ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ನಮ್ಮ ಮನೆ ಭಾಗ ಮರಳಿ ಪಡೆಯುವುದು ಅಗತ್ಯ: ಮೋಹನ್ ಭಾಗವತ್ ಹೇಳಿಕೆ

On: October 6, 2025 1:36 PM
Follow Us:

ಭೋಪಾಲ್: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ ಅವರು ಪಾಕ್ ಆಕ್ರಮಿತ ಕಾಶ್ಮೀರ (POK) ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. ಮಧ್ಯಪ್ರದೇಶದ ಸತ್ನಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪಿಒಕೆ ಭಾರತ ಎಂಬ ಮನೆಯೊಳಗಿನ ಕೋಣೆ ಎಂದಿದ್ದಾರೆ.

“ಇಲ್ಲಿ ಅನೇಕ ಸಿಂಧಿ ಸಹೋದರರು ಕುಳಿತಿದ್ದಾರೆ. ನನಗೆ ತುಂಬಾ ಸಂತೋಷವಾಗಿದೆ. ಅವರು ಪಾಕಿಸ್ತಾನಕ್ಕೆ ಹೋಗಲಿಲ್ಲ; ಅವಿಭಜಿತ ಭಾರತವನ್ನು ಆಯ್ಕೆ ಮಾಡಿಕೊಂಡರು,” ಎಂದು ಭಾಗವತ್ ಹೇಳಿದರು.

ಭಾರತವನ್ನು ಒಂದು ಮನೆಯಂತೆ ಹೋಲಿಸಿ ಮಾತನಾಡಿದ ಭಾಗವತ್‌ ಅವರು, “ಇಡೀ ಭಾರತ ನಮ್ಮ ಮನೆ. ಆದರೆ ಯಾರೋ ನಮ್ಮ ಮನೆಯ ಒಂದು ಕೋಣೆಯನ್ನು ತೆಗೆದುಕೊಂಡಿದ್ದಾರೆ. ಅಲ್ಲಿ ನನ್ನ ಮೇಜು, ಕುರ್ಚಿ, ಬಟ್ಟೆಗಳು ಇವೆ. ಅವರು ಅದನ್ನು ಆಕ್ರಮಿಸಿಕೊಂಡಿದ್ದಾರೆ. ನಾಳೆ ನಾನು ಅದನ್ನು ಹಿಂದಕ್ಕೆ ಪಡೆಯಬೇಕು,” ಎಂದು ಹೇಳಿದರು. ಈ ಮಾತಿನ ವೇಳೆ ಪ್ರೇಕ್ಷಕರು ಭರ್ಜರಿ ಚಪ್ಪಾಳೆ ತಟ್ಟಿದರು.

ಪಾಕಿಸ್ತಾನಿ ಆಡಳಿತದ ವಿರುದ್ಧ ಪಿಒಕೆಯಲ್ಲಿ ಸ್ಥಳೀಯರು ಬಂಡಾಯ ಎದ್ದಿರುವ ಸಂದರ್ಭದಲ್ಲಿ ಭಾಗವತ್ ಅವರ ಈ ಹೇಳಿಕೆ ಮಹತ್ವ ಪಡೆದಿದೆ.

ಕೆಲ ದಿನಗಳ ಹಿಂದಷ್ಟೇ ಅವರು ಭದ್ರತಾ ಸಾಮರ್ಥ್ಯಗಳನ್ನು ಹೆಚ್ಚಿಸುವ ಅಗತ್ಯದ ಬಗ್ಗೆ ಮಾತಾಡಿದ್ದರು. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಅಂತರರಾಷ್ಟ್ರೀಯ ಪ್ರತಿಕ್ರಿಯೆಯು ಭಾರತದ ಜಾಗತಿಕ ಸ್ನೇಹಸಂಬಂಧಗಳ ನಿಜಸ್ವರೂಪವನ್ನು ತೋರಿಸಿದೆ ಎಂದು ಅವರು ಹೇಳಿದ್ದಾರೆ. “ಇತರ ದೇಶಗಳ ಪ್ರತಿಕ್ರಿಯೆಗಳು ಜಾಗತಿಕ ವೇದಿಕೆಯಲ್ಲಿ ನಮ್ಮ ನಿಜವಾದ ಸ್ನೇಹಿತರನ್ನು ಗುರುತಿಸಲು ಸಹಾಯಮಾಡಿವೆ,” ಎಂದು ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.

ಪಿಒಕೆ ವಿಚಾರದಲ್ಲಿ ಮೋಹನ್ ಭಾಗವತ್ ಅವರ ಹೇಳಿಕೆಯು “ಅದು ನಮ್ಮ ಮನೆಯ ಒಂದು ಕೋಣೆ, ಅದನ್ನು ಮರಳಿ ಪಡೆಯಬೇಕಿದೆ”, ಎಂಬುದಾಗಿ ರಾಷ್ಟ್ರಭಾವನೆಗೆ ಬಲ ತುಂಬಿದೆ.

K.M.Sathish Gowda

Join WhatsApp

Join Now

Facebook

Join Now

Leave a Comment