ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

‘ಎಕ್ಕ’ ಸಿನಿಮಾ ಗಳಿಕೆ; ಮೊದಲ ದಿನವೇ ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸಿದ ಯುವ

On: July 20, 2025 2:06 PM
Follow Us:

Ekka Movie First Day Collection: ಯುವ ರಾಜಕುಮಾರ್ ಅಭಿನಯದ ‘ಎಕ್ಕ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಮಾಡಿದೆ. ಮೊದಲ ದಿನ ಚಿತ್ರ ಒಳ್ಳೆಯ ಗಳಿಕೆ ಮಾಡಿದೆ. ಇದು ಕನ್ನಡ ಚಿತ್ರರಂಗಕ್ಕೆ ಹೊಸ ಚೈತನ್ಯ ತುಂಬಿದೆ. ಯುವ ಕಲಾವಿದರ ಸಿನಿಮಾ ಆಗಿದ್ದರೂ ಯುವ ರಾಜಕುಮಾರ್ ಅವರ ಅಭಿನಯ ಮತ್ತು ಕಥಾವಸ್ತುವಿನ ಆಕರ್ಷಣೆ ಚಿತ್ರದ ಯಶಸ್ಸಿಗೆ ಕಾರಣವಾಗಿದೆ.

ರಾಜ್​ಕುಮಾರ್ ಕುಟುಂಬದ ಕುಡಿ ಯುವ ರಾಜ್​ಕುಮಾರ್ ಅವರು ‘ಯುವ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಈ ಸಿನಿಮಾ ಸಾಧಾರಣ ಯಶಸ್ಸು ಕಂಡಿತ್ತು. ಈಗ ಅವರು ‘ಎಕ್ಕ’ ಚಿತ್ರದ ಮೂಲಕ ಪ್ರೇಕ್ಷಕರ ಎದುರು ಬಂದಿದ್ದಾರೆ. ಮಾಸ್ ಮನರಂಜನೆ ಹೊಂದಿರುವ ಈ ಚಿತ್ರವು ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸಿದೆ. ಮೊದಲ ದಿನವೇ ಅಬ್ಬರದ ಗಳಿಕೆ ಮಾಡಿರೋ ಸಿನಿಮಾ ಗೆಲ್ಲುವ ಸೂಚನೆ ನೀಡಿದೆ. ಸದ್ಯ ಸೊರಗಿ ಹೋಗಿದ್ದ ಬಾಕ್ಸ್ ಆಫೀಸ್​ಗೆ ಒಂದು ಚೇತರಿಕೆ ನೀಡಿದೆ.

ಕಳೆದ ಆರು ತಿಂಗಳಿಂದ ಕನ್ನಡದಲ್ಲಿ ಅನೇಕ ಸಿನಿಮಾಗಳು ರಿಲೀಸ್ ಆದ ಹೊರತಾಗಿಯೂ ಯಾವ ಚಿತ್ರವೂ ಹೆಚ್ಚು ಗಳಿಕೆ ಮಾಡಿರಲಿಲ್ಲ. ಈ ವರ್ಷದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂದರೆ ಶರಣ್ ನಟನೆಯ ‘ಛೂ ಮಂತರ್’ (5 ಕೋಟಿ ರೂಪಾಯಿ) ಸಿನಿಮಾ. ಈಗ ಈ ದಾಖಲೆಯನ್ನು ‘ಎಕ್ಕ’ ಸಿನಿಮಾ ಮುರಿಯುವ ಸೂಚನೆ ಕೊಟ್ಟಿದೆ.

Sacnilk ವರದಿ ಮಾಡಿರುವ ಪ್ರಕಾರ ‘ಎಕ್ಕ’ ಸಿನಿಮಾ ಮೊದಲ ದಿನ 1.60 ಕೋಟಿ ರೂಪಾಯಿಯಿಂದ 2 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದು ಕೇವಲ ಕನ್ನಡದಲ್ಲಿ ಮಾತ್ರ ರಿಲೀಸ್ ಆದ ಸಿನಿಮಾ. ಹೀಗಾಗಿ, ಈ ಚಿತ್ರಕ್ಕೆ ಅಭೂತಪೂರ್ವ ಸ್ವಾಗತ ಸಿಕ್ಕಿದೆ ಎಂದೇ ಹೇಳಬಹುದು. ಇದೇ ಪ್ರತಿಕ್ರಿಯೆ ಮುಂದುವರಿದರೆ (ಜುಲೈ 19) ಹಾಗೂ (ಜುಲೈ 20) ಸಿನಿಮಾ ಭರ್ಜರಿ ಕಲೆಕ್ಷನ್

ಯುವಕರ ಸಿನಿಮಾ ಎಂದಾಗ ಜನರು ಹೆಚ್ಚು ಥಿಯೇಟರ್​ಗೆ ಬರೋದಿಲ್ಲ, ಸ್ಟಾರ್ ಕಾಸ್ಟ್ ಇದ್ದರೆ ಮಾತ್ರ ಸಿನಿಮಾ ಗೆಲ್ಲೋದು ಎಂಬ ನಂಬಿಕೆಯನ್ನು ಯುವ ಸುಳ್ಳು ಮಾಡಿದ್ದಾರೆ. ಅವರು ‘ಎಕ್ಕ’ ಸಿನಿಮಾದಿಂದ ಪ್ರೇಕ್ಷಕರಿಗೆ ಮಾಸ್ ಮನರಂಜನೆ ನೀಡಿದ್ದಾರೆ. ಈ ಸಿನಿಮಾನ ರೋಹಿತ್ ಪದಕಿ ಅವರು ನಿರ್ದೇಶನ ಮಾಡಿದ್ದಾರೆ. ಕಷ್ಟ ಎಂದು ಹಳ್ಳಿಯಿಂದ ಸಿಟಿಗೆ ಬರೋ ಹುಡುಗನ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ಈ ಚಿತ್ರಕ್ಕೆ ಸಂಜನಾ ಆನಂದ್ ನಾಯಕಿ. ಈ ಸಿನಿಮಾ ಗೆಲವಿಗೆ ತಂಡಕ್ಕೆ ಶುಭ ಕೋರಲಾಗುತ್ತಿದೆ. ಈ ಚಿತ್ರವನ್ನು ಅಶ್ವಿನಿ ಪುನೀತ್ ರಾಜ್​ಕುಮಾರ್, ಕಾರ್ತಿಕ್ ಗೌಡ, ಯೋಗಿ, ಜಯಣ್ಣ ಹಾಗೂ ಭೋಗೇಂದ್ರ ಅವರು ನಿರ್ಮಾಣ ಮಾಡಿದ್ದಾರೆ.

K.M.Sathish Gowda

Join WhatsApp

Join Now

Facebook

Join Now

Leave a Comment