ಭದ್ರಾವತಿ: ಆನವೇರಿ ಗ್ರಾಮದಲ್ಲಿ ನಡೆದ ಜಾತಿ ನಿಂದನೆ ಹಾಗೂ ಹಲ್ಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ನ್ಯಾಯಾಲಯವು 2 ವರ್ಷಗಳ ಕಠಿಣ ಕಾರಾವಾಸ ಹಾಗೂ ದಂಡ ವಿಧಿಸಿದೆ.
ಪೊಲೀಸ್ ವರದಿ ಪ್ರಕಾರ, ದಿನಾಂಕ 13-11-2022 ರಂದು ಆನವೇರಿ ಗ್ರಾಮದ ತಿಮ್ಮಪ್ಪ ರವರಿಗೆ, ಅದೇ ಗ್ರಾಮದ ರಾಜಪ್ಪ, ಭರತ, ರಂಗನಾಥ ಹಾಗೂ ಹನುಮಂತಪ್ಪ ರವರು ಆಸ್ತಿಯ ವಿಚಾರವಾಗಿ ಜಗಳ ತೆಗೆದು, ಜಾತಿಯ ಹೆಸರು ಹಿಡಿದು ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿ, ಖಾರದ ಪುಡಿ ಎರಚಿ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದರು.
ಈ ಸಂಬಂಧ ಹೊಳೆಹೊನ್ನುರು ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 320/2022, ಕಲಂ 143, 147, 148, 504, 323, 324, 506, 149 ಐಪಿಸಿ ಹಾಗೂ ಎಸ್.ಸಿ/ಎಸ್.ಟಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ಆಗಿನ ಉಪವಿಭಾಗದ ಎಎಸ್‌ಪಿ ಶ್ರೀ ಜಿತೇಂದ್ರ ಕುಮಾರ ದಯಾಮ್ (ಐಪಿಎಸ್) ರವರು ನಡೆಸಿ, ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.
ಸರ್ಕಾರದ ಪರವಾಗಿ ಶ್ರೀಮತಿ ರತ್ನಮ್ಮ ಪಿ., ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದು, ವಿಚಾರಣೆ ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಭದ್ರಾವತಿ ಯಲ್ಲಿ ನಡೆದಿತ್ತು.
ನ್ಯಾಯಾಧೀಶೆ ಶ್ರೀಮತಿ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು 30-10-2025 ರಂದು ತೀರ್ಪು ಪ್ರಕಟಿಸಿ, ಆರೋಪಿತರಾದ
ರಾಜಪ್ಪ ಈ.ಬಿ (51)

ಭರತ್ ಈ.ಆರ್ (20)

ರಂಗನಾಥ್ @ ರಂಗೇಶ್ (34)

ಹನುಮಂತಪ್ಪ ಈ.ಬಿ (53)

ರವರಿಗೆ ತಲಾ 2 ವರ್ಷಗಳ ಕಠಿಣ ಕಾರಾವಾಸ ಹಾಗೂ ₹77,000 ದಂಡ, ತಪ್ಪಿದಲ್ಲಿ 1 ತಿಂಗಳ ಸಾದಾ ಸಜೆ ವಿಧಿಸಿದ್ದಾರೆ.
ಒಟ್ಟು ₹3,08,000 ದಂಡದ ಮೊತ್ತದಿಂದ ಪೀಡಿತ ತಿಮ್ಮಪ್ಪ ರವರಿಗೆ ₹2,00,000 ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.











