ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಲೋಕಸಭೆಯಲ್ಲಿ ಚುನಾವಣಾ ಸುಧಾರಣೆ ಚರ್ಚೆ : ಅಮಿತ್ ಶಾ–ರಾಹುಲ್ ಗಾಂಧಿ ನಡುವೆ ವಾಗ್ವಾದ

On: December 10, 2025 8:22 PM
Follow Us:

ನವದೆಹಲಿ: ಲೋಕಸಭೆಯಲ್ಲಿ ಚುನಾವಣಾ ಸುಧಾರಣೆಗಳ ಕುರಿತ ಚರ್ಚೆಯ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭಾಷಣದ ವೇಳೆ ಅವರ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಡುವೆ ತೀವ್ರ ವಾಗ್ವಾದ ನಡೆಯಿತು. ಮತದಾರರ ಪಟ್ಟಿಗಳಲ್ಲಿನ ಅಕ್ರಮಗಳ ಕುರಿತು ಪತ್ರಿಕಾಗೋಷ್ಠಿಯಲ್ಲಿ ಚರ್ಚೆ ನಡೆಸಲು ಕಾಂಗ್ರೆಸ್‌ ಸಂಸದರು ಗೃಹ ಸಚಿವರನ್ನು ಸವಾಲು ಮಾಡಿದಾಗ, “ನಾನು ಯಾವ ಕ್ರಮದಲ್ಲಿ ಮಾತನಾಡಬೇಕು ಎಂದು ಯಾರಾದರೂ ಹೇಳುವ ಅಗತ್ಯವಿಲ್ಲ” ಎಂದು ಅಮಿತ್ ಶಾ ತೀವ್ರವಾಗಿ ಪ್ರತಿಕ್ರಿಯಿಸಿದರು.

ಅಮಿತ್ ಶಾ ವಿರೋಧ ಪಕ್ಷದ ಮೇಲೆ ಕಿಡಿಕಾರುತ್ತ, ಮತದಾರರ ಪಟ್ಟಿಗಳಲ್ಲಿನ ಅಕ್ರಮಗಳನ್ನು ಕಾಂಗ್ರೆಸ್‌ ನಾಯಕರು ಎತ್ತಿ ತೋರಿಸುತ್ತಾರೆ, ಆದರೆ ಇದೇ ವಿಷಯದ ‘ವಿಶೇಷ ತೀವ್ರ ಪರಿಷ್ಕರಣೆ (SIR)’ ಕ್ರಮಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ ಎಂದು ಆರೋಪಿಸಿದರು. “ನೀವು ಗೆದ್ದಾಗ ಮತದಾರರ ಪಟ್ಟಿಗಳು ಚೆನ್ನಾಗಿರುತ್ತದೆ, ಹೊಸ ಬಟ್ಟೆ ಧರಿಸಿ ಪ್ರಮಾಣ ವಚನ ಸ್ವೀಕರಿಸುತ್ತೀರಿ. ಆದರೆ ಬಿಹಾರದಲ್ಲಿ ಹೀಗೆಯೇ ಸೋತಾಗ ಮಾತ್ರ ಅಕ್ರಮವಿದೆ ಎಂದು ಆರೋಪಿಸುತ್ತೀರಿ” ಎಂದು ಶಾ ತರಾಟೆಗೆ ತೆಗೆದುಕೊಂಡರು.

ಈ ವರ್ಷದ ಆರಂಭದಲ್ಲಿ, ರಾಹುಲ್ ಗಾಂಧಿ ಮೂರು ಪತ್ರಿಕಾಗೋಷ್ಠಿಗಳನ್ನು ನಡೆಸಿ ಬಿಜೆಪಿ ಹಾಗೂ ಭಾರತೀಯ ಚುನಾವಣಾ ಆಯೋಗ (ECI) ಸೇರಿಕೊಂಡು ಮತಕಳ್ಳತನ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಕರ್ನಾಟಕ, ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳಲ್ಲಿನ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎಂದು ಅವರು ಉದಾಹರಣೆ ನೀಡಿದ್ದರು. ಈ ಪತ್ರಿಕಾಗೋಷ್ಠಿಗಳನ್ನು ಅಮಿತ್ ಶಾ ವ್ಯಂಗ್ಯವಾಡುತ್ತ “ಹೈಡ್ರೋಜನ್ ಬಾಂಬ್” ಎಂದು ಹೇಳಿದರು.

ಇದಕ್ಕೆ ಪ್ರತಿಯಾಗಿ, ಅಮಿತ್ ಶಾ ಕಾಂಗ್ರೆಸ್‌ ಆಡಳಿತದ ಅವಧಿಯಲ್ಲಿ ನಡೆದ ಮೂರು ದೊಡ್ಡ ಮತ ಕಳ್ಳತನದ ಉದಾಹರಣೆಗಳನ್ನು ಉಲ್ಲೇಖಿಸಿದರು. ಸ್ವಾತಂತ್ರ್ಯಾನಂತರ ನಡೆದ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸರ್ದಾರ್ ಪಟೇಲ್‌ ಅವರಿಗೆ 28 ಮತಗಳು ಬಂದಿದ್ದರೂ, ಕೇವಲ 2 ಮತ ಪಡೆದ ಜವಾಹರಲಾಲ್ ನೆಹರು ಪ್ರಧಾನಿಯಾಗಿರುವುದನ್ನು ಮೊದಲ ಉದಾಹರಣೆಯಾಗಿ ಹೇಳಿದರು. ಎರಡನೆಯ ಉದಾಹರಣೆಯಾಗಿ, ನ್ಯಾಯಾಲಯವು ಚುನಾವಣೆಯನ್ನು ಅಮಾನ್ಯಗೊಳಿಸಿದ ನಂತರ ಇಂದಿರಾ ಗಾಂಧಿ ತಮ್ಮ ಅಧಿಕಾರ ಉಳಿಸಿಕೊಳ್ಳಲು ವಿನಾಯಿತಿ ಪಡೆದದ್ದನ್ನೂ ಟೀಕಿಸಿದರು. ಮೂರನೇ ಆರೋಪವಾಗಿ, ಸೋನಿಯಾ ಗಾಂಧಿ ಭಾರತೀಯ ನಾಗರಿಕರಾಗುವ ಮೊದಲು ಮತ ಚಲಾಯಿಸಿದ್ದರೆಂದು ಶಾ ಆರೋಪಿಸಿದರು.

ಚುನಾವಣೆ ವ್ಯವಸ್ಥೆ, ಮತದಾರರ ಪಟ್ಟಿಗಳ ನಿಖರತೆ ಹಾಗೂ ಡಿಜಿಟಲ್ ವೋಟರ್ ಐಡಿ ಪದ್ಧತಿಯ ಕುರಿತಂತೆ ನಡೆಯುತ್ತಿರುವ ಚರ್ಚೆಗೆ ಈ ವಾಗ್ವಾದ ಹೊಸ ತಿರುವು ಪಡೆದುಕೊಂಡಿದೆ.

K.M.Sathish Gowda

Join WhatsApp

Join Now

Facebook

Join Now

Leave a Comment