ಟಿಯಾನ್ಜಿನ್ (ಚೀನಾ): ಶಾಂಘೈ ಸಹಕಾರ ಸಂಘಟನೆಯ (SCO) ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಜೊತೆ ದ್ವಿಪಕ್ಷೀಯ ಸಭೆ ನಡೆಸಿದರು.
ಪ್ರಧಾನಿ ಮೋದಿ ಮಾತನಾಡಿ, ಈ ಹೆಜ್ಜೆಗಳು 2.8 ಶತಕೋಟಿ ಜನರ ಹಿತಾಸಕ್ತಿಗಳಿಗೆ ಸಂಬಂಧ ಹೊಂದಿದ್ದು, ಮಾನವೀಯತೆಯನ್ನು ಉತ್ತೇಜಿಸುತ್ತವೆ. ಅವರು ಭೇಟಿಯ ವೇಳೆ, ಪರಸ್ಪರ ನಂಬಿಕೆ, ಗೌರವ ಮತ್ತು ಸೂಕ್ಷ್ಮತೆಯ ಆಧಾರದ ಮೇಲೆ ಭಾರತ–ಚೀನಾ ಸಂಬಂಧವನ್ನು ಮುಂದುವರಿಸಲು ಉಭಯ ರಾಷ್ಟ್ರಗಳು ದೃಢನಿಶ್ಚಯ ಹೊಂದಿರುವುದಾಗಿ ಎಂದು ಹೇಳಿದ್ದಾರೆ.
2019 ರ ಗಲ್ವಾನ್ ಸಂಘರ್ಷದ ನಂತರ ಹಳಸಿದ ಭಾರತ–ಚೀನಾ ಸಂಬಂಧ ಪುನರ್ಸ್ಥಾಪನೆ; ವ್ಯಾಪಾರ, ಪ್ರವಾಸಿ ಸೇವೆಗಳು ಮತ್ತು ಮಾನವೀಯ ಸಂಪರ್ಕಗಳು ಮರುಸ್ಥಾಪನೆ
ಪ್ರಮುಖ ಅಂಶಗಳು:
- ಪ್ರಧಾನಮಂತ್ರಿ ನರೇಂದ್ರ ಮೋದಿ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಜೊತೆಗೆ ದ್ವಿಪಕ್ಷೀಯ ಸಭೆ ನಡೆಸಿದರು.
- “ಕೈಲಾಸ–ಮಾನಸ ಸರೋವರ ಯಾತ್ರೆ” ಪುನರಾರಂಭಗೊಂಡಿದೆ.
- ಭಾರತ–ಚೀನಾ ನಡುವಿನ ನೇರ ವಿಮಾನ ಸೇವೆಗಳು ಮರುಪ್ರಾರಂಭ.
- ಭೇಟಿ ವೇಳೆ ಪರಸ್ಪರ ನಂಬಿಕೆ, ಗೌರವ ಮತ್ತು ಸೂಕ್ಷ್ಮತೆಯ ಆಧಾರದ ಮೇಲೆ ಸಂಬಂಧವನ್ನು ಮುಂದುವರಿಸುವುದರಲ್ಲಿ ದೃಢ ನಿಶ್ಚಯ.
ಸಭೆಯಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹಾಜರಿದ್ದರು.