿಂದಾಗಿ ಬೆಟ್ಟದ ಮೇಲ್ಬಾಗದಿಂದ ಧೀಡೀರನೇ ಭಾರಿ ಮಳೆ ನೀರು ಪ್ರವಾಹದಂತೆ, ಮರದ ದಿಮ್ಮಿಗಳ ಜೊತೆ ಹರಿದು ಬಂದಿದೆ. ಇದರಿಂದಾಗಿ ತಗ್ಗು ಪ್ರದೇಶದಲ್ಲಿದ್ದ ಥರಾಲಿ ಗ್ರಾಮದ ದೊಡ್ಡ ದೊಡ್ಡ ಮನೆಗಳೇ ಪ್ರವಾಹಕ್ಕೆ ಸಿಲುಕಿ ನೆಲಕ್ಕುರುಳಿ ಬಿದ್ದಿವೆ. ಮನೆಗಳ ಮೇಲೆ ಪ್ರವಾಹದ ನೀರು ಬಂದಿದೆ. ಧೀಡೀರ್ ಪ್ರವಾಹದ ನೀರಿನ ಹೊಡೆತಕ್ಕೆ ಮನೆಗಳೇ ಕುಸಿದು ಬಿದ್ದಿವೆ. ಥರಾಲಿ ಗ್ರಾಮದ 50 ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರು ಬದುಕುಳಿದಿರುವ ಸಾಧ್ಯತೆಗಳು ಕಡಿಮೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಧರಾಲಿ ಗ್ರಾಮಕ್ಕೆ ಹರಿದು ಬಂದ ಪ್ರವಾಹದ ನೀರು, ಮನೆಗಳು, ಅಂಗಡಿಗಳು ಮತ್ತು ರಸ್ತೆಗಳನ್ನು ಕೊಚ್ಚಿಹಾಕಿದೆ. ಇಡೀ ಊರಿನ ತುಂಬಾ ಬರೀ ಅವಶೇಷಗಳು ಹಾಗೂ ಮಣ್ಣಿನ ಜಾಡನ್ನು ಮಾತ್ರವೇ ಬಿಟ್ಟಿದೆ. ಇದರ ಭೀಕರತೆ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಪ್ರಾಥಮಿಕ ಮಾಹಿತಿಯ ಪ್ರಕಾರ ಕೆಲವು ಹೋಟೆಲ್‌ಗಳು ಮತ್ತು ಹೋಂಸ್ಟೇಗಳು ಪ್ರವಾಹದಲ್ಲಿ ಸಂಪೂರ್ಣವಾಗಿ ನಾಶವಾಗಿವೆ.
0 ರಿಂದ 12 ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿರಬಹುದು ಎಂದು ಸ್ಥಳೀಯರು ಅಂದಾಜಿಸಿದ್ದಾರೆ. ಇದಲ್ಲದೆ, ಬಾರ್ಕೋಟ್ ತೆಹ್ಸಿಲ್‌ನ ಬನಾಲಾ ಪಟ್ಟಿ ಪ್ರದೇಶದಲ್ಲಿ, ಉಕ್ಕಿ ಹರಿಯುತ್ತಿರುವ ಕುಡ್ ಗಧೇರಾ ಹೊಳೆಯಲ್ಲಿ ಸುಮಾರು 18 ಮೇಕೆಗಳು ಕೊಚ್ಚಿ ಹೋಗಿವೆ.
ಆಗಸ್ಟ್ 10 ರವರೆಗೆ ಉತ್ತರಾಖಂಡದಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ, ವಿಶೇಷವಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ತೀವ್ರ ಮಳೆಯಾಗುವ ನಿರೀಕ್ಷೆಯಿದೆ. ಹರ್ಸಿಲ್ ಮತ್ತು ಭಟ್ವಾರಿಯಿಂದ ರಕ್ಷಣಾ ತಂಡಗಳನ್ನು ರವಾನಿಸಲಾಗಿದ್ದು, ಸಿಕ್ಕಿಬಿದ್ದಿರುವವರನ್ನು ಪತ್ತೆ ಹಚ್ಚಲು ಮತ್ತು ಸ್ಥಳಾಂತರಿಸಲು ಪ್ರಯತ್ನಗಳು ನಡೆಯುತ್ತಿವೆ.